Rakshit Shetty: ರಕ್ಷಿತ್​ ಶೆಟ್ಟಿ ಜನ್ಮದಿನ: ಈಗ ‘ಸಿಂಪಲ್​ ಸ್ಟಾರ್​’ ಸಂಪೂರ್ಣ ಗಮನ ಇರೋದು ಯಾವ ಚಿತ್ರದ ಮೇಲೆ?

Rakshit Shetty Birthday: ರಕ್ಷಿತ್​ ಶೆಟ್ಟಿ ಅಭಿಮಾನಿಗಳು ಈ ಸಿನಿಮಾ ಮೇಲೆ ವಿಶೇಷವಾದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರವನ್ನು ಬಹಳ ಕಾಳಜಿ ವಹಿಸಿ ತೆರೆಗೆ ತರುವ ಪ್ರಯತ್ನ ಆಗುತ್ತಿದೆ.

Rakshit Shetty: ರಕ್ಷಿತ್​ ಶೆಟ್ಟಿ ಜನ್ಮದಿನ: ಈಗ ‘ಸಿಂಪಲ್​ ಸ್ಟಾರ್​’ ಸಂಪೂರ್ಣ ಗಮನ ಇರೋದು ಯಾವ ಚಿತ್ರದ ಮೇಲೆ?
ರಕ್ಷಿತ್​ ಶೆಟ್ಟಿ
Follow us
ಮದನ್​ ಕುಮಾರ್​
|

Updated on: Jun 06, 2023 | 7:00 AM

ಕನ್ನಡ ಚಿತ್ರರಂಗದಲ್ಲಿ ವಿಶೇಷವಾಗಿ ಗುರುತಿಸಿಕೊಂಡವರು ನಟ ರಕ್ಷಿತ್​ ಶೆಟ್ಟಿ (Rakshit Shetty). ತಮ್ಮದೇ ಶೈಲಿಯಲ್ಲಿ ಸಿನಿಮಾ ಮಾಡುವ ಮೂಲಕ ಅವರು ಛಾಪು ಮೂಡಿಸಿದ್ದಾರೆ. ಪ್ರತಿ ಸಿನಿಮಾದಲ್ಲೂ ಹೊಸದಾಗಿ ಏನನ್ನೋ ಪ್ರಯತ್ನಿಸುತ್ತಾರೆ. ಅವರ ನಿರ್ದೇಶನಕ್ಕೆ ಪ್ರತ್ಯೇಕ ಫ್ಯಾನ್​ ಬೇಸ್​ ಇದೆ. ಇಂದು (ಜೂನ್​ 6) ರಕ್ಷಿತ್​ ಶೆಟ್ಟಿ ಅವರಿಗೆ ಜನ್ಮದಿನದ (Rakshit Shetty Birthday) ಸಂಭ್ರಮ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಸ್ಯಾಂಡಲ್​ವುಡ್​ನಲ್ಲಿ ಸಾಧನೆ ಮಾಡಿರುವ ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ವಿಶ್​ ಮಾಡುತ್ತಿದ್ದಾರೆ. ಈಗ ರಕ್ಷಿತ್​ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಅದರ ನಡುವೆ ಅವರು ‘ರಿಚರ್ಡ್​ ಆಂಟನಿ’ (Richard Anthony Movie) ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ರಕ್ಷಿತ್​ ಶೆಟ್ಟಿ ಅಭಿಮಾನಿಗಳು ‘ರಿಚರ್ಡ್​ ಆಂಟನಿ’ ಸಿನಿಮಾ ಮೇಲೆ ವಿಶೇಷವಾದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾಗೆ ಬಂಡವಾಳ ಹೂಡಲಿರುವುದು ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ. ಈ ಚಿತ್ರವನ್ನು ಬಹಳ ಕಾಳಜಿ ವಹಿಸಿ ತೆರೆಗೆ ತರುವ ಪ್ರಯತ್ನ ಆಗುತ್ತಿದೆ. ಸ್ಕ್ರಿಪ್ಟ್​ ಬಗ್ಗೆ ರಕ್ಷಿತ್​ ಶೆಟ್ಟಿ ಅವರು ತುಂಬ ಗಮನ ನೀಡುತ್ತಿದ್ದಾರೆ. ‘ರಿಚರ್ಡ್​ ಆಂಟನಿ’ ಚಿತ್ರದ ಸ್ಕ್ರಿಪ್ಟ್​ ಫೈನಲ್​ ಮಾಡಲು ಅವರು ಅಮೆರಿಕಕ್ಕೆ ತೆರಳುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಬೇರೆಲ್ಲ ಕೆಲಸಗಳನ್ನು ಬದಿಗಿಟ್ಟು ಶೇಕಡ ನೂರರಷ್ಟು ತಮ್ಮ ಗಮನವನ್ನು ಈ ಸಿನಿಮಾದ ಸ್ಕ್ರಿಪ್ಟ್​ ಮೇಲೆ ನೀಡುವುದಾಗಿ ಅವರು ತಿಳಿಸಿದ್ದರು.

ಇದನ್ನೂ ಓದಿ: ನಟಿ ಮಯೂರಿ ನಟರಾಜ್​ಗೆ ಬಂಪರ್​ ಚಾನ್ಸ್​; ರಕ್ಷಿತ್​ ಶೆಟ್ಟಿ ನಿರ್ಮಾಣದ ಚಿತ್ರದಲ್ಲಿ ರಾಧೆ ಪಾತ್ರ

ಮೇ 10ರಂದು ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡುವಾಗ ರಕ್ಷಿತ್​ ಶೆಟ್ಟಿ ಅವರು ಈ ವಿಚಾರ ಹಂಚಿಕೊಂಡಿದ್ದರು. ‘ನಾನು ಅಮೆರಿಕಕ್ಕೆ ತೆರಳುತ್ತೇನೆ. ವೋಟ್​ ಮಾಡಬೇಕು ಎಂಬ ಕಾರಣದಿಂದ ಇಷ್ಟು ದಿನಗಳವರೆಗೆ ಕಾದಿದ್ದೆ. ಇಲ್ಲದಿದ್ದರೆ ಈಗಾಗಲೇ ಅಮೆರಿಕಕ್ಕೆ ಹೋಗಿರುತ್ತಿದ್ದೆ. ‘ರಿಚರ್ಡ್​ ಆಂಟನಿ’ ಚಿತ್ರದ ಫೈನಲ್​ ಡ್ರಾಫ್ಟ್​ ಬರೆಯಬೇಕಿದೆ. ಇಲ್ಲಿದ್ದರೆ ಸ್ಕ್ರಿಪ್ಟ್​ ಬರೆಯುವಾಗ ಅವರಿವರು ಫೋನ್​ ಮಾಡುತ್ತಾರೆ. ಅದರಿಂದ ಡಿಸ್ಟರ್ಬ್​ ಆಗತ್ತೆ. ಅಮೆರಿಕಕ್ಕೆ ಹೋದರೆ ಇಲ್ಲಿ ರಾತ್ರಿ ಆದಾಗ ಅಲ್ಲಿ ಬೆಳಗ್ಗೆ ಆಗಿರುತ್ತದೆ. ಯಾರೂ ಡಿಸ್ಟರ್ಬ್​ ಮಾಡಲ್ಲ. ಹಾಗಾಗಿ ಅಲ್ಲಿಗೆ ಹೋಗುತ್ತಿದ್ದೇನೆ’ ಎಂದು ರಕ್ಷಿತ್​ ಶೆಟ್ಟಿ ಹೇಳಿದ್ದರು.

ಇದನ್ನೂ ಓದಿ: ‘ನಮ್ಮನೆ ಯುವರಾಣಿ’ ಮೀರಾ ಹೊಸ ಚಿತ್ರದ ಬಗ್ಗೆ ರಕ್ಷಿತ್​ ಶೆಟ್ಟಿ ನೀಡಿದ್ರು ಬ್ರೇಕಿಂಗ್​​ ನ್ಯೂಸ್​; ಇದಕ್ಕೆ ವಿಹಾನ್​ ಹೀರೋ

ಒಂದು ಸಿನಿಮಾದಲ್ಲಿ ಯಶಸ್ಸು ಸಿಕ್ಕಿತು ಎಂಬ ಕಾರಣಕ್ಕೆ ಅದೇ ರೀತಿಯ ಸಿನಿಮಾಗಳನ್ನೇ ಮುಂದುವರಿಸಿಕೊಂಡು ಹೋಗುವ ಅನೇಕ ಹೀರೋಗಳಿದ್ದಾರೆ. ಆದರೆ ರಕ್ಷಿತ್​ ಶೆಟ್ಟಿ ಅವರು ಆ ಸಾಲಿಗೆ ಸೇರುವವರಲ್ಲ. ‘ಸಿಂಪಲ್ಲಾಗ್​ ಒಂದ್​ ಲವ್​ ಸ್ಟೋರಿ’ ಚಿತ್ರದಿಂದ ಅವರಿಗೆ ಸಾಕಷ್ಟು ಖ್ಯಾತಿ ಸಿಕ್ಕಿತು. ಹಾಗಂತ ಅವರು ಅದೇ ರೀತಿಯ ಪಾತ್ರವನ್ನು ಮುಂದುವರಿಸಲಿಲ್ಲ. ‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ಬೇರೆಯದೇ ರೀತಿ ಕಾಣಿಸಿಕೊಂಡರು. ‘ವಾಸ್ತು ಪ್ರಕಾರ’, ‘ರಿಕ್ಕಿ’, ‘ಕಿರಿಕ್​ ಪಾರ್ಟಿ’, ‘ಗೋಧಿಬಣ್ಣ ಸಾಧಾರಣ ಮೈಕಟ್ಟು’, ‘777 ಚಾರ್ಲಿ’.. ಹೀಗೆ ಎಲ್ಲ ಚಿತ್ರದಲ್ಲೂ ಅವರು ಡಿಫರೆಂಟ್​ ಪಾತ್ರವನ್ನೇ ಪ್ರಯತ್ನಿಸಿದ್ದಾರೆ. ಈಗ ‘ರಿಚರ್ಡ್​ ಆಂಟನಿ’ ಚಿತ್ರದಲ್ಲಿ ಅವರು ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕೌತುಕ ಅಭಿಮಾನಿಗಳಿಗೆ ಇದೆ.

ಇನ್ನು, ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಬಗ್ಗೆ ಹೇಳೋದಾದರೆ ಈ ಚಿತ್ರದಲ್ಲಿ ರಕ್ಷಿತ್​ ಶೆಟ್ಟಿ ಅವರಿಗೆ ಎರಡು ಶೇಡ್​ನ ಪಾತ್ರ ಇರಲಿದೆ. ಅದಕ್ಕಾಗಿ ಅವರು ದೇಹದ ತೂಕ ಹೆಚ್ಚಿಸಿಕೊಂಡಿದ್ದರು. ಹೇಮಂತ್​ ರಾವ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ರಕ್ಷಿತ್​ ಶೆಟ್ಟಿ ಜೊತೆ ರುಕ್ಮಿಣಿ ವಸಂತ್​, ಚೈತ್ರಾ ಆಚಾರ್​ ಮುಂತಾದವರು ನಟಿಸಿದ್ದಾರೆ. ಇದರ ಶೂಟಿಂಗ್​ ಮುಕ್ತಾಯ ಆಗಿದೆ. ಆ ಚಿತ್ರಕ್ಕೆ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ