ಚೈತ್ರಾ ಮೋಸದಾಟ; ಮನ ಒಲಿಸಲು ಹೊಸ ಉಪಾಯ ಕಂಡುಹಿಡಿದ ರಜತ್

Updated on: Dec 18, 2024 | 7:31 PM

ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್​ ಮನೆಯಲ್ಲಿ ಮೋಸ ಮಾಡುತ್ತಿದ್ದಾರೆ ಎಂಬುದು ರಜತ್ ಆರೋಪ. ಆ ಬಗ್ಗೆ ಅವರು ನೇರವಾಗಿಯೇ ಹೇಳಿದ್ದಾರೆ. ಚೈತ್ರಾ ಆಡುವ ಮೋಸದ ಆಟವನ್ನು ತಪ್ಪಿಸಲು ರಜತ್ ಅವರು ಒಂದು ಉಪಾಯ ಕಂಡು ಹಿಡಿದಿದ್ದಾರೆ. ಈ ಬಗ್ಗೆ ಅವರು ಧನರಾಜ್, ಐಶ್ವರ್ಯಾ ಮುಂತಾದವರ ಬಳಿ ಚರ್ಚೆ ಮಾಡಿದ್ದಾರೆ. ಅದರ ಪ್ರೋಮೋ ಇಲ್ಲಿದೆ.

ಉಸ್ತುವಾರಿ ಮಾಡುವಾಗ ಚೈತ್ರಾ ಕುಂದಾಪುರ ಪ್ರತಿ ಬಾರಿ ಮೋಸ ಮಾಡುತ್ತಾರೆ ಎಂದು ರಜತ್ ಆರೋಪ ಮಾಡಿದ್ದಾರೆ. ಹಾಗಾಗಿ ಟಾಸ್ಕ್ ಆರಂಭ ಆಗುವಾಗ ಅವರ ಮನ ಒಲಿಸಲು ಮಂತ್ರ ಹೇಳೋಣ ಎಂದು ರಜತ್ ಹೇಳಿದ್ದಾರೆ. ‘ಎಲ್ಲರೂ ಅವಳ ಕಾಲಿಗೆ ಬೀಳೋಣ. ಹೇಗಿದ್ರೂ ಅವಳು ಮೋಸ ಮಾಡುತ್ತಾಳೆ. ಆದರೂ ನಮ್ಮ ಪ್ರಯತ್ನ ಮಾಡೋಣ. ಸ್ವಲ್ಪ ಕಡಿಮೆ ಮೋಸ ಮಾಡು ಎನ್ನೋಣ. ಆಕೆಗೆ ಪೂಜೆ ಮಾಡಿ, ಗಂಟೆ ಹೊಡೆದು ಮಂತ್ರ ಹೇಳೋಣ’ ಎಂದಿದ್ದಾರೆ ರಜತ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More