‘ನಮ್ಮನೆ ಯುವರಾಣಿ’ ಮೀರಾ ಹೊಸ ಚಿತ್ರದ ಬಗ್ಗೆ ರಕ್ಷಿತ್​ ಶೆಟ್ಟಿ ನೀಡಿದ್ರು ಬ್ರೇಕಿಂಗ್​​ ನ್ಯೂಸ್​; ಇದಕ್ಕೆ ವಿಹಾನ್​ ಹೀರೋ

Rakshit Shetty | Paramvah Studios: ವಿಹಾನ್​ ಮತ್ತು ಅಂಕಿತಾ ಅಮರ್​ ಅವರ ಪ್ರತ್ಯೇಕ ಪೋಸ್ಟರ್​ಗಳನ್ನು ರಕ್ಷಿತ್​ ಶೆಟ್ಟಿ ಶೇರ್​ ಮಾಡಿಕೊಂಡಿದ್ದಾರೆ. ಆ ಮೂಲಕ ಅವರು ಹೊಸ ಸುದ್ದಿ ನೀಡಿದ್ದಾರೆ.

‘ನಮ್ಮನೆ ಯುವರಾಣಿ’ ಮೀರಾ ಹೊಸ ಚಿತ್ರದ ಬಗ್ಗೆ ರಕ್ಷಿತ್​ ಶೆಟ್ಟಿ ನೀಡಿದ್ರು ಬ್ರೇಕಿಂಗ್​​ ನ್ಯೂಸ್​; ಇದಕ್ಕೆ ವಿಹಾನ್​ ಹೀರೋ
ಅಂಕಿತಾ ಅಮರ್, ರಕ್ಷಿತ್ ಶೆಟ್ಟಿ, ವಿಹಾನ್
Follow us
TV9 Web
| Updated By: ಮದನ್​ ಕುಮಾರ್​

Updated on: Jul 17, 2022 | 1:20 PM

ಕಿರುತೆರೆ ಕಲಾವಿದರ ಮುಂದಿನ ನಿಲ್ದಾಣವೇ ಹಿರಿತೆರೆ. ಧಾರಾವಾಹಿಗಳಲ್ಲಿ ಮಿಂಚಿದ ಅನೇಕ ನಟ-ನಟಿಯರು ನಂತರ ಚಿತ್ರರಂಗಕ್ಕೆ ಕಾಲಿಟ್ಟು ದೊಡ್ಡ ಹೆಸರು ಮಾಡಿದ ಉದಾಹರಣೆ ಸಾಕಷ್ಟಿದೆ. ರಚಿತಾ ರಾಮ್, ಯಶ್​, ರಾಧಿಕಾ ಪಂಡಿತ್, ಶಾರುಖ್​ ಖಾನ್​ ಮುಂತಾದವರೆಲ್ಲ ಇದೇ ಹಾದಿಯಲ್ಲಿ ಸಾಗಿ ಬಂದವರು. ಈಗ ಕಿರುತೆರೆ ನಟಿ ಅಂಕಿತಾ​ ಅಮರ್​ (Ankita Amar) ಅವರು ಕೂಡ ಸಿನಿಮಾ ಕ್ಷೇತ್ರದಲ್ಲಿ ಹಲವು ಪ್ರಾಜೆಕ್ಟ್​ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ‘ನಮ್ಮನೆ ಯುವರಾಣಿ’ ಧಾರಾವಾಹಿಯಲ್ಲಿ ಮೀರಾ ಪಾತ್ರ ಮಾಡಿ ಫೇಮಸ್​ ಆದ ಅಂಕಿತಾ ಅವರ ಹೊಸ ಸಿನಿಮಾ ಬಗ್ಗೆ ಬ್ರೇಕಿಂಗ್​ ನ್ಯೂಸ್​ ಹೊರಬಿದ್ದಿದೆ. ಈ ಚಿತ್ರಕ್ಕೆ ‘ಪಂಚತಂತ್ರ’ ಖ್ಯಾತಿಯ ನಟ ವಿಹಾನ್​ (Vihaan) ಅವರು ಹೀರೋ. ಅಂಕಿತಾ ಅಮರ್ ಮತ್ತು ವಿಹಾನ್​​ ಜೋಡಿಯಾಗಿ ನಟಿಸಲಿರುವ ಈ ಸಿನಿಮಾವನ್ನು ರಕ್ಷಿತ್​ ಶೆಟ್ಟಿ (Rakshit Shetty) ನಿರ್ಮಾಣ ಮಾಡಲಿದ್ದಾರೆ. ಅವರ ಒಡೆತನದ ಪರಂವಾ ಸ್ಟುಡಿಯೋಸ್​ ಮೂಲಕ ಈ ಚಿತ್ರಕ್ಕೆ ಬಂಡವಾಳ ಹೂಡಲಾಗುತ್ತಿದೆ.

ನಟ ಮತ್ತು ನಿರ್ದೇಶಕನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ರಕ್ಷಿತ್​ ಶೆಟ್ಟಿ ಅವರು ಬ್ಯುಸಿ ಆಗಿದ್ದಾರೆ. ಅವರ ನಿರ್ಮಾಣದಲ್ಲಿ ಗಮನಾರ್ಹ ಸಿನಿಮಾಗಳು ಮೂಡಿಬರುತ್ತಿವೆ. ‘777 ಚಾರ್ಲಿ’ ಚಿತ್ರದ ಗೆಲುವಿನ ಬಳಿಕ ಅವರು ಹೊಸ ಸಿನಿಮಾದ ನಿರ್ಮಾಣದತ್ತ ಗಮನ ಹರಿಸಿದ್ದಾರೆ. ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸುವವರು ಯಾರು ಎಂಬುದನ್ನು ರಕ್ಷಿತ್ ಶೆಟ್ಟಿ ಅವರು ಸೋಶಿಯಲ್​ ಮೀಡಿಯಾ ಮೂಲಕ ಬಹಿರಂಗ ಪಡಿಸಿದ್ದಾರೆ. ವಿಹಾನ್​ ಮತ್ತು ಅಂಕಿತಾ ಅಮರ್​ ಅವರ ಪ್ರತ್ಯೇಕ ಪೋಸ್ಟರ್​ಗಳನ್ನು ಅವರು ಶೇರ್​ ಮಾಡಿಕೊಂಡಿದ್ದಾರೆ.

‘ಪಂಚತಂತ್ರ’ ಸಿನಿಮಾ ತೆರೆಕಂಡ ಬಳಿಕ ನಟ ವಿಹಾನ್​ ಅವರು ಯಾವುದೇ ಚಿತ್ರ ಒಪ್ಪಿಕೊಂಡಿರಲಿಲ್ಲ. ಈಗ ಅವರು ಈ ಹೊಸ ಸಿನಿಮಾ ಮೂಲಕ ಮತ್ತೆ ಸುದ್ದಿ ಆಗಿದ್ದಾರೆ. ರಕ್ಷಿತ್​ ಶೆಟ್ಟಿ ಅವರ ಟೀಮ್​ನಲ್ಲಿ ಗುರುತಿಸಿಕೊಂಡಿರುವ ಚಂದ್ರಜಿತ್​ ಬೆಳ್ಳಿಯಪ್ಪ ಅವರು ಈ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ. ಸದ್ಯ ಪ್ರೀ-ಪ್ರೊಡಕ್ಷನ್​ ಕೆಲಸಗಳು ಚಾಲ್ತಿಯಲ್ಲಿವೆ. ಆಗಸ್ಟ್​ನಲ್ಲಿ ಚಿತ್ರದ ಶೀರ್ಷಿಕೆ ಅನೌನ್ಸ್​ ಆಗಲಿದ್ದು, ಸೆಪ್ಟೆಂಬರ್​ನಲ್ಲಿ ಶೂಟಿಂಗ್​ ಶುರುವಾಗಲಿದೆ.

ಇದನ್ನೂ ಓದಿ
Image
ಕಿರುತೆರೆ ನಟಿ ಪೂರ್ಣಿಮಾಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ; ಖಾಸಗಿ ಹಾಸ್ಪಿಟಲ್​ ಬೇಡ ಅಂದಿದ್ದಕ್ಕೆ ಕಾರಣ ಏನು?
Image
ಮನೆಯಲ್ಲೇ ಸಿಕ್ತು ಖ್ಯಾತ ಕಿರುತೆರೆ ನಟಿಯ ಶವ; ಬಾಯ್​ಫ್ರೆಂಡ್ ಮೇಲೆ ಮೂಡಿತು ಅನುಮಾನ
Image
Chetana Raj Death: ಫ್ಯಾಟ್ ಸರ್ಜರಿ ವೇಳೆ ಕಿರುತೆರೆ ನಟಿ ಚೇತನಾ ರಾಜ್ ಅನುಮಾನಾಸ್ಪದ ಸಾವು
Image
ಧಾರಾವಾಹಿ ಮುಗಿದು ಮೂರು ವರ್ಷವಾದರೂ ಬಂದಿಲ್ಲ ಸಂಭಾವನೆ; ಕಿರುತೆರೆ ನಟಿಯ ಅಸಮಾಧಾನ

ಅಮೆರಿಕಾದ ನ್ಯೂಯಾರ್ಕ್‌ ಫಿಲ್ಮ್​ ಅಕಾಡೆಮಿಯಲ್ಲಿ ಪದವಿ ಪಡೆದು, ಅಲ್ಲಿಯೇ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿರುವ ಶ್ರೀವಾತ್ಸವನ್‌ ಸೆಲ್ವರಾಜನ್‌ ಅವರು ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದಾರೆ. ಗಗನ್‌ ಬದೇರಿಯಾ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ