ರಾಜ್ಕುಮಾರ್ ಬಳಿ ಇತ್ತು ಒಂದು ದೊಡ್ಡ ಬ್ರಹ್ಮಾಸ್ತ್ರ; ವಿವರಿಸಿದ್ದ ಜಗ್ಗೇಶ್
ಜಗ್ಗೇಶ್ ಅವರು ರಾಜ್ಕುಮಾರ್ ಅವರ ಸರಳತೆಯನ್ನು ಅವರ ದೊಡ್ಡ ಬ್ರಹ್ಮಾಸ್ತ್ರ ಎಂದು ವಿವರಿಸಿದ್ದಾರೆ. ರಾಜ್ಕುಮಾರ್ ಅವರ ಜನಪ್ರಿಯತೆ ಮತ್ತು ಸಂಪತ್ತಿದ್ದರೂ, ಅವರು ಎಂದಿಗೂ ತಮ್ಮ ದೊಡ್ಡತನವನ್ನು ತೋರಿಸಲಿಲ್ಲ. ಅವರ ಸೌಮ್ಯತೆ ಮತ್ತು ಇತರರ ಬಗ್ಗೆ ಗೌರವದಿಂದ ಮಾತನಾಡುವ ಗುಣ ಅವರನ್ನು ವಿಶೇಷವಾಗಿಸಿತು. ಪಂಚೆ-ಬಿಳಿ ಶರ್ಟ್ ಧರಿಸುವುದು ಕೂಡ ಅವರ ಸರಳತೆಯನ್ನು ಪ್ರತಿಬಿಂಬಿಸುತ್ತದೆ.

ರಾಜ್ಕುಮಾರ್ (Rajkumar) ಅವರು ನಮ್ಮನ್ನು ಅಗಲಿ ಹಲವು ವರ್ಷಗಳೇ ಕಳೆದಿವೆ. ಆದರೆ, ಅವರು ಸದಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಅವರ ಬಗ್ಗೆ, ಅವರ ಸಿನಿಮಾಗಳ ಬಗ್ಗೆ ಈಗಲೂ ಚರ್ಚೆಗಳು ಆಗುತ್ತವೆ. ರಾಜ್ಕುಮಾರ್ ಬಳಿ ಒಂದು ದೊಡ್ಡ ಬ್ರಹ್ಮಾಸ್ತ್ರ ಇತ್ತು ಎಂಬುದು ಜಗ್ಗೇಶ್ ಅಭಿಪ್ರಾಯ. ಈ ಮೊದಲು ಸಂದರ್ಶನ ಒಂದರಲ್ಲಿ ಈ ಬಗ್ಗೆ ಅವರು ಮಾತನಾಡಿದ್ದರು. ಆ ಮಾತನ್ನು ನಾವು ಮತ್ತೊಮ್ಮೆ ನೆನಪಿಸಿಕೊಳ್ಳೋಣ.
ರಾಜ್ಕುಮಾರ್ ಅವರು ಸರಳತೆಗೆ ಹೆಸರು ವಾಸಿ ಆಗಿದ್ದರು. ಇದುವೇ ಅವರ ಬ್ರಹ್ಮಾಸ್ತ್ರ ಎಂದು ಜಗ್ಗೇಶ್ ಈ ಮೊದಲು ಅಭಿಪ್ರಾಯ ಹೊರಹಾಕಿದ್ದರು. ರಾಜ್ಕುಮಾರ್ ಬಳಿ ಸಾಕಷ್ಟು ಹಣ ಇತ್ತು. ಅಷ್ಟೇ ಏಕೆ ಸಾಕಷ್ಟು ಜನಪ್ರಿಯತೆ ಇತ್ತು. ಅವರು ಕರೆದರೆ ಪರಭಾಷೆಯ ಸೆಲೆಬ್ರಿಟಿಗಳು ಇಲ್ಲಿಗೆ ಬರುತ್ತಿದ್ದರು. ಆದರೆ, ಅವರು ಎಂದಿಗೂ ತಮ್ಮ ದೊಡ್ಡತನವನ್ನು ತೋರಿಸುವ ಪ್ರಯತ್ನ ಮಾಡಲೇ ಇಲ್ಲ.
ರಾಜ್ಕುಮಾರ್ ಬಳಿ ಮತ್ತೊಂದು ಒಳ್ಳೆಯ ಗುಣ ಇತ್ತು. ಅದುವೇ ಯಾರ ಬಗ್ಗೆಯೂ ಕೆಟ್ಟ ಮಾತು ಆಡದೆ ಇರುವುದು. ರಾಜ್ಕುಮಾರ್ ಅವರು ಯಾರ ಬಗ್ಗೆಯೂ ಕೆಟ್ಟ ಮಾತನ್ನು ಹೇಳುತ್ತಿರಲಿಲ್ಲ. ಯಾರ ಬಗ್ಗೆಯೂ ಚಾಡಿ ಹೇಳುವ ಕೆಲಸವನ್ನು ಅವರು ಮಾಡಿರಲೇ ಇಲ್ಲ. ಬೇರೆಯವರ ವಿಚಾರ ಬಂತು ಎಂದರೆ ಅವರು ಆ ಸ್ಥಳದಿಂದಲೇ ಎದ್ದು ನಡೆಯುತ್ತಿದ್ದರು.
‘ರಾಜ್ಕುಮಾರ್ ಸರಳತೆಯೇ ಅವರ ಬ್ರಹ್ಮಾಸ್ತ್ರ. ಒಂದು ದಿನ ಇನ್ನೊಬ್ಬರ ಬಗ್ಗೆ ಮಾತನಾಡಿಲ್ಲ. ಒಬ್ಬರ ಬಗ್ಗೆ ಬೈದಿಲ್ಲ. ಒಬ್ಬರನ್ನು ಏಕವಚನದಲ್ಲಿ ಮಾತನಾಡಿಸಿಲ್ಲ. ಎಗ್ಸೈಟ್ಮೆಂಟ್ ಅನ್ನೋದು, ಕಸಿವಿಸಿ ಇಲ್ಲ. ಪ್ರಶಾಂತವಾಗಿರುತ್ತಿದ್ದರು. ಯಾವುದೋ ತಪಸ್ವಿ ಜೊತೆ ಇದ್ದಂತೆ ಅನಿಸುತ್ತಿತ್ತು’ ಎಂದು ರಾಜ್ಕುಮಾರ್ ಅವರು ಫಿಲ್ಮ್ ಕಂಪಾನಿಯನ್ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಇದನ್ನೂ ಓದಿ: ರಾಜ್ಕುಮಾರ್ ಬಗ್ಗೆ ಆರ್ಜಿವಿ ಅಲ್ಪಜ್ಞಾನದ ಹೇಳಿಕೆ ಸುಳ್ಳು; ಅಣ್ಣಾವ್ರ ಚಿತ್ರವನ್ನು ರಿಮೇಕ್ ಮಾಡಿದ್ದ ಅಮಿತಾಭ್
ರಾಜ್ಕುಮಾರ್ ಈ ಮೊದಲು ಜೀನ್ಸ್ ಹಾಕುತ್ತಿದ್ದರು. ಆದರೆ, ವಿಮಾನ ನಿಲ್ದಾಣದಲ್ಲಿ ಸಿಕ್ಕ ಪೈಲಟ್ ಒಬ್ಬರು ಈ ಬಗ್ಗೆ ಪ್ರಶ್ನೆ ಮಾಡಿದರು. ಪಂಚೆ-ಬಿಳಿ ಶರ್ಟ್ ನಿಮಗೆ ಸೂಕ್ತ ಎಂದರು. ಅಂದಿನಿಂದ ಅದನ್ನೇ ಅವರು ಹಾಕೋಕೆ ಆರಂಭಿಸಿದರು. ಕೊನೆಯವರೆಗೂ ರಾಜ್ಕುಮಾರ್ ಹೀಗೆಯೇ ಇದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







