AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 6 ಗಂಟೆಗಳ ಪೆರೋಲ್ ಮೇಲೆ ಮನೆಗೆ ಬಂದ ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತಿಸಿದ ಗ್ರಾಮಸ್ಥರು

ಕೇವಲ 6 ಗಂಟೆಗಳ ಪೆರೋಲ್ ಮೇಲೆ ಮನೆಗೆ ಬಂದ ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತಿಸಿದ ಗ್ರಾಮಸ್ಥರು

ನಯನಾ ರಾಜೀವ್
|

Updated on:Sep 21, 2026 | 8:28 AM

Share

ದೆಹಲಿ ಮತ್ತು ಹರಿಯಾಣದ ಕುಖ್ಯಾತ ಗ್ಯಾಂಗ್‌ಸ್ಟರ್ ಸಂದೀಪ್ ಅಲಿಯಾಸ್ ಕಲಾ ಜಥೇದಿ, ತನ್ನ ಅವಳಿ ಹೆಣ್ಣುಮಕ್ಕಳ ನಾಮಕರಣ ಸಮಾರಂಭದಲ್ಲಿ ಭಾಗವಹಿಸಲು ಕೋರ್ಟ್‌ನಿಂದ ಕೇವಲ 6 ಗಂಟೆಗಳ ಕಾಲಾವಧಿಯ ತಾತ್ಕಾಲಿಕ ಪೆರೋಲ್ ಪಡೆದು ಸೋನಿಪತ್‌ನ ತನ್ನ ಸ್ವಗ್ರಾಮ ಜಥೇದಿಗೆ ಬಂದಿದ್ದ. ಆತ ಗ್ರಾಮಕ್ಕೆ ಬರುತ್ತಿದ್ದಂತೆಯೇ ಸ್ಥಳೀಯರು ಡ್ರಮ್ ಬಾರಿಸಿ ಸ್ವಾಗತಿಸಿದರು. ಸಂಭಾವ್ಯ ಗ್ಯಾಂಗ್‌ವಾರ್ ಮತ್ತು ದಾಳಿಯ ಭೀತಿಯ ಹಿನ್ನೆಲೆಯಲ್ಲಿ ಗ್ರಾಮವನ್ನು ಸಂಪೂರ್ಣವಾಗಿ ಸಶಸ್ತ್ರ ಪೊಲೀಸ್ ಕಾವಲಿನ ಕೋಟೆಯನ್ನಾಗಿ ಪರಿವರ್ತಿಸಲಾಗಿತ್ತು.

ಸೋನಿಪತ್, ಸೆಪ್ಟೆಂಬರ್ 21: ದೆಹಲಿ ಮತ್ತು ಹರಿಯಾಣದ ಕುಖ್ಯಾತ ಗ್ಯಾಂಗ್‌ಸ್ಟರ್ ಸಂದೀಪ್ ಅಲಿಯಾಸ್ ಕಲಾ ಜಥೇದಿ, ತನ್ನ ಅವಳಿ ಹೆಣ್ಣುಮಕ್ಕಳ ನಾಮಕರಣ ಸಮಾರಂಭದಲ್ಲಿ ಭಾಗವಹಿಸಲು ಕೋರ್ಟ್‌ನಿಂದ ಕೇವಲ 6 ಗಂಟೆಗಳ ಕಾಲಾವಧಿಯ ತಾತ್ಕಾಲಿಕ ಪೆರೋಲ್ ಪಡೆದು ಸೋನಿಪತ್‌ನ ತನ್ನ ಸ್ವಗ್ರಾಮ ಜಥೇದಿಗೆ ಬಂದಿದ್ದ. ಆತ ಗ್ರಾಮಕ್ಕೆ ಬರುತ್ತಿದ್ದಂತೆಯೇ ಸ್ಥಳೀಯರು ಡ್ರಮ್ ಬಾರಿಸಿ ಸ್ವಾಗತಿಸಿದರು. ಸಂಭಾವ್ಯ ಗ್ಯಾಂಗ್‌ವಾರ್ ಮತ್ತು ದಾಳಿಯ ಭೀತಿಯ ಹಿನ್ನೆಲೆಯಲ್ಲಿ ಗ್ರಾಮವನ್ನು ಸಂಪೂರ್ಣವಾಗಿ ಸಶಸ್ತ್ರ ಪೊಲೀಸ್ ಕಾವಲಿನ ಕೋಟೆಯನ್ನಾಗಿ ಪರಿವರ್ತಿಸಲಾಗಿತ್ತು.

ನ್ಯಾಯಾಲಯವು ಕಲಾ ಜಥೇದಿಗೆ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕೇವಲ ಆರು ಗಂಟೆಗಳ ಸೀಮಿತ ಪೆರೋಲ್ ಮಂಜೂರು ಮಾಡಿತ್ತು. ಅವಧಿ ಮುಗಿಯುತ್ತಿದ್ದಂತೆಯೇ ಆತನನ್ನು ಮತ್ತೆ ಕಸ್ಟಡಿಗೆ ಪಡೆದು ಜೈಲಿಗೆ ಕರೆದೊಯ್ಯಲಾಯಿತು. ಕಲಾ ಜಥೇದಿಯ ಪತ್ನಿ ಅನುರಾಧಾ ಚೌಧರಿ ಸುಮಾರು ಮೂರು ತಿಂಗಳ ಹಿಂದೆ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದರು. ಕುಟುಂಬಸ್ಥರು ಮತ್ತು ಆಪ್ತ ಸಂಬಂಧಿಕರ ಸಮ್ಮುಖದಲ್ಲಿ ಹೂವುಗಳಿಂದ ಅಲಂಕರಿಸಲಾಗಿದ್ದ ಮನೆಯಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ನಾಮಕರಣ ಕಾರ್ಯಕ್ರಮ ನೆರವೇರಿತು.

 

ಯಾವುದೇ ಅಹಿತಕರ ಘಟನೆಗಳು ಅಥವಾ ಭದ್ರತಾ ಲೋಪಗಳು ಆಗಬಾರದು ಎಂಬ ಕಾರಣಕ್ಕಾಗಿ ಸಮಾರಂಭದ ಮಾಧ್ಯಮ ವರದಿಗೆ ಸಂಪೂರ್ಣ ನಿಷೇಧ ಹೇರಲಾಗಿತ್ತು. ಪತ್ರಕರ್ತರು ಮತ್ತು ಹೊರಗಿನವರು ಜಥೇದಿ ಗ್ರಾಮವನ್ನು ಪ್ರವೇಶಿಸದಂತೆ ನಾಕಾಬಂದಿ ಹಾಕಲಾಗಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Sep 21, 2026 08:27 AM

Follow Us