ರಾಜ್ ಕಪ್: ನಿರ್ದೇಶಕ ತರುಣ್ ಸುಧೀರ್ ತಂಡದ ಲೋಗೋದಲ್ಲಿರುವ 4 ಸಿಂಹಗಳು ಯಾರು?
ತರುಣ್ ಸುಧೀರ್ ಅವರು ತಮ್ಮ ತಂಡದ ಬಗ್ಗೆ ವಿವರಿಸಿದರು. ಲೋಗೋದಲ್ಲಿರುವ ಸಿಂಹಗಳ ಬಗ್ಗೆಯೂ ಅವರು ತಿಳಿಸಿದರು.
ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳೆಲ್ಲರೂ ಕ್ರೀಡೆಯ ಸಲುವಾಗಿ ಒಂದಾಗಿದ್ದಾರೆ. ‘ರಾಜ್ ಕಪ್’ (Raj Cup) ಟೂರ್ನಿಯಲ್ಲಿ ಸ್ಯಾಂಡಲ್ವುಡ್ ಕಲಾವಿದರು ಹಣಾಹಣಿ ನಡೆಸಲಿದ್ದಾರೆ. ವಿವಿಧ ನಟರನ್ನು ಒಳಗೊಂಡ 8 ಟೀಮ್ಗಳ ಹೆಸರನ್ನು ಅನೌನ್ ಮಾಡಲಾಗಿದೆ. ಆ ತಂಡಗಳ ಲೋಗೋ ಮತ್ತು ಜರ್ಸಿ ಕೂಡ ಬಿಡುಗಡೆ ಆಗಿವೆ. ಈ ಸಮಾರಂಭ ಅದ್ದೂರಿಯಾಗಿ ನಡೆದಿದೆ. ನಿರೂಪಕ ನಿರಂಜನ್ ಕೇಳಿದ ಪ್ರಶ್ನೆಗಳಿಗೆ ನಿರ್ದೇಶಕ ತರುಣ್ ಸುಧೀರ್ (Tharun Sudhir) ಅವರು ಉತ್ತರ ನೀಡಿದ್ದಾರೆ. ವೇದಿಕೆಯಲ್ಲಿ ಅವರಿಗೆ ನಟ ಶರಣ್ (Sharan) ಕೂಡ ಜೊತೆಯಾಗಿದ್ದಾರೆ. ಈ ವೇಳೆ ತರುಣ್ ಸುಧೀರ್ ಅವರು ತಮ್ಮ ತಂಡದ ಬಗ್ಗೆ ವಿವರಿಸಿದರು. ಲೋಗೋದಲ್ಲಿ ಕಾಣುವ ಮೂರು ಸಿಂಹಗಳ ಅರ್ಥ ಏನು? ಕಾಣದೇ ಇರುವ ಇನ್ನೊಂದು ಸಿಂಹ ಯಾವುದು ಎಂಬುದನ್ನು ಕೂಡ ಅವರು ತಿಳಿಸಿದ್ದಾರೆ. ರಾಜ್ ಕಪ್ ಟೂರ್ನಿಯಲ್ಲಿ ಡಿಎಸ್ ಮ್ಯಾಕ್ಸ್ ಲಯನ್ಸ್ ತಂಡವನ್ನು ಅವರು ಮುನ್ನಡೆಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.