‘ರಾಜ್ ಕಪ್​’ನಲ್ಲಿ ಡಾಲಿ ಧನಂಜಯ ಟೀಂ ಹೇಗಿದೆ ನೋಡಿ; ಅನಾವರಣವಾಯ್ತು ಜೆರ್ಸಿ

| Updated By: ರಾಜೇಶ್ ದುಗ್ಗುಮನೆ

Updated on: Jun 02, 2022 | 6:46 PM

ಡಾಲಿ ಧನಂಜಯ ಅವರು ಒಂದು ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ತಂಡದ ಜೆರ್ಸಿ ಅನಾವರಣ ಜೂನ್​ 1ರಂದು ನಡೆಯಿತು. ರಾಘವೇಂದ್ರ ರಾಜ್​ಕುಮಾರ್ ಅವರು ಜೆರ್ಸಿ ಅನಾವರಣ ಮಾಡಿದರು.

ಸ್ಯಾಂಡಲ್​ವುಡ್​ನ ಕಲಾವಿದರು, ತಂತ್ರಜ್ಞರೆಲ್ಲ ಸೇರಿ ‘ರಾಜ್ ​ಕಪ್’​ ಕ್ರಿಕೆಟ್​ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಇದಕ್ಕೆ ಕ್ಷಣಗಣನೆ ಆರಂಭವಾಗಿದೆ. ವಿವಿಧ ಟೀಂಗಳನ್ನು ಮಾಡಿಕೊಂಡು ಮ್ಯಾಚ್​ಗಳನ್ನು ಆಡಲಾಗುತ್ತಿದೆ. ಡಾಲಿ ಧನಂಜಯ ಅವರು ಒಂದು ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ತಂಡದ ಜೆರ್ಸಿ ಅನಾವರಣ ಜೂನ್​ 1ರಂದು ನಡೆಯಿತು. ರಾಘವೇಂದ್ರ ರಾಜ್​ಕುಮಾರ್ ಅವರು(Raghavendra Rajkumar) ಜೆರ್ಸಿ ಅನಾವರಣ ಮಾಡಿದರು. ಆ ಬಳಿಕ ಮಾತನಾಡಿದ ಧನಂಜಯ, ‘ನಾನು ಇದೇ ಮೊದಲ ಬಾರಿ ರಾಜ್​ ಕಪ್​ ಆಡುತ್ತಿದ್ದೇನೆ. ಜೀವನದಲ್ಲಿ ಈವರೆಗೆ ಲೆದರ್​ ಬಾಲ್​ ಮುಟ್ಟಿಯೇ ಇರಲಿಲ್ಲ’ ಎಂದಿದ್ದಾರೆ ಅವರು. ಇತ್ತೀಚೆಗೆ ಧನಂಜಯ (Dhananjay ) ಅವರು ಕ್ರಿಕೆಟ್ ಪ್ರ್ಯಾಕ್ಟೀಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Jun 02, 2022 01:58 PM