‘ಎಸ್​ಪಿಬಿ ರೀತಿಯೇ ಮತ್ತೋರ್ವ ಗಾಯಕನಿದ್ದಾನೆ ಎಂದರು..’; ಹಳೆ ನೆನಪು ತೆರದಿಟ್ಟ ಜಗ್ಗೇಶ್

Updated on: Jun 16, 2025 | 12:56 PM

ಎಸ್​ಪಿಬಿಗೆ ಸರಿಸಾಟಿಯಾಗಿ ನಿಲ್ಲಲು ಯಾರಿಂದಲೂ ಸಾಧ್ಯವಿಲ್ಲ. ಈಗ ಎಸ್​ಪಿಬಿಗೆ ಸರಿಸಾಟಿಯಾಗಿ ನಿಲ್ಲಬಲ್ಲರು ಎಂದರೆ ಅವರು ರಾಜೇಶ್ ಕೃಷ್ಣನ್ ಮಾತ್ರ. ಈ ವಿಚಾರವನ್ನು ಹಂಸಲೇಖ ಅವರು ಆಗಲೇ ಗುರುತಿಸಿದ್ದರು ಎನ್ನಲಾಗಿದೆ. ಜಗ್ಗೇಶ್ ವೇದಿಕೆ ಮೇಲೆ ಮಾತನಾಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ.

ಎಸ್​ಪಿ ಬಾಲಸುಬ್ರಮಣ್ಯಂಗೆ ಸರಿಸಾಟಿಯಾಗಿ ನಿಲ್ಲಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಅವರ ರೀತಿಯೇ ಒಳ್ಳೆಯ ಕಂಠ ಉಳ್ಳವರಲ್ಲಿ ರಾಜೇಶ್ ಕೃಷ್ಣನ್ ಕೂಡ ಒಬ್ಬರು. ಈ ವಿಚಾರ ಹಂಸಲೇಖಗೆ ಮೊದಲೇ ಗೊತ್ತಿತ್ತು. ‘ನನ್ನ ಸಿನಿಮಾ ಹಾಡನ್ನು ಎಸ್​ಪಿಬಿ ಹಾಡಬೇಕು ಎಂದು ಕೋರಿಕೊಂಡೆ. ಇದಕ್ಕೆ ಹಂಸಲೇಖ (Hamsalekha) ಅವರ ರೀತಿಯೇ ಮತ್ತೋರ್ವ ಗಾಯಕನನ್ನು ಕರೆದುಕೊಂಡು ಬಂದಿದ್ದೇನೆ ಎಂದು ಹೇಳಿದರು. ಅವರೇ ರಾಜೇಶ್ ಕೃಷ್ಣನ್’ ಎಂದಿದ್ದಾರೆ ಜಗ್ಗೇಶ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More