‘ಸ್ನೇಹಿತ್ ನನ್ನ ಮಗನ ಕಾರನ್ನು ಅಡ್ಡಗಟ್ಟಿದ್ದು ನಿಜ’; ರಜತ್ ಗೌಡ ತಾಯಿ ಆರೋಪ
‘ಸ್ನೇಹಿತ್ ಚಿನ್ನದಂಥ ಹುಡುಗ. ಆತನ ತಪ್ಪಿಲ್ಲ’ ಎಂದು ಹೇಳಿದ್ದರು. ಈ ಬೆನ್ನಲ್ಲೇ ರಜತ್ ಗೌಡ ಅವರ ತಾಯಿ ಮಂಜುಳಾ ಸ್ಪಷ್ಟನೆ ನೀಡಿದ್ದಾರೆ.
ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagadeesh) ಹಾಗೂ ರೇಖಾ ಜಗದೀಶ್ ಪುತ್ರ ಸ್ನೇಹಿತ್ ವಿಚಾರ ಸಾಕಷ್ಟು ಹೈಲೈಟ್ ಆಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಜಗದೀಶ್ ಹಾಗೂ ರೇಖಾ ಸ್ಪಷ್ಟನೆ ನೀಡಿದ್ದರು. ‘ಸ್ನೇಹಿತ್ ಚಿನ್ನದಂಥ ಹುಡುಗ. ಆತನ ತಪ್ಪಿಲ್ಲ’ ಎಂದು ಹೇಳಿದ್ದರು. ಈ ಬೆನ್ನಲ್ಲೇ ರಜತ್ ಗೌಡ ಅವರ ತಾಯಿ ಮಂಜುಳಾ ಸ್ಪಷ್ಟನೆ ನೀಡಿದ್ದಾರೆ. ‘ಸ್ನೇಹಿತ್ ನನ್ನ ಮಗನ (ರಜತ್ ಗೌಡ) ಕಾರನ್ನು ಅಡ್ಡಗಟ್ಟಿದ್ದು ನಿಜ’ ಎಂದು ಹೇಳಿದ್ದಾರೆ.