‘ನನ್ನ ಮಗ ಚಿನ್ನ, ಆತನನ್ನು ಪಡೆಯಲು ನಾವು ಪುಣ್ಯ ಮಾಡಿದ್ವಿ’; ಸ್ನೇಹಿತ್ ಜಗದೀಶ್ ಪಾಲಕರ ಸ್ಪಷ್ಟನೆ

ಪ್ರಕರಣಕ್ಕೆ ಸಂಬಂಧಿಸಿ ರೇಖಾ ಹಾಗೂ ಸೌಂದರ್ಯ ಅವರು ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದ್ದಾರೆ. ಅಸಲಿಗೆ ನಡೆದಿದ್ದು ಏನು ಎಂಬ ವಿಚಾರವನ್ನು ಅವರು ರಿವೀಲ್ ಮಾಡಿದ್ದಾರೆ.

‘ನನ್ನ ಮಗ ಚಿನ್ನ, ಆತನನ್ನು ಪಡೆಯಲು ನಾವು ಪುಣ್ಯ ಮಾಡಿದ್ವಿ’; ಸ್ನೇಹಿತ್ ಜಗದೀಶ್ ಪಾಲಕರ ಸ್ಪಷ್ಟನೆ
ರೇಖಾ-ಸೌಂದರ್ಯ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Sep 30, 2022 | 5:43 PM

ನಿರ್ಮಾಪಕರಾದ ಸೌಂದರ್ಯ ಜಗದೀಶ್ (Soundarya Jagadeesh) ಹಾಗೂ ರೇಖಾ ಜಗದೀಶ್ (Rekha Jagadeesh) ಮಗ ಸ್ನೇಹಿತ್ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ. ​​ನನ್ನ ಪತ್ನಿಗೆ ಸ್ನೇಹಿತ್ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ರಜತ್ ಗೌಡ ಆರೋಪಿಸಿದ್ದರು. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್​ನಲ್ಲಿ ಕೇಸ್​ ಕೂಡ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ರೇಖಾ ಹಾಗೂ ಸೌಂದರ್ಯ ಅವರು ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದ್ದಾರೆ. ಅಸಲಿಗೆ ನಡೆದಿದ್ದು ಏನು ಎಂಬ ವಿಚಾರವನ್ನು ಅವರು ರಿವೀಲ್ ಮಾಡಿದ್ದಾರೆ. ಈ ಪ್ರಕರಣದಲ್ಲಿ ಮಗನ ತಪ್ಪು ಏನು ಇಲ್ಲ ಎಂಬುದನ್ನು ಈ ದಂಪತಿ ಒತ್ತಿ ಹೇಳಿದ್ದಾರೆ.

‘ಕಳೆದ ವರ್ಷ ಇದೇ ರೀತಿಯ ಪ್ರಕರಣ ನಡೆದಿತ್ತು. ರಜತ್ ಗೌಡ ಅವರು ನಮಗೆ ಸಾಕಷ್ಟು ತೊಂದರೆ ಕೊಟ್ಟರು. ಕೊಡಬಾರದ ಕಾಟ ಕೊಟ್ಟರು. ಕೊನೆಗೆ ಈ ಪ್ರಕರಣದಲ್ಲಿ ರಜತ್ ಅವರು ತಪ್ಪೊಪ್ಪಿಕೊಂಡರು. ಆ ಪ್ರಕರಣ ಅಲ್ಲಿಗೆ ಕ್ಲೋಸ್ ಆಯ್ತು. ನಮ್ಮ ಕಾರು ಚಾಲಕನ ಹೆಸರು ರಕ್ಷಿತ್. ಮನೆ ಮುಂದೆ ಕಾರು ತೊಳೆಯುವಾಗ ಆತನಿಗೆ ರಜತ್​ ತೊಂದರೆ ಕೊಟ್ಟಿದ್ದಾರೆ. ಕೆಟ್ಟ ಶಬ್ದಗಳಿಂದ ಬೈದಿದ್ದಾರೆ. ನಾನು ಆತ್ಮಹತ್ಯೆ ಮಾಡ್ಕೋತಿನಿ ಎಂದು ರಕ್ಷಿತ್ ನೋವಿನಿಂದ ಬಂದು ಹೇಳಿಕೊಂಡಿದ್ದ. ಆ ಬಳಿಕ ಆತ ರಜತ್ ವಿರುದ್ಧ ದೂರು ದಾಖಲು ಮಾಡಿದ್ದಾನೆ. ರಜತ್ ಹಾಗೂ ಶಮಂತ್ ಬಂದು ಕೇಸ್ ಹಿಂಪಡೆಯಿರಿ ಎಂದು ಆವಾಜ್ ಹಾಕಿದ್ದರಂತೆ. ಕೇಸ್ ಹಾಕಿದ್ದು ರಕ್ಷಿತ್. ಆ ಪ್ರಕರಣಕ್ಕೂ ನಮಗೂ ಸಂಬಂಧ ಇಲ್ಲ’ ಎಂದಿದ್ದಾರೆ ಜಗದೀಶ್.

ಇದನ್ನೂ ಓದಿ
Image
‘ಜಾಸ್ತಿ ಮಾತಾಡಿದರೆ ಹೊಡಿತೀನಿ, ಮುಗಿಸಿ ಬಿಡ್ತೀನಿ’; ಮತ್ತೆ ಶುರುವಾಯ್ತು ಖ್ಯಾತ ನಿರ್ಮಾಪಕನ ಮಗನ ಕಿರಿಕ್
Image
Snehith: ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಹಾಗೂ ತಂಡದ ಪುಂಡಾಟ ಪ್ರಕರಣಕ್ಕೆ ಮಹತ್ವದ ತಿರುವು
Image
ನಿರ್ಮಾಪಕ ಸೌಂದರ್ಯ ಜಗದೀಶ್​ ಪುತ್ರ ಸ್ನೇಹಿತ್​ ಪುಂಡಾಟ ಕೇಸ್​ನಲ್ಲಿ ರಾಜಿಗೆ ಪ್ರಯತ್ನಿಸಿದ ಸ್ಟಾರ್​ ನಟ?
Image
Snehith: ಹಲ್ಲೆ ಆರೋಪ; ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಹಾಗೂ ಇತರರ ವಿರುದ್ಧ ಎಫ್​ಐಆರ್ ದಾಖಲು

ಇದನ್ನೂ ಓದಿ: Snehith: ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಹಾಗೂ ತಂಡದ ಪುಂಡಾಟ ಪ್ರಕರಣಕ್ಕೆ ಮಹತ್ವದ ತಿರುವು

ರೇಖಾ ಕೂಡ ಈ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ‘ಅವರು ಸುಳ್ಳು ಆರೋಪ ಮಾಡುತ್ತಾ ನಮ್ಮನ್ನು ಬ್ಲಾಕ್​ಮೇಲ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಮಗ ಚಿನ್ನ. ಆತನಿಗೆ ಯಾವುದೇ ಕೆಟ್ಟ ಹವ್ಯಾಸ ಇಲ್ಲ. ಅವನನ್ನು ಪಡೆಯಲು ನಾವು ಪುಣ್ಯ ಮಾಡಿದ್ದೆವು. ಕಳೆದ ವರ್ಷ ಇದೇ ರೀತಿ ಪ್ರಕರಣ ನಡೆದಾಗ ನಾವು ಖಿನ್ನತೆಗೆ ಒಳಗಾಗಿದ್ದೆವು. ಎರಡು ತಿಂಗಳು ಮನೆಯಲ್ಲೇ ಇರಬೇಕಾಯಿತು. ಬ್ರಿಡ್ಜ್​ ಮೇಲೆ ನನ್ನ ಮಗ ಆವಾಜ್ ಹಾಕಿದ್ದಾನೆ ಎಂದು ದೂರು ನೀಡಿದ್ದಾರೆ. ನನ್ನ ಮಗ ಅಲ್ಲಿ ಇರಲೇ ಇಲ್ಲ’ ಎಂದಿದ್ದಾರೆ ರೇಖಾ.

Published On - 5:40 pm, Fri, 30 September 22