ರಾಜಣ್ಣರನ್ನು ಸಂಪುಟಕ್ಕೆ ವಾಪಸ್ಸು ಕರೆಸಿಕೊಳ್ಳಲು ಆಗ್ರಹಿಸಿ ಬೆಂಬಲಿಗರಿಂದ ದೆಹಲಿಯಲ್ಲಿ ಹೋರಾಟಕ್ಕೆ ತಯಾರಿ

Updated on: Aug 29, 2025 | 11:03 AM

ಹೋರಾಟದ ರೂಪುರೇಷೆಗಳನ್ನು ಅಂತಿಮಗೊಳಿಸಲು ರಾಜಣ್ಣ ಬೆಂಬಲಿಗರು ಸಭೆಗಳನ್ನು ನಡೆಸುತ್ತಿದ್ದಾರೆ ಮತ್ತು ಈಗಾಗಲೇ ಒಂದು ಸಭೆ ನಡೆದಿದೆ ಇನ್ನೆರಡು ಸಭೆಗಳನ್ನು ನಡೆಸುವುದು ಬಾಕಿಯಿದೆ. ಮಾಧ್ಯಮಗಳೊಂದಿಗೆ ಮಾತಾಡಿರುವ ಕೆಲ ಅಭಿಮಾನಿಗಳು, ಬೇರೆ ಜಿಲ್ಲೆಯವರು ಸಹ ತಮ್ಮೊಂದಿಗೆ ಕೈ ಜೋಡಿಸಲು ತಯಾರಾಗಿದ್ದಾರೆ, ದೆಹಲಿಗೆ ರೈಲುಗಾಡಿಯಲ್ಲಿ ಹೋಗಬೇಕೆಂಬ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

ತುಮಕೂರು, ಆಗಸ್ಟ್ 29: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಹಿಂದುಳಿದ ವರ್ಗಗಳ (backward communities) ಅಗ್ರನಾಯಕರೆನಿಸಿಕೊಂಡಿರುವ ಮಧುಗಿರಿ ಶಾಸಕ ಕೆಎನ್ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿ ವಾರಗಳೇ ಕಳೆದರೂ ಅವರ ಅಭಿಮಾನಿ ಮತ್ತು ಬೆಂಬಲಿಗರಲ್ಲಿ ಅಸಮಾಧಾನದ ಹೊಗೆ ಆರಿಲ್ಲ. ಅವರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಮಧುಗಿರಿ ಮತ್ತು ತುಮಕೂರಿನ ರಾಜಣ್ಣ ಅಭಿಮಾನಿಗಳು ದೆಹಲಿಗೆ ಹೋಗಿ ಜಂತರ್ ಮಂತರ್ ನಲ್ಲಿ ಅರೆಬೆತ್ತಲೆ ಮತ್ತು ಉಪವಾಸ ಸತ್ಯಾಗ್ರಹ ಮಾಡಲು ತಯಾರಾಗುತ್ತಿದ್ದಾರೆ. ಸುಮಾರು ಎಂಟ್ಹತ್ತು ಸಾವಿರ ಅಭಿಮಾನಿಗಳು ದೆಹಲಿಗೆ ಹೋಗಲು ರೆಡಿಯಾಗಿದ್ದಾರೆ. ರಾಜಣ್ಣ ಅವರಿಗಾಗಿ ತಾವು ಯಾವುದೇ ಹೋರಾಟಕ್ಕೆ ಸಿದ್ಧ ಎಂದು ಬೆಂಬಲಿಗರು ಹೇಳುತ್ತಾರೆ.

ಇದನ್ನೂ ಓದಿ:  ಶಿವಕುಮಾರ್ ಮೇಲೆ ವೃಥಾ ಆರೋಪ ಬೇಡ, ರಾಜಣ್ಣರೊಂದಿಗೆ ಅವರಿಗೆ ಉತ್ತಮ ಬಾಂಧವ್ಯವಿದೆ: ಇಕ್ಬಾಲ್ ಹುಸ್ಸೇನ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ