ಸಂವಿಧಾನ ಬದಲಾವಣೆ ಮಾಡಬೇಕೆಂದು ಸಾಕಷ್ಟು ಜನರಿಂದ ಸಂಚು ನಡೀತಿದೆ: ಮಲ್ಲಿಕಾರ್ಜುನ ಖರ್ಗೆ ಕಿಡಿ
ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಷ್ಟ್ರೀಯ ಐಕ್ಯತಾ ಸಮಾವೇಶದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂವಿಧಾನ ಬದಲಾವಣೆ ಮಾಡಬೇಕೆಂದು ಸಾಕಷ್ಟು ಜನರು ಪ್ರಯತ್ನ ಮಾಡುತ್ತಿದ್ದಾರೆ. ಸಂವಿಧಾನಕ್ಕೆ ತಿಲಾಂಜಲಿ ಹಾಡಬೇಕು ಅಂತ ಒಳಗಿಂದಲೇ ಪ್ರಯತ್ನ ನಡೆದಿದೆ ಎಂದು ಕಿಡಿಕಾರಿದ್ದಾರೆ. ಕೇಂದ್ರದಲ್ಲಿ ಸಂವಿಧಾನ ಬಗ್ಗೆ ಕಾಳಜಿ ಇಟ್ಟುಕೊಂಡಿರುವ ಸರ್ಕಾರ ಇಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರು, ಫೆಬ್ರವರಿ 25: ಕೇಂದ್ರದಲ್ಲಿ ಸಂವಿಧಾನ ಬಗ್ಗೆ ಕಾಳಜಿ ಇಟ್ಟುಕೊಂಡಿರುವ ಸರ್ಕಾರ ಇಲ್ಲ. ಸಂವಿಧಾನ ಬದಲಾವಣೆ ಮಾಡಬೇಕೆಂದು ಸಾಕಷ್ಟು ಜನರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕಿಡಿಕಾರಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ರಾಷ್ಟ್ರೀಯ ಐಕ್ಯತಾ ಸಮಾವೇಶದಲ್ಲಿ ಮಾತನಾಡಿದ ಅವರು, ಸಂವಿಧಾನಕ್ಕೆ ತಿಲಾಂಜಲಿ ಹಾಡಬೇಕು ಅಂತ ಒಳಗಿಂದಲೇ ಪ್ರಯತ್ನ ನಡೆದಿದೆ. ಕೆಲವು ಜನರು ನಮ್ಮೊಳಗೆ ಜಗಳ ಹಚ್ಚಬೇಕು ಅಂತಾ ಹೊರಟಿದ್ದಾರೆ. ಇಡಿ ದುರುಪಯೋಗ ಆಗುತ್ತಿದೆ. ಶಾಸಕರನ್ನು ಖರೀದಿ ಮಾಡುತ್ತಿದ್ದಾರೆ. ರಾಜ್ಯಗಳನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲೂ ಈ ಕೆಲಸ ಆಗಿದೆ. ಇದರಿಂದ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಹೊಡೆತ ಬೀಳುತ್ತಿದೆ ಎಂದು ಹೇಳಿದ್ದಾರೆ.
ಸಂವಿಧಾನ ಉಳಿದರೆ ದೇಶದಲ್ಲಿ ಐಕ್ಯತೆ ಉಳಿಯುತ್ತೆ
ಇದೇ ಚಟ ಮುಂದುವರಿದರೆ ಡಿಕ್ಟೇಟರ್‌ಶಿಪ್ ಬಂದೇ ಬರುತ್ತದೆ. ಎಲ್ಲಿ ಪ್ರಜ್ಞಾವಂತರು ಇದ್ದಾರೋ ಅಲ್ಲಿ ಪ್ರಜಾಪ್ರಭುತ್ವ ಉಳಿದಿದೆ. ಡಿಕ್ಟೇಟರ್‌ಶಿಪ್ ಬಂದರೆ ಅನೇಕ ದೇಶಗಳಲ್ಲಿ ಯಾರೂ ಕೇಳುವವರಿಲ್ಲ. ಸಂವಿಧಾನ ಉಳಿದರೆ ದೇಶದಲ್ಲಿ ಐಕ್ಯತೆ ಉಳಿಯುತ್ತದೆ. ಪ್ರಜಾಪ್ರಭುತ್ವ ಉಳಿದರೆ ಎಲ್ಲರೂ ಸುಖ, ಸಂಭ್ರಮದಿಂದ ಬಾಳುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಇಂದಿರಾ ಬಿಟ್ಟರೆ ಯಾರೂ ಗಂಡಸರಿಲ್ಲ ಅನ್ನೋ ಮಾತಿತ್ತು: ಸಿಎಂ ಕೋಲೆ ಬಸವ ಹೇಳಿಕೆಗೆ ಜಗದೀಶ್ ಶೆಟ್ಟರ್ ತಿರುಗೇಟು
ಸಂವಿಧಾನದ ಪ್ರಕಾರವೇ ನಾವೆಲ್ಲರೂ ನಡೆದುಕೊಳ್ಳಬೇಕು. ಈ ಹಿಂದೆ ಹೆಚ್ಚು ಮಕ್ಕಳಿಗೆ ವೋಟಿಂಗ್ ಕೊಡುವ ಅಧಿಕಾರ ಇರಲಿಲ್ಲ. ವೋಟ್ ಪವರ್ ಕೊಟ್ಟಿದ್ದು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ನೆಹರು ಎಂದರು.
ನೀವು ಸ್ವಾತಂತ್ರ್ಯ ಕಳೆದುಕೊಂಡರೆ ಮತ್ತೆ ಪಡೆದುಕೊಳ್ಳುವುದಕ್ಕೆ ಆಗಲ್ಲ ಅಂತ ಅಂಬೇಡ್ಕರ್ ಹೇಳುತ್ತಾರೆ. ಕೊನೆ ಹನಿ ರಕ್ತದವರೆಗೆ ಸಂವಿಧಾನಕ್ಕಾಗಿ ಹೋರಾಡಬೇಕು ಅಂತ ಅಂಬೇಡ್ಕರ್ ಹೇಳಿದ್ದರು. ಮೋದಿ ರಕ್ತ ಹೀರುವವರಿದ್ದಾರೆ. ಆ ಜನರಿಗೆ ನೀರು, ಊಟ, ವಿದ್ಯಾಭ್ಯಾಸ ಕೊಡುವುದಿಲ್ಲ. ನಮ್ಮದು ಗ್ಯಾರೆಂಟಿ, ನಿನ್ನದ್ಯಾವುದಪ್ಪ ಗ್ಯಾರೆಂಟಿ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಶೋಭಾ ಕರಂದ್ಲಾಜೆ ಬೆನ್ನಿಗೆ ನಿಂತ ಬಿಎಸ್ವೈ: ಟಿಕೆಟ್ ಕನ್ಫರ್ಮ್, ಸಿಟಿ ರವಿಗೆ ಶಾಕ್
ಬಿಜೆಪಿ ಸರ್ಕಾರದ ಗ್ಯಾರೆಂಟಿ, ರಾಜ್ಯ ಸರ್ಕಾರದ ಗ್ಯಾರೆಂಟಿ ಅಂತ ಹೇಳಬೇಕು. ಅದು ಬಿಟ್ಟು ಮೋದಿ ಗ್ಯಾರೆಂಟಿ ಅಂತ ಹೇಳುತ್ತಿದ್ದಾರೆ. ಮೋದಿ ಮೈ ಮೈ ಅಂತ ಯಾವಾಗಲೂ ಹೇಳುತ್ತಿರುತ್ತಾರೆ. ಹೀಗಾದರೆ ಡಿಕ್ಟೇಟರ್ ಶಿಪ್ ನತ್ತ ದೇಶ ಹೋಗುತ್ತೆ. ಸಂವಿಧಾನ ರಾಜೇಂದ್ರ ಪ್ರಸಾದ್ಗೆ ಅಂಬೇಡ್ಕರ್ ಹೇಳಿದ್ದರು ಸಂವಿಧಾನವನ್ನ ಧರ್ಮದತ್ತ ಕೊಂಡೊಯ್ಯಬಾರದು ಅಂತ. ಸಂವಿಧಾನ ಬರೆಯದೇ ಹೋಗದಿದ್ದರೆ ಏನು ಆಗುತ್ತಿತ್ತು?
ಇಡಿಒ ದೇಶದ ಜನರಿಗೆ ಮೂಲಭೂತ ಹಕ್ಕು ಇದೆ. ಆರ್ಟಿಕಲ್ 14,19, 30, 33 ಇರುವುದು ಕೇವಲ ದಲಿತರಿಗೆ ಮಾತ್ರವಲ್ಲ, ಎಲ್ಲರಿಗೂ ಇದೆ. ದೇಶದ 140 ಕೋಟಿ ಜನರಿಗೆ ಈ ಸಂವಿಧಾನ ಅನುಕೂಲ ಆಗುತ್ತೆ. ಕೆಲವರಿಗೆ ಬೈಬಲ್, ಕುರಾನ್, ಪ್ರೀತಿ ಇರಬಹುದು. ಇಡೀ ಮನುಷ್ಯರನ್ನಾಗಿ ಮಾಡಿದ್ದು ಈ ಸಂವಿಧಾನ. ಶರೀರದ ಕೊನೆ ರಕ್ತದ ಹನಿ ಇರುವವರೆಗೂ ಹೋರಾಟ ಮಾಡಬೇಕು ಅಂತ ಅಂಬೇಡ್ಕರ್ ಹೇಳಿದ್ದಾರೆ. ನೀವೆಲ್ಲ ಹುಷಾರಾಗಿ ಇರಬೇಕು, ಜಾಗೃತರಾಗಿರಬೇಕು. ಮನೆಮನೆಗೂ ಸಂವಿಧಾನದ ಬಗ್ಗೆ ತಿಳಿಸಬೇಕು. ಇಲ್ಲವಾದರೆ ಐದು ವರ್ಷಗಳ ಹಿಂದಿನ ಜೀವನಕ್ಕೆ ಹೋಗಬೇಕಾಗುತ್ತೆ ಎಂದು ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.