ಸಾವಿರದ ಲೆಕ್ಕದಲ್ಲಿ ರಸ್ತೆ ಗುಂಡಿ ಲೆಕ್ಕ ಕೊಟ್ಟ ಬಿಬಿಎಂಪಿ ಹೊಸ ಕಮಿಷನರ್, ಲಕ್ಷಕ್ಕೂ ಅಧಿಕ ಗುಂಡಿ ತೋರಿಸ್ತೀವಿ ಎನ್ನುತ್ತಿರುವ ನಾಗರಿಕರು! ಮುಂದೆ? ಡಿಜಿಟಲ್ ಲೈವ್ನಲ್ಲಿ ಚರ್ಚೆ
ಬಿಬಿಎಂಪಿಗೆ ಕಮಿಷನರ್ ಆಗಿ ಹೊಸದಾಗಿ ಯಾರೇ ಬರಲಿ, ಅವರು ಹೇಳುವ ಮೊದಲ ಮಾತು ಮಳೆ ಮತ್ತು ಗುಂಡಿ. ಹೊಸ ಕಮಿಷನರ್ ತುಷಾರ್ ಅವರೂ ಲೆಕ್ಕ ಹಾಕಿದವರಂತೆ ಬೆಂಗಳೂರಿನಲ್ಲಿ ಬರೋಬ್ಬರಿ 10,000 ಗುಂಡಿಗಳಿವೆ ಎಂದು ಹೇಳಿದ್ದಾರೆ. ಬನ್ನೀ ಸಾ ಸಾವಿರ ಅಲ್ಲ; ಲಕ್ಷಣಗಳ ಲೆಕ್ಕದಲ್ಲಿ ಗುಂಡಿಗಳನ್ನು ತೋರಿಸುತ್ತೇವೆ ಎನ್ನುತ್ತಾರೆ ನಮ್ಮ ರಾಜಧಾನಿ ಮಂದಿ.
ಗುಂಡಿ ರಾಜಕೀಯ… ಇದು ಬಿಬಿಎಂಪಿ ಅಧಿಕಾರಿಗಳ ಗಂಡಾಗುಂಡಿಯೇ ಸರಿ. ಇದರ ವಿರುದ್ಧ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶರೇ ಛೀಮಾರಿ ಹಾಕಿದ್ದಾರೆ. ಇಂದಲ್ಲ, ಎರಡಲ್ಲ… ಹಲವು ಬಾರಿ! ಆದರೆ ಫಲಿತಾಂಶ ಮಾತ್ರ ಬೆಂಗಳೂರು ರಸ್ತೆಗಳಲ್ಲಿ ನಿತ್ಯನೂತನವಾಗಿ ಕಂಡುಬರುವ ಗುಂಡಿಗಳಂತೆ ಶೂನ್ಯಾಕಾರದ್ದು! ಇನ್ನು ರಾಜಧಾನಿ ಮಂದಿ ಸಹ ಇದಕ್ಕೇ ಅಡ್ಜಸ್ಟ್ ಆಗಿಬಿಟ್ಟಿದ್ದಾರೆ. ಆದರೆ ಅನಾಹುತ ನಡೆದಾಗ ಜೀವ ಝಲ್ಲೆನ್ನುತ್ತದೆ. ಹಾಗಂತ ಎಮ್ಮೆ ಚರ್ಮದ ಬಿಬಿಎಂಪಿ ಅಧಿಕಾರಿಗಳು ಇದರ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಂತ ರಾಜಧಾನಿ ಬೆಂಗಳೂರಿನ ನಾಗರಿಕರು ಇದನ್ನೆಲ್ಲಾ ಸಹಿಸಿಕೊಂಡು, ಹೊಂಡಗಳನ್ನು ದಾಟಿಕೊಂಡು ಜೀವನ ಸಾಗಿಸಬೇಕಾ? ಇದಕ್ಕೆಲ್ಲ ಕೊನೆ ಯಾವಾಗ?
ಇನ್ನು ಬಿಬಿಎಂಪಿಗೆ ಕಮಿಷನರ್ ಆಗಿ ಹೊಸದಾಗಿ ಯಾರೇ ಬರಲಿ, ಅವರು ಹೇಳುವ ಮೊದಲ ಮಾತು ಮಳೆ ಮತ್ತು ಗುಂಡಿ. ಹೊಸ ಕಮಿಷನರ್ ತುಷಾರ್ ಅವರೂ ಲೆಕ್ಕ ಹಾಕಿದವರಂತೆ ಬೆಂಗಳೂರಿನಲ್ಲಿ ಬರೋಬ್ಬರಿ 10,000 ಗುಂಡಿಗಳಿವೆ ಎಂದು ಹೇಳಿದ್ದಾರೆ. ಬನ್ನೀ ಸಾ ಸಾವಿರ ಅಲ್ಲ; ಲಕ್ಷಣಗಳ ಲೆಕ್ಕದಲ್ಲಿ ಗುಂಡಿಗಳನ್ನು ತೋರಿಸುತ್ತೇವೆ ಎನ್ನುತ್ತಾರೆ ನಮ್ಮ ರಾಜಧಾನಿ ಮಂದಿ. ಅಷ್ಟಕ್ಕೂ ಬೆಂಗಳೂರಿನಲ್ಲಿರುವ ಗುಂಡಿಗಳ ಲೆಕ್ಕ ಇಷ್ಟು ಬೇಗ ಹೇಗೆ ಸಿಕ್ಕಿತು? ಈ ಗುಂಡಿ ಮುಚ್ಚಿದರೆ ಮತ್ತೆ ಒಂದು ವಾರದೊಳಗೆ ಹೊಸ ಗುಂಡಿಗಳು ಏಳುವ ಸಾಧ್ಯತೆಯಿಲ್ಲವೇ? ಹಾಗಾಗಿ ಗುಂಡಿ ಮುಚ್ಚುವ ಕೆಲಸದ ಹಿಂದೆ ನಾಗರಿಕರಿಗೆ ಒಳ್ಳೆಯ ರಸ್ತೆ ಸೌಲಭ್ಯ ನೀಡುವ ಸಾಧ್ಯತೆ ಇದೆಯೇ? ಅಥವಾ ಮತ್ತೆ ಹಳೆ ಕಲ್ಲು -ಹೊಸ ಬಿಲ್ಲು ಮಾತಿನ ತರಹ ಗೋಲ್ಮಾಲ್ ಆಗುವ ಸಾಧ್ಯತೆ ಇದೆಯೇ? ಇನ್ನೇನು ಮಳೆಗಾಲ ಕಾಲಿಟ್ಟಾಯಿತು. ಮತ್ತೆ ಈ ವಿಷಯದ ಬಗ್ಗೆ ಚರ್ಚೆ ಮಾಡೋಣಾ ಬನ್ನೀ
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಈ ಕುರಿತಾದ ಚರ್ಚೆಯನ್ನು ಆ್ಯಂಕರ್ ಚಂದ್ರಮೋಹನ್ ಇಂದಿನ ಡಿಜಿಟಲ್ ಲೈವ್ನಲ್ಲಿ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ. TV 9 Kannada Digital Live
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ