ಜೈಲಲ್ಲಿ ದರ್ಶನ್ ಹೇಳಿದ ಮಾತು ನೆನಪಿಸಿಕೊಂಡ ದಿನಕರ್; ಅಭಿಮಾನಿಗಳಿಗೆ ಹೊಸ ಚೈತನ್ಯ
ದರ್ಶನ್ ಅವರು ಜೈಲಿನಲ್ಲಿ ಇದ್ದಾರೆ. ಈ ವಿಷಯ ಅವರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ. ಇದರ ಮಧ್ಯೆಯೂ ‘ಡೆವಿಲ್’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರವನ್ನು ಅಭಿಮಾನಿಗಳು ಮುಗಿಬಿದ್ದು ವೀಕ್ಷಣೆ ಮಾಡುತ್ತಿದ್ದಾರೆ. ಈ ಸಿನಿಮಾ ಹೇಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಅದರ ಜೊತೆಗೆ ದಿನಕರ್ ಆಡಿದ ಮಾತು ಕೂಡ ಗಮನ ಸೆಳೆದಿದೆ.
ದಿನಕರ್ ಅವರು ‘ಡೆವಿಲ್’ ಸಿನಿಮಾ ವೀಕ್ಷಣೆ ಮಾಡುವುದಕ್ಕೂ ಮೊದಲು ಅಭಿಮಾನಿಗಳ ಜೊತೆ ಮಾತನಾಡಿದರು. ಈ ವೇಳೆ ಅವರು ಎರಡು ವಾರಗಳ ಹಿಂದೆ ದರ್ಶನ್ ಭೇಟಿ ಮಾಡಿದಾಗ ಆಡಿದ ಮಾತನ್ನು ನೆನಪಿಸಿಕೊಂಡರು. ‘ನನ್ನ ಸೆಲೆಬ್ರಿಟೀಸ್ ನೋಡ್ಕೋತಾರೆ ಎಂಬ ಕಾನ್ಫಿಡೆನ್ಸ್ನಲ್ಲಿ ಇದ್ದಾನೆ. ಅವನು ಕುಗ್ಗಿಲ್ಲ’ ಎಂದಿದ್ದಾರೆ ದಿನಕರ್. ಈ ವಿಷಯ ಫ್ಯಾನ್ಸ್ ಖುಷಿಗೆ ಕಾರಣ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

