‘ಕರ್ನಾಟಕ ತಾತನ ಮನೆ ಆಸ್ತಿ ಅಲ್ಲ, ಇವರೇನು ಪರ್ಮನೆಂಟ್​ ಅಲ್ಲೇ ಇರ್ತಾರಾ’; ಡಿಕೆಶಿಗೆ ರಾಜೇಂದ್ರ ಸಿಂಗ್ ಬಾಬು ಪ್ರಶ್ನೆ

|

Updated on: Mar 04, 2025 | 10:26 AM

ಡಿಕೆ ಶಿವಕುಮಾರ್ ಹೇಳಿದ್ದ ನಟ್ಟು-ಬೋಲ್ಡ್ ಟೈಟ್ ಮಾಡೋ ಹೇಳಿಕೆ ಸಂಚಲನ ಸೃಷ್ಟಿಸಿದೆ. ಇದಕ್ಕೆ ಅನೇಕರು ಪ್ರತಿಕ್ರಿಯೆ ನೀಡುತ್ತಾ ಇದ್ದಾರೆ. ಈಗ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪ್ರಶ್ನೆ ಮಾಡಿದ್ದಾರೆ. ‘ಕರ್ನಾಟಕ ತಾತನ ಮನೆ ಆಸ್ತಿ ಅಲ್ಲ, ಇವರೇನು ಪರ್ಮನೆಂಟ್​ ಅಲ್ಲೇ ಇರ್ತಾರಾ’ ಎಂದಿದ್ದಾರೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ, ‘ನಟ್ಟು ಬೋಲ್ಟ್ ಟೈಟ್ ಮಾಡೋದು ಗೊತ್ತು’ ಎನ್ನುವ ಹೇಳಿಕೆ ಸಂಚಲನ ಸೃಷ್ಟಿಸಿದೆ. ಈ ಹೇಳಿಕೆ ಬಗ್ಗೆ ಮಾತನಾಡಿರೋ ಹಿರಿಯ ನಿರ್ದೇಶಕ, ರಾಜೇಂದ್ರ ಸಿಂಗ್ ಬಾಬು, ‘ಚಿತ್ರರಂಗದವರು ಬಂದಿಲ್ಲ ಎಂದು ಅವರ ಮನಸ್ಸಿಗೆ ನೋವಾಗಿರಬಹುದು. ಆದರೆ, ಗೋಕಾಕ್ ಚಳುವಳಿಯಿಂದ ಹಿಡಿದು ಹಲವು ಸಂದರ್ಭದಲ್ಲಿ ಒಗ್ಗಟ್ಟಲ್ಲಿ ಹೋರಾಡಿದೆ. ಮನೆ ಕುಟುಂಬಕ್ಕೆ ಬರದೇ ಇದ್ದರೆ ಬೇಸರ ಆಗುತ್ತದೆ. ಇದಕ್ಕೆ ಸರಿಯಾಗಿ ಆಹ್ವಾನ ಹೋಗಬೇಕು. ನಟ್ಟು-ಬೋಲ್ಟ್ ಹೇಳಬಾರದು. ಕರ್ನಾಟಕ ಯಾರ ತಾತನ ಮನೆದೂ ಅಲ್ಲ. ಇವರೇನು ಪರ್ಮ್​ನೆಂಟಾ? ಸಭೆ ಕರೆದು ಹೇಳಬಹುದಿತ್ತು’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.