AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶ: ಚಲಿಸುತ್ತಿರುವಾಗಲೇ ಇಬ್ಭಾಗವಾದ ನಂದನ್ ಕಾನನ್​ ಎಕ್ಸ್​ಪ್ರೆಸ್​ ರೈಲು

ಉತ್ತರ ಪ್ರದೇಶ: ಚಲಿಸುತ್ತಿರುವಾಗಲೇ ಇಬ್ಭಾಗವಾದ ನಂದನ್ ಕಾನನ್​ ಎಕ್ಸ್​ಪ್ರೆಸ್​ ರೈಲು

ನಯನಾ ರಾಜೀವ್
|

Updated on: Mar 04, 2025 | 9:16 AM

Share

ಚಲಿಸುತ್ತಿರುವಾಗಲೇ ರಾಯಲು ಇಬ್ಭಾಗವಾಗಿರುವ ಘಟನೆ ಉತ್ತರ ಪ್ರದೇಶದ ಚಂದೌಲಿಯಲ್ಲಿ ನಡೆದಿದೆ. ದೀನ್ ದಯಾಳ್ ಜಂಕ್ಷನ್ ಬಳಿ ಸಂಭವಿಸಬಹುದಾದ ದೊಡ್ಡ ಅಪಾಯವೊಂದು ತಪ್ಪಿದೆ. ಜಂಕ್ಷನ್‌ನಿಂದ ಹೊರಟ ರೈಲು ಸ್ವಲ್ಪ ದೂರ ಹೋದ ನಂತರ ಎರಡು ಭಾಗಗಳಾಗಿ ವಿಭಜನೆಯಾಯಿತು. ಕಪ್ಲಿಂಗ್ ಮುರಿದುಹೋದ ಕಾರಣ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಚಂದೌಲಿ, ಮಾರ್ಚ್​ 04: ಚಲಿಸುತ್ತಿರುವಾಗಲೇ ರಾಯಲು ಇಬ್ಭಾಗವಾಗಿರುವ ಘಟನೆ ಉತ್ತರ ಪ್ರದೇಶದ ಚಂದೌಲಿಯಲ್ಲಿ ನಡೆದಿದೆ. ದೀನ್ ದಯಾಳ್ ಜಂಕ್ಷನ್ ಬಳಿ ಸಂಭವಿಸಬಹುದಾದ ದೊಡ್ಡ ಅಪಾಯವೊಂದು ತಪ್ಪಿದೆ. ಜಂಕ್ಷನ್‌ನಿಂದ ಹೊರಟ ರೈಲು ಸ್ವಲ್ಪ ದೂರ ಹೋದ ನಂತರ ಎರಡು ಭಾಗಗಳಾಗಿ ವಿಭಜನೆಯಾಯಿತು. ಕಪ್ಲಿಂಗ್ ಮುರಿದುಹೋದ ಕಾರಣ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ರೈಲು ದೆಹಲಿಯ ಆನಂದ್ ವಿಹಾರ್ ನಿಂದ ಒಡಿಶಾದ ಪುರಿಗೆ ಹೋಗುತ್ತಿತ್ತು. ಈ ಮಧ್ಯೆ, 12876 ನಂದನ್ ಕಾನನ್ ಎಕ್ಸ್‌ಪ್ರೆಸ್ ರೈಲಿನ ಸ್ಲೀಪರ್ ಎಸ್ 4 ಬೋಗಿಯ ಜೋಡಣೆ ಮುರಿದು ಬಿದ್ದಿದೆ. ಜೋಡಣೆಯಲ್ಲಿನ ಬಿರುಕು ಬಿಟ್ಟ ಕಾರಣ ರೈಲು ಎರಡು ಭಾಗವಾಯಿತು. ಈ ಸಮಯದಲ್ಲಿ, ರೈಲಿನೊಳಗೆ ಕುಳಿತಿದ್ದ ಪ್ರಯಾಣಿಕರಲ್ಲಿ ಭಯ ಮೂಡಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More