ಯುಕೆಪಿ ಮತ್ತು ಇತರ ನೀರಾವರಿ ಯೋಜನೆಗಳಿಗೆ ರಾಜಾ ವೆಂಕಟಪ್ಪ ನಾಯಕ್ ಮುತುವರ್ಜಿಯಿಂದ ಕೆಲಸ ಮಾಡಿದ್ದರು: ಮಲ್ಲಿಕಾರ್ಜುನ ಖರ್ಗೆ
ಸುಮಾರು 5-6 ದಶಕಗಳಿಂದ ತನಗೆ ರಾಜಾ ವೆಂಕಟಪ್ಪ ನಾಯಕ್ ಕುಟುಂಬದೊಂದಿಗೆ ಒಡನಾಟವಿದೆ. ಅವರ ತಂದೆಯೂ ತಮ್ಮೊಂದಿಗೆ ಕೆಲಸ ಮಾಡಿದ್ದರು ಎಂದ ಖರ್ಗೆ, ವೆಂಕಟಪ್ಪ ನಾಯಕ್ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಪರಿಶ್ರಮವಹಿಸಿ ಕೆಲಸ ಮಾಡಿದ್ದರು ಅಂತ ಹೇಳಿದರು.
ಯಾದಗಿರಿ: ಸುರಪುರದ ಕಾಂಗ್ರೆಸ್ ಶಾಸಕ ಮತ್ತು ವೇರ್ ಹೌಸಿಂಗ್ ಕಾರ್ಪೋರೇಷನ್ ಅಧ್ಯಕ್ಷರಾಗಿದ್ದ ರಾಜಾ ವೆಂಕಟಪ್ಪ ನಾಯಕ್ (Raja Venkatappa Nayak) ಅವರ ಅಂತ್ಯ ಸಂಸ್ಕಾರದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ (AICC president) ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಭಾಗಿಯಾಗಿದ್ದರು. ಅಂತಿಮ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಖರ್ಗೆ ಅವರು, ನಾಯಕ್ ಕುಟುಂಬದೊಂದಿಗೆ ತಮಗಿದ್ದ ಒಡನಾಟವನ್ನು ಹಂಚಿಕೊಂಡರು. ಸುಮಾರು 5-6 ದಶಕಗಳಿಂದ ತನಗೆ ರಾಜಾ ವೆಂಕಟಪ್ಪ ನಾಯಕ್ ಕುಟುಂಬದೊಂದಿಗೆ ಒಡನಾಟವಿದೆ. ಅವರ ತಂದೆಯೂ ತಮ್ಮೊಂದಿಗೆ ಕೆಲಸ ಮಾಡಿದ್ದರು ಎಂದ ಖರ್ಗೆ, ವೆಂಕಟಪ್ಪ ನಾಯಕ್ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಪರಿಶ್ರಮವಹಿಸಿ ಕೆಲಸ ಮಾಡಿದ್ದರು, ಕೃಷ್ಣ ಮೇಲ್ದಂಡೆ ಯೋಜನೆ ಮತ್ತು ಇತರ ನೀರಾವರಿ ಯೋಜನೆಗಳಿಗೆ ಅತ್ಯಂತ ಮುತುವರ್ಜಿಯಿಂದ ಕೆಲಸ ಮಾಡಿದ್ದ ಮುಖಂಡ ನಮ್ಮಿಂದ ಕಣ್ಮರೆಯಾಗಿದ್ದಾರೆ ಎಂದು ಖರ್ಗೆ ಹೇಳಿದರು. ಅವರ ಸಾವು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾಗದ ನಷ್ಟ ಎಂದ ಖರ್ಗೆ, ಅವರನ್ನು ಕಳೆದುಕೊಂಡ ದುಃಖ ಸಹಿಸುವ ಶಕ್ತಿ ಭಗವಂತ ಕುಟುಂಬದ ಸದಸ್ಯರಿಗೆ ನೀಡಲಿ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ