ಬಿಗ್ ಬಾಸ್ ಮನೆಯಲ್ಲಿ ವಿಲನ್ ಯಾರು ಎಂದು ನಿರ್ಧರಿಸೋ ಸಮಯ

Edited By:

Updated on: Dec 11, 2025 | 10:12 AM

ಬಿಗ್ ಬಾಸ್ ಮನೆಯಲ್ಲಿ ವಿಲನ್ ಯಾರು ಎಂಬುದನ್ನು ನಿರ್ಧರಿಸಬೇಕು. ಈ ರೀತಿಯ ಟಾಸ್ಕ್ ಅನ್ನು ನೀಡಲಾಗಿತ್ತು. ಇದನ್ನು ಯಶಸ್ವಿಯಾಗಿ ಸ್ಪರ್ಧಿಗಳು ನಿರ್ವಹಿಸಿದ್ದಾರೆ. ಹಾಗಾದರೆ ಬಿಗ್ ಬಾಸ್ ಮನೆಯ ಈ ಚಟುವಟಿಕೆಯಲ್ಲಿ ವಿಲನ್ ಯಾರು? ಇದನ್ನು ನಿರ್ಧರಿಸಬೇಕಾದ ಅನಿವಾರ್ಯತೆ ಸ್ಪರ್ಧಿಗಳಿಗೆ ಇದೆ ಅನ್ನೋದು ವಿಶೇಷ.

ಬಿಗ್ ಬಾಸ್ ಮನೆಯಲ್ಲಿ ಈ ವಾರ ವಿಲನ್ ಟಾಸ್ಕ್ ನೀಡಲಾಗಿದೆ. ಬಿಗ್ ಬಾಸ್ ಆಡಳಿತ ಇಲ್ಲಿ ಇರೋದಿಲ್ಲ. ಬದಲಿಗೆ ಅಲ್ಲಿ ಇರೋದು ವಿಲನ್ ಆಡಳಿತ ಎಂದೇ ಹೇಳಬಹುದು. ವಿಲನ್ ಆಡಳಿತದಲ್ಲಿ ಎಲ್ಲವೂ ಉಲ್ಟಾ ಪಲ್ಟಾ. ವಿವಿಧ ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ಬಿಗ್ ಬಾಸ್ ಮನೆಯ ವಿಲನ್ ಯಾರು ಎಂದು ಹೇಳಬೇಕು. ಈ ವೇಳೆ ಕಾವ್ಯಾ ಅವರು ರಕ್ಷಿತಾ ಅವರ ಹೆಸರನ್ನು ತೆಗೆದುಕೊಂಡರು. ಈ ಹೆಸರನ್ನು ತೆಗೆದುಕೊಂಡ ನಂತರ ಇಬ್ಬರ ಮಧ್ಯೆ ವಾಗ್ವಾದ ಆಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More