TV9 Exclusive: ಟಿವಿ9 ವೇದಿಕೆಯಲ್ಲಿ ಮುಕ್ತವಾಗಿ ಅನೇಕ ರಾಜಕೀಯ ವಿಚಾರಗಳನ್ನು ಹಂಚಿಕೊಂಡ ಯಡಿಯೂರಪ್ಪ

|

Updated on: Feb 26, 2023 | 3:22 PM

ಟಿವಿ9ನ ರಾಜಾಹುಲಿ ಮುಕ್ತ ಮಾತು ಎಂಬ ಕಾರ್ಯಕ್ರಮದಲ್ಲಿ ಬಿಎಸ್ ಯಡಿಯೂರಪ್ಪನವರು ಅನೇಕ ವಿಚಾರಗಳ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.

ಯಾರು ಏನೇ ಒತ್ತಡ ಮಾಡಿದ್ರೂ ನಾನು ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ ಎಂದು ಟಿವಿ9 ಸಂದರ್ಶನದಲ್ಲಿ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ತಿಳಿಸಿದ್ದಾರೆ. ಟಿವಿ9ನ ರಾಜಾಹುಲಿ ಮುಕ್ತ ಮಾತು ಎಂಬ ಕಾರ್ಯಕ್ರಮದಲ್ಲಿ ಬಿಎಸ್ ಯಡಿಯೂರಪ್ಪನವರು ಅನೇಕ ವಿಚಾರಗಳ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.

ನಾನು ಯಾವುದೇ ಒತ್ತಡ ಇಲ್ಲದೇ ಸಿಎಂ ರಾಜೀನಾಮೆ ಕೊಟ್ಟೆ. ಯಡಿಯೂರಪ್ಪ ಇಲ್ಲದೆ ಚುನಾವಣೆ ಮಾಡೋ ಪ್ರಶ್ನೆ ಬರಲ್ಲ. ಮೊದಲು ಹೇಗೆ ಕೆಲಸ ಮಾಡಿದ್ದೇನೆ ಹಾಗೇಯೇ ಮಾಡುತ್ತೇನೆ. ಮೋದಿ, ಅಮಿತ್​ ಶಾ ನಾಯಕತ್ವದಲ್ಲಿ ಕೆಲಸ ಮಾಡುತ್ತೇನೆ. ಬೇರೆಯವರಿಗೆ ಅವಕಾಶ ಕೊಡೋಕೆ ರಾಜೀನಾಮೆ ಕೊಟ್ಟಿದ್ದೇನೆ. ಸಿಎಂ ಸ್ಥಾನಕ್ಕೆ & ಚುನಾವಣಾ ರಾಜಕೀಯಕ್ಕೆ ರಿಸೈನ್ ಕೊಟ್ಟಿದ್ದೇನೆ ಎಂದಿದ್ದಾರೆ.

Published on: Feb 26, 2023 03:22 PM