Rakshit Shetty: ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಏನೆಲ್ಲ ಇದೆ? ಟ್ರೇಲರ್​ ರಿಲೀಸ್​ ವೇಳೆ ಮಾಹಿತಿ ಬಿಟ್ಟುಕೊಟ್ಟ ರಕ್ಷಿತ್​ ಶೆಟ್ಟಿ

Updated on: Jul 11, 2023 | 7:00 AM

Hostel Hudugaru Bekagiddare: ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ಈಗಾಗಲೇ ರಕ್ಷಿತ್​ ಶೆಟ್ಟಿ ಅವರು ಈ ಚಿತ್ರವನ್ನು ಎರಡು ಬಾರಿ ನೋಡಿದ್ದಾರೆ.

ನಟ ರಕ್ಷಿತ್ ಶೆಟ್ಟಿ ಅವರು ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare) ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದಾರೆ. ಜುಲೈ 21ರಂದು ಈ ಚಿತ್ರ ರಿಲೀಸ್​ ಆಗಲಿದೆ. ಹೊಸ ಕಲಾವಿದರ ಜೊತೆಗೆ ರಮ್ಯಾ, ದಿಗಂತ್​ ಮಂಚಾಲೆ, ಪವನ್​ ಕುಮಾರ್​, ರಿಷಬ್​ ಶೆಟ್ಟಿ ಅವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿತಿನ್​ ಕೃಷ್ಣಮೂರ್ತಿ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈಗ ಟ್ರೇಲರ್​ (Hostel Hudugaru Bekagiddare Trailer) ಬಿಡುಗಡೆ ಆಗಿದ್ದು, ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಮೇಲಿನ ಹೈಪ್​ ಹೆಚ್ಚಾಗಿದೆ. ರಕ್ಷಿತ್​ ಶೆಟ್ಟಿ ಅವರು ಈ ಸಿನಿಮಾವನ್ನು ಈಗಾಗಲೇ ಎರಡು ಬಾರಿ ನೋಡಿದ್ದಾರೆ. ಪ್ರೀಮಿಯರ್ ಶೋ ದಿನ ಮತ್ತೊಮ್ಮೆ ನೋಡುವುದಾಗಿ ತಿಳಿಸಿದ್ದಾರೆ. ‘ಕನ್ನಡದಲ್ಲಿ ನಾವು ಇಂಥ ಸಿನಿಮಾ ಮಾಡಿದ್ದೇವೆ ಎಂಬುದು ಹೆಮ್ಮೆ. ಕನ್ನಡ ಚಿತ್ರರಂಗಕ್ಕೆ ಭರವಸೆಯ ತಂತ್ರಜ್ಞರು ಸಿಕ್ಕಿದ್ದಾರೆ. ನೀವೆಲ್ಲ ಈ ಸಿನಿಮಾವನ್ನು ತುಂಬ ಎಂಜಾಯ್​ ಮಾಡುತ್ತೀರಿ. ತುಂಬ ಕಾಮಿಡಿ ಇದೆ. ಯಾರಿಗೂ ನಿರಾಸೆ ಆಗಲ್ಲ. ಒಂಚೂರು ತರಲೆ ಡೈಲಾಗ್​ ಇರಬಹುದು. ಆದರೂ ಇದು ಫ್ಯಾಮಿಲಿ ಸಿನಿಮಾ. ಕಾಲೇಜು ಹುಡುಗರು ಮೊದಲು ಈ ಸಿನಿಮಾ ನೋಡುತ್ತಾರೆ’ ಎಂದು ರಕ್ಷಿತ್​ ಶೆಟ್ಟಿ (Rakshit Shetty) ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More