ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು ಗೊತ್ತಾ?

Updated on: Dec 16, 2025 | 5:40 PM

ಬಿಗ್ ಬಾಸ್ ಮನೆಯ ಒಳಗೆ ಮೊಟ್ಟೆ ಕಳ್ಳತನ ಆಗಿದೆ! ಗಿಲ್ಲಿ ನಟ ಅವರು ಊಟ ಮಾಡುತ್ತಿದ್ದಾಗ ಈ ರೀತಿ ಆಗಿದೆ. ಗಿಲ್ಲಿ ಅವರ ತಟ್ಟೆಯಲ್ಲಿ ಇದ್ದ ಮೊಟ್ಟೆಯನ್ನು ಪಕ್ಕದಲ್ಲೇ ಕುಳಿತಿದ್ದ ರಜತ್ ಅವರು ಕದ್ದಿದ್ದಾರೆ. ಡಿ.16ರ ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ.

ಬಿಗ್ ಬಾಸ್ (Bigg Boss Kannada) ಮನೆಯೊಳಗೆ ಊಟಕ್ಕೆ ಬಹಳ ಮಹತ್ವ ಇದೆ. ಕೇಳಿದ್ದೆಲ್ಲವೂ ಅಲ್ಲಿ ಸಿಗುವುದಿಲ್ಲ. ಇದ್ದಿದ್ದರಲ್ಲಿ ಹೊಂದಾಣಿಕೆ ಮಾಡಿಕೊಂಡು ಬದುಕಬೇಕು. ಈ ಮೊದಲು ಒಂದು ಆ್ಯಪಲ್, ಸ್ವಲ್ಪ ಉಪ್ಪಿನಕಾಯಿ ಸಲುವಾಗಿಯೂ ಬಿಗ್ ಬಾಸ್ ಮನೆಯಲ್ಲಿ ಭಾರಿ ಜಗಳ ಆಗಿದ್ದುಂಟು. ಈಗ ಬಿಗ್ ಬಾಸ್ ಮನೆಯ ಒಳಗೆ ಮೊಟ್ಟೆ ಕಳ್ಳತನ ಆಗಿದೆ! ಗಿಲ್ಲಿ ನಟ (Gilli Nata) ಅವರು ಊಟ ಮಾಡುತ್ತಿದ್ದಾಗ ಈ ರೀತಿ ಆಗಿದೆ. ಗಿಲ್ಲಿ ತಟ್ಟೆಯಲ್ಲಿ ಇದ್ದ ಮೊಟ್ಟೆಯನ್ನು ಪಕ್ಕದಲ್ಲೇ ಕುಳಿತಿದ್ದ ರಜತ್ (Rajath Kishan) ಅವರು ಕದ್ದಿದ್ದಾರೆ. ತಮ್ಮ ತಟ್ಟೆಯಲ್ಲಿ ಮೊಟ್ಟೆ ಕಾಣೆಯಾಗಿದ್ದು ನೋಡಿ ಗಿಲ್ಲಿಗೆ ಅನುಮಾನ ಬಂದಿದೆ. ಡಿಸೆಂಬರ್ 16ರ ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ. ಕಲರ್ಸ್ ಕನ್ನಡ ವಾಹಿನಿ ಮತ್ತು ಜಿಯೋ ಹಾಟ್​ಸ್ಟಾರ್ ಒಟಿಟಿ ಮೂಲಕ ಪೂರ್ತಿ ಸಂಚಿಕೆ ವೀಕ್ಷಿಸಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.