ಮಲಯಾಳಂ ಯುವ ನಿರ್ದೇಶಕನಿಗೆ ಕಾಲ್ಶೀಟ್ ಕೊಟ್ಟ ಅಲ್ಲು ಅರ್ಜುನ್?
Allu Arjun: ನಟ ಅಲ್ಲು ಅರ್ಜುನ್ ಪ್ಯಾನ್ ವರ್ಲ್ಡ್ ನಟನಾಗುವತ್ತ ದೃಷ್ಟಿ ಹರಿಸಿದ್ದಾರೆ. ಇದೀಗ ಅಟ್ಲಿ ಜೊತೆ ಸೇರಿ ಹಾಲಿವುಡ್ ಲೆವೆಲ್ ಸಿನಿಮಾನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೆಲ ತೆಲುಗು ಸಿನಿಮಾ ನಿರ್ದೇಶಕರಿಗೆ ನೋ ಹೇಳಿರುವ ಅಲ್ಲು ಅರ್ಜುನ್, ಮಲಯಾಳಂ ಚಿತ್ರರಂಗದ ಯಂಗ್ ನಿರ್ದೇಶಕರೊಬ್ಬರಿಗೆ ಕಾಲ್ ಶೀಟ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ಟಾಲಿವುಡ್ನ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಸಿನಿಮಾಗಳ ಮೇಲಿನ ಕ್ರೇಜ್ ಎಲ್ಲರಿಗೂ ತಿಳಿದಿದೆ. ‘ಪುಷ್ಪ’ ಸಿನಿಮಾದಲ್ಲಿ ನಟಿಸಿ ಅವರ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ದೇಶದಲ್ಲಿ ಮಾತ್ರವಲ್ಲದೆ, ಬನ್ನಿಗೆ ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಪ್ರಸ್ತುತ, ಅಭಿಮಾನಿಗಳು ಈ ನಾಯಕನ ಮುಂಬರುವ ಸಿನಿಮಾಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈಗ, ಅಲ್ಲು ಅರ್ಜುನ್ ಕಾಲಿವುಡ್ ನಿರ್ದೇಶಕ ಅಟ್ಲಿ ನಿರ್ದೇಶನದಲ್ಲಿ ದೊಡ್ಡ ಪ್ರಾಜೆಕ್ಟ್ ಮಾಡಲಿದ್ದಾರೆ. ಈ ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಈಗಾಗಲೇ ಮಾಡಲಾಗಿದೆ. ಈ ಚಿತ್ರದಲ್ಲಿ ಬನ್ನಿ ಎದುರು ಬಿಟೌನ್ ನಾಯಕಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಮಧ್ಯೆ ಅವರು ಮಲಯಾಳಂ ಸಿನಿಮಾ ನಿರ್ದೇಶಕನ ಚಿತ್ರಕ್ಕೆ ಸಹಿ ಹಾಕಿದ್ದು ಗೊತ್ತಾಗಿದೆ.
ಅಟ್ಲಿ ಮತ್ತು ಅಲ್ಲು ಅರ್ಜುನ್ ಕಾಂಬೊದ ಮುಂಬರುವ ಯೋಜನೆಯ ಬಗ್ಗೆ ಈಗಾಗಲೇ ಭಾರಿ ನಿರೀಕ್ಷೆಗಳಿವೆ. ಈ ಚಿತ್ರದ ನಂತರ, ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಬನ್ನಿ ಒಂದು ಸಿನಿಮಾ ಮಾಡೋ ಸಾಧ್ಯತೆ ಇದೆ. ಅದೇ ರೀತಿ, ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಅವರು ಚಿತ್ರ ಮಾಡುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಇಬ್ಬರ ಬಗ್ಗೆ ಇಲ್ಲಿಯವರೆಗೆ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ಈಗ ಬನ್ನಿ ನಿರ್ದೇಶಕರ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಇತ್ತೀಚೆಗೆ, ಬನ್ನಿ ಅವರ ಮುಂದಿನ ಚಿತ್ರದ ಬಗ್ಗೆ ಆಸಕ್ತಿದಾಯಕ ಸುದ್ದಿ ಹೊರಬಿದ್ದಿದೆ.
ಅಟ್ಲಿ ಅವರ ಚಿತ್ರದ ನಂತರ, ಅಲ್ಲು ಅರ್ಜುನ್ ಮಲಯಾಳಂನಲ್ಲಿ ಸಂಚಲನ ಸೃಷ್ಟಿಸುತ್ತಿರುವ ಯುವ ನಿರ್ದೇಶಕ ಬಾಸಿಲ್ ಜೋಸೆಫ್ ಅವರ ನಿರ್ದೇಶನದಲ್ಲಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಬಾಸಿಲ್ ಜೋಸೆಫ್ ಪ್ರಸ್ತುತ ಮಲಯಾಳಂನಲ್ಲಿ ನಟ ಮತ್ತು ನಿರ್ದೇಶಕರಾಗಿ ಉತ್ತಮ ಯಶಸ್ಸನ್ನು ಅನುಭವಿಸುತ್ತಿದ್ದಾರೆ. ಅವರು 2021ರಲ್ಲಿ ‘ಮಿನ್ನಲ್ ಮುರಳಿ’ ಚಿತ್ರದೊಂದಿಗೆ ಭಾರಿ ಯಶಸ್ಸನ್ನು ಗಳಿಸಿದರು.
ಇದನ್ನೂ ಓದಿ:‘ಪುಷ್ಪ 2’ ಬ್ಲಾಕ್ ಬಸ್ಟರ್ ಬಳಿಕ ಅಲ್ಲು ಅರ್ಜುನ್ ಗುರಿಯೇ ಬೇರೆ
ಆ ಬಳಿಕ ಅವರು ‘ಜಯ ಜಯ ಜಯ ಜಯ ಹೇ’, ‘ಸೂಕ್ಷ್ಮದರ್ಶಿನಿ, ‘ಫ್ಯಾಲಿಮಿ’ ರೀತಿಯ ಸಿನಿಮಾದಲ್ಲಿ ನಟಿಸಿ ಮನ್ನಣೆ ಗಳಿಸಿದರು. ಬಾಸಿಲ್ ಜೋಸೆಫ್ ನಿರ್ದೇಶನದ ಮೂರು ಚಿತ್ರಗಳು ಭಾರಿ ಹಿಟ್ ಆಗಿದ್ದವು. ಕೇವಲ ಮೂರು ಚಿತ್ರಗಳನ್ನು ನಿರ್ದೇಶಿಸಿದ್ದ ಬಾಸಿಲ್, ಈಗ ನೇರವಾಗಿ ಬನ್ನಿ ಜೊತೆ ಚಿತ್ರ ಮಾಡಲಿದ್ದಾರೆ ಎಂದು ಚಲನಚಿತ್ರ ವಲಯಗಳಲ್ಲಿ ಮಾತನಾಡಲಾಗುತ್ತಿದೆ. ಈ ಜೋಡಿಯ ಮುಂಬರುವ ಯೋಜನೆಯ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ವರದಿಯಾಗಿದೆ.
ಕೇರಳದಲ್ಲಿ ಅಲ್ಲು ಅರ್ಜುನ್ಗೆ ಕ್ರೇಜ್ ಇದೆ. ಮಲಯಾಳಿ ಪ್ರೇಕ್ಷಕರು ಪ್ರೀತಿಯಿಂದ ಬನ್ನಿಯನ್ನು ಮಲ್ಲು ಅರ್ಜುನ್ ಎಂದು ಕರೆಯುತ್ತಾರೆ. ಈಗ, ಅಲ್ಲು ಅರ್ಜುನ್ ಯಶಸ್ವಿ ನಿರ್ದೇಶಕ ಬಾಸಿಲ್ ಜೋಸೆಫ್ ನಿರ್ದೇಶನದಲ್ಲಿ ಚಿತ್ರ ಮಾಡುತ್ತಾರೆ ಎಂಬ ಮಾತು ಚಲನಚಿತ್ರ ವಲಯಗಳಲ್ಲಿ ವೈರಲ್ ಆಗಿರುವುದರಿಂದ, ಈ ಪ್ರಾಜೆಕ್ಟ್ ಸಾಕಷ್ಟು ಚರ್ಚೆ ಮೂಡಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



