ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನ: ತಮ್ಮ ಕುಟುಂಬದ ಜತೆಗಿನ 60 ವರ್ಷದ ಒಡನಾಟ ಹಂಚಿಕೊಂಡ ಖರ್ಗೆ
ಯಾದಗಿರಿಯ ಸುರಪುರ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಇಂದು ಹೃದಯಾಘಾತದಿಂದ ನಿಧನ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಆಸ್ಪತ್ರೆಗೆ ತೆರಳಿ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ತಮ್ಮ ಕುಟುಂಬದ ಜತೆಗಿನ 60 ವರ್ಷದ ಒಡನಾಟದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹಂಚಿಕೊಂಡಿದ್ದಾರೆ.
ಬೆಂಗಳೂರು, ಫೆಬ್ರವರಿ 25: ಯಾದಗಿರಿಯ ಸುರಪುರ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ (Raja Venkatappa Nayaka) ಇಂದು ಹೃದಯಾಘಾತದಿಂದ ನಿಧನ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಆಸ್ಪತ್ರೆಗೆ ತೆರಳಿ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಬಳಿಕ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ವೈಯಕ್ತಿಕವಾಗಿ ನನಗೆ ಮತ್ತು ನಮ್ಮ ಕುಟುಂಬದವರಿಗೆ ಹಿನ್ನಡೆ. 50 ರಿಂದ 60 ವರ್ಷದ ನಮ್ಮ ಕುಟುಂಬದ ಜೊತೆ ಒಡನಾಟ ಹೊಂದಿದ್ದರು. ವಯಸ್ಸಲ್ಲಿ 30 ರಷ್ಟು ವ್ಯತ್ಯಾಸ ಇದೆ. ಆದರು ನನ್ನನ್ನು ಚಿಕ್ಕವನು ಎಂದು ಭಾವಿಸಿಲ್ಲ. ನಾನು ರಾಜಕೀಯವಾಗಿ ಮೊದಲು ಪಾದಾರ್ಪಣೆ ಮಾಡಿದ್ದೆ. ಆಗ ನಮಗೆ ಸಾಕಷ್ಟು ಗೌರವ ನೀಡಿದ್ದರು. ಮೆರವಣಿಗೆ ಮೂಲಕ ಕರೆದುಕೊಂಡು ಹೋಗಿದ್ದರು. ಅವರು ನನಗೆ ರಾಜಕೀಯವಾಗಿ ಸ್ಫೂರ್ತಿ ನೀಡಿದವರು ಎಂದು ಹೇಳಿದ್ದಾರೆ.
ಬಹಳ ಸಮೀಪ ಇದ್ದವರು ಬಿಟ್ಟು ಹೋಗಿದ್ದಾರೆ. ಪಕ್ಷ ಸೇರಿದಂತೆ ನಮ್ಮ ಭಾಗದ ಜನರು ಆಸ್ತಿ ಕಳೆದುಕೊಂಡಂತೆ ಆಗಿದೆ. ಅವರದ್ದು ಬಹಳ ದೊಡ್ಡ ಕುಟುಂಬ. ರಾಜರ ಮನೆತನದಿಂದ ಬಂದರು ಸ್ತೀ ಸಾಮಾನ್ಯರ ಜೊತೆಗೆ ಬೆರೆತಿದ್ದರು. ಸಮಾಜದ ಏಳಿಗೆಗಾಗಿ ಪರಿಶ್ರಮ ಮಾಡಿದ್ದ ಕುಟುಂಬ. ನಮ್ಮ ಭಾಗದ ಜನರಿಗೆ ಅವರ ಕೊಡಗೆ ಅಪಾರ ಎಂದರು.
ರಾತ್ರಿ ಆ್ಯಂಬುಲೆನ್ಸ್ನಲ್ಲಿ ಮೃತದೇಹ ಸುರಪುರಕ್ಕೆ ಕೊಂಡೊಯ್ಯಲಾಗುತ್ತೆ. ನಾಳೆ ಸುರಪುರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಕಳೆದ 15 ದಿನದಿಂದ ಆರೋಗ್ಯ ಹದಗೆಟ್ಟಿತ್ತು. ರಾಜ್ಯಸಭಾ ಚುನಾವಣೆ ಬಗ್ಗೆ ಕೇಳಿದ್ದರು. ಹೆಬ್ಬೆಟ್ಟು ಕೂಡ ಹಾಕಿದ್ದರು. ನಿನ್ನೆ ಸಿಎಂ ಬಂದಿದ್ದಾಗ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಇವತ್ತು ಕಾರ್ಡಿಯಾಕ್ ಅರೆಸ್ಟ್ ಆಗಿ ಮೃತಪಟ್ಟಿದ್ದಾರೆ. ರಾಜ್ಯ ಸರ್ಕಾರದಿಂದ ಗೌರವ ಸಲ್ಲಿಸಲಾಗುತ್ತೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಸಂತಾಪ
ಅಂತಿಮ ದರ್ಶನ ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ, ಬಹಳ ಸಂಭಾವಿತ ರಾಜಕಾರಣಿ. ಕ್ಷೇತ್ರದ ಅಭಿವೃದ್ಧಿ, ಜನರ ಸಮಸ್ಯೆಗಳ ಬಗ್ಗೆಯೇ ಹೆಚ್ಚೆಚ್ಚು ಕಾಳಜಿ ವಹಿಸಿದ್ದರು. ಸೋತಾಗಲೂ ಜನರ ನಡುವೆಯೇ ಇದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ವೇರ್ ಹೌಸಿಂಗ್ ಕಾರ್ಪೊರೇಷನ್ ಅಧ್ಯಕ್ಷರಾಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎನ್ನುವ ಬೇಸರ ನನಗಿದೆ. ಮೊನ್ನೆ ಸ್ವಲ್ಪ ಗುಣಮುಖರಾಗುತ್ತಿದ್ದರು. ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎನ್ನುವ ನಿರೀಕ್ಷೆ ಇರಲಿಲ್ಲ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: Raja Venkatappa Nayaka: ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನ
ಶಾಸಕರ ನಿಧನದ ಹಿನ್ನೆಲೆಯಲ್ಲಿ ಸೋಮವಾರದ ಅಧಿವೇಶನವನ್ನು ಸಂತಾಪ ಸೂಚಕವಾಗಿ ಒಂದು ದಿನ ಮುಂದೂಡಲಾಗುವುದು. ಮಂಗಳವಾರ ರಾಜ್ಯಸಭಾ ಚುನಾವಣೆ ಇರುವುದರಿಂದ ಬುಧವಾರಕ್ಕೆ ಅಧಿವೇಶನ ಮುಂದೂಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ನನ್ನ ಜೀವನದ ಅಪರೂಪದ ದುಖಃದ ಘಟನೆ ಎಂದ ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ನನ್ನ ಜೀವನದ ಅಪರೂಪದ ದುಖಃದ ಘಟನೆ. ನಾನು ಸೋಮಶೇಖರ್, ಎಸಿ ಶ್ರೀನಿವಾಸ್ ಎಲ್ಲರು ಮೂರ್ನಾಲ್ಕು ದಿನದ ಹಿಂದೆ ಬಂದಿದ್ದೇವು. ಐಸಿಯುನಿಂದ ಜನರಲ್ ವಾರ್ಡ್ಗೆ ಶಿಫ್ಟ್ ಆಗಿದ್ದರು. ಪೇಪರ್ ತಗೊಂಡು ಹೇಗಿದ್ದೀರಾ ಅಂತಾ ಬರೆದಿದ್ದರು. ರಾಜ್ಯಸಭಾ ಚುನಾವಣೆಗೆ ಬರ್ತಿನಿ ಅಂತಾ ಹೇಳಿದ್ದರು. ಆರೋಗ್ಯವಂತರಾಗುತ್ತಾರೆ ಅನ್ಕೊಂಡಿದ್ದೆ. ಕೆಲವು ಘಂಟೆ ಕಾಲ ಕಳೆದಿದ್ದೇವು. ಇವತ್ತು ಮಧ್ಯಾಹ್ನ ಅವರು ಸಾವನ್ನಪ್ಪಿದ್ದಾರೆ ಎಂದಿದ್ದಾರೆ.
ಪಾರ್ಲಿಮೆಂಟ್ಗೆ ಇವರೇ ಬೆಸ್ಟ್ ಕ್ಯಾಂಡಿಡೇಟ್ ಅಂತಾ ಅನ್ಕೊಂಡಿದ್ದೆ. ವಿಧಿ ಲೀಲೆ ಇವರು ರಾಜ ವಂಶಸ್ಥರು ಇವರು ಯಾರಿಗೂ ಮನಸ್ಸು ನೋಯಿಸಿರಲಿಲ್ಲ. ಪಾಳೆಗಾರ ವಾಲ್ಮೀಕಿ ಕುಟುಂಬದವರು. ನಮ್ಮ ಆತ್ಮೀಯ ಸ್ನೇಹಿತ ಕೂಡ ಆಗಿದ್ದರು. ಭಗವಂತನ ಲೀಲೆಗೆ ನಾವ್ಯಾರು ಪ್ರಶ್ನೆ ಮಾಡಕ್ಕೆ ಆಗೋದಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.