ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ

|

Updated on: Dec 26, 2024 | 8:20 PM

ರಜತ್ ಅವರು ಎಲ್ಲ ಸ್ಪರ್ಧಿಗಳಿಗೆ ಸಖತ್ ಪೈಪೋಟಿ ನೀಡುತ್ತಿದ್ದಾರೆ. ಈಗ ಬಟ್ಟೆ ಕದಿಯಲು ಅವರು ಪ್ಲ್ಯಾನ್ ಮಾಡಿದ್ದಾರೆ. ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಂಗಡಿಸಿ ರೆಸಾರ್ಟ್​​ ಟಾಸ್ಕ್​ ನೀಡಲಾಗಿದೆ. ಇದರಲ್ಲಿ ರೆಸಾರ್ಟ್​​ ಸಿಬ್ಬಂದಿ ಸಮವಸ್ತ್ರ ಧರಿಸಬೇಕು. ಆದರೆ ಅವರ ಬಟ್ಟೆಗಳನ್ನು ಕದಿಯಬೇಕು ಎಂದು ರಜತ್ ಅವರು ತಮ್ಮ ತಂಡದ ಸದಸ್ಯರ ಜೊತೆ ಕುಳಿತು ಪ್ಲ್ಯಾನ್ ರೂಪಿಸಿದ್ದಾರೆ.

ರೆಸಾರ್ಟ್​ ಟಾಸ್ಕ್​ ನಿಭಾಯಿಸಲು ಹಲವರಿಗೆ ಕಷ್ಟ ಆಗುತ್ತಿದೆ. ಈ ಮೊದಲು ಭವ್ಯ ಗೌಡ ಕಣ್ಣೀರು ಹಾಕಿದ್ದರು. ಈಗ ಗೌತಮಿ ಜಾದವ್ ಕೂಡ ಅತ್ತಿದ್ದಾರೆ. ರಜತ್ ಅವರು ಈ ಟಾಸ್ಕ್​ನಲ್ಲಿ ಎದುರಾಳಿ ತಂಡಕ್ಕೆ ಟಫ್​ ಫೈಟ್​ ನೀಡುತ್ತಿದ್ದಾರೆ. ಅವರ ಟಾರ್ಚರ್​ ತಾಳಲಾಗದೇ ಎದುರಾಳಿ ತಂಡದವರು ಸುಸ್ತು ಹೊಡೆದಿದ್ದಾರೆ. ರೆಸಾರ್ಟ್​ ಟಾಸ್ಕ್ ಮಾಡುತ್ತಿರುವವರ ಬಟ್ಟೆ ಕದಿಯುವ ಬಗ್ಗೆ ರಜತ್ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.