AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗೆ ಶೂಟಿಂಗ್ ಪೂರ್ಣ; ರಿಲೀಸ್ ದಿನಾಂಕ ಘೋಷಣೆಗೆ ಕಾದ ಫ್ಯಾನ್ಸ್

Sapta Sagaradaache Yello Movie: ಈ ಸಿನಿಮಾದ ಮೂಲಕ ಒಂದು ಗಂಭೀರವಾದ ಪ್ರೇಮಕತೆಯನ್ನು ನಿರ್ದೇಶಕ ಹೇಮಂತ್​ ರಾವ್​ ಹೇಳಲಿದ್ದಾರೆ. ಈ ಚಿತ್ರದ ಕಥೆಯ ಬಗ್ಗೆ ರಕ್ಷಿತ್​ ಹೆಚ್ಚು ಭರವಸೆ ಹೊಂದಿದ್ದಾರೆ.

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗೆ ಶೂಟಿಂಗ್ ಪೂರ್ಣ; ರಿಲೀಸ್ ದಿನಾಂಕ ಘೋಷಣೆಗೆ ಕಾದ ಫ್ಯಾನ್ಸ್
ರಕ್ಷಿತ್-ರುಕ್ಮಿಣಿ ವಸಂತ್​
Follow us
ರಾಜೇಶ್ ದುಗ್ಗುಮನೆ
|

Updated on:Mar 20, 2023 | 1:04 PM

ರಕ್ಷಿತ್ ಶೆಟ್ಟಿ (Rakshit Shetty) ಅವರು ಸಿನಿಮಾ ಆಯ್ಕೆಯಲ್ಲಿ ಭಿನ್ನತೆ ತೋರುತ್ತಾರೆ. ಯಾವುದೇ ಸಿನಿಮಾ ಒಪ್ಪಿಕೊಂಡರೂ ಅದರಲ್ಲಿ ಒಂದು ಹೊಸತನ ಇರುತ್ತದೆ. ಅವರು ನಿರ್ಮಿಸಿ, ನಟಿಸಿದ್ದ ‘777 ಚಾರ್ಲಿ’ ಸಿನಿಮಾ (777 Charlie) ಸೂಪರ್ ಹಿಟ್ ಆಯಿತು. ಈ ಸಿನಿಮಾ 150 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ಈ ಚಿತ್ರ ತೆರೆಕಂಡ ಬಳಿಕ ರಕ್ಷಿತ್ ಅವರು ತಮ್ಮ ಸಂಪೂರ್ಣ ಗಮನವನ್ನು ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಮೇಲೆ ಹರಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಈಗ ಪೂರ್ಣಗೊಂಡಿದೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭ ಆಗಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ವೇಗ ನೀಡಲು ತಂಡ ನಿರ್ಧರಿಸಿದೆ.

‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಹೇಮಂತ್​ ಎಂ. ರಾವ್​ ಅವರು ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ಅನಂತ್ ನಾಗ್, ಶ್ರುತಿ ಹರಿಹರನ್ ಮೊದಲಾದವರು ನಟಿಸಿದ್ದರು. ಈ ಸಿನಿಮಾ ಯಶಸ್ಸು ಕಂಡಿತ್ತು. ಕನ್ನಡ ಮಂದಿ ಚಿತ್ರವನ್ನು ಮೆಚ್ಚಿಕೊಂಡಿದ್ದರು. ಇದಾದ ಬಳಿಕ ರಕ್ಷಿತ್ ಹಾಗೂ ಹೇಮಂತ್ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ಚಿತ್ರಕ್ಕೆ ಬರೋಬ್ಬರಿ 137 ದಿನ ಶೂಟ್ ಮಾಡಲಾಗಿದೆ. ರಕ್ಷಿತ್​ಗೆ ಜೊತೆಯಾಗಿ ರುಕ್ಮಿಣಿ ವಸಂತ್​ ನಟಿಸಿದ್ದಾರೆ.

ಇದನ್ನೂ ಓದಿ: ‘ಗೊತ್ತಿಲ್ಲದ ವಿಚಾರದಲ್ಲಿ ಅಸಂಬದ್ಧ ಹೇಳಿಕೆ ಏಕೆ?’; ಕಾಂಗ್ರೆಸ್ ನಾಯಕ ಮಿಥುನ್ ರೈ ಹೇಳಿಕೆಗೆ ರಕ್ಷಿತ್ ಶೆಟ್ಟಿ ತಿರುಗೇಟು

‘137 ಸೊಗಸಾದ ದಿನಗಳ ಚಿತ್ರೀಕರಣಕ್ಕೆ ಪೂರ್ಣವಿರಾಮ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಅಲೆಗಳು ಚಿತ್ರಮಂದಿರದ ತೀರವನ್ನು ಅಪ್ಪಳಿಸಲು ಸಿದ್ಧವಾದಾಗ, ಅದನ್ನು ವೀಕ್ಷಿಸಲು ನಿಮ್ಮ ಆಪ್ತರೊಂದಿಗೆ ನೀವು ಇರುತ್ತೀರಿ ಎಂದು ನಾವು ಭಾವಿಸುತ್ತೇವೆ’ ಎಂಬುದಾಗಿ ರಕ್ಷಿತ್ ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಮೇಕಿಂಗ್ ವಿಡಿಯೋನ ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ರಕ್ಷಿತ್ ಶೆಟ್ಟಿ ಮುಂದಿದೆ ಹಲವು ಇಂಟರೆಸ್ಟಿಂಗ್ ಪ್ರಾಜೆಕ್ಟ್​ಗಳು; ಶಾರ್ಟ್​​ಫಾರ್ಮ್​​ನಲ್ಲಿ ಮಾಹಿತಿ ನೀಡಿದ ಹೀರೋ

ಈ ಸಿನಿಮಾದ ಮೂಲಕ ಒಂದು ಗಂಭೀರವಾದ ಪ್ರೇಮಕತೆಯನ್ನು ನಿರ್ದೇಶಕ ಹೇಮಂತ್​ ರಾವ್​ ಹೇಳಲಿದ್ದಾರೆ ಎನ್ನಲಾಗಿದೆ. ಈ ಮೊದಲು ರಿಲೀಸ್ ಆದ ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಚಿತ್ರ ಕೂಡ ಗಂಭೀರ ಕಥೆಯನ್ನೇ ಹೊಂದಿತ್ತು. ‘ಸಪ್ತ ಸಾಗರದಾಚೆ ಎಲ್ಲೋ’ ಕಥೆಯ ಬಗ್ಗೆ ರಕ್ಷಿತ್​ ಹೆಚ್ಚು ಭರವಸೆ ಹೊಂದಿದ್ದಾರೆ. ಈ ಚಿತ್ರದ ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ. ಸಿನಿಮಾ ರಿಲೀಸ್ ದಿನಾಂಕಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:03 pm, Mon, 20 March 23