Viral Video: ಪುಟ್ಟ ಬಾಲಕಿಯ ಮೈಮೇಲೆ ರಾಮ್ ಮತ್ತು ರಾಧಾ ಹೆಸರುಗಳು! ವೈದ್ಯರಿಗೆ ಶಾಕ್, ಎಲ್ಲಾ ದೇವರ ದಯೆ ಎನ್ನುತ್ತಿದ್ದಾರೆ ಜನ
ಬಾಲಕಿಯನ್ನು ಪರೀಕ್ಷಿಸಿದ ಪಿಎಚ್‌ಸಿ ವೈದ್ಯ ಸಂಜಯ್, ಬಾಲಕಿಯನ್ನು ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಇಂತಹ ಘಟನೆಯನ್ನು ನಾನು ನೋಡಿಲ್ಲ, ಕೇಳಿಲ್ಲ ಎಂದು ಡಾ. ಸಂಜಯ್ ಹೇಳಿದ್ದಾರೆ. ಮತ್ತೊಂದೆಡೆ ದೇವರಿಗೆ ಪ್ರೀತಿಪಾತ್ರರಾದವರಿಗೆ ದೇವರು ಈ ರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಸಾಕ್ಷಿಯ ತಾತ ಶಿವಬಾಲಕ ಹೇಳುತ್ತಾರೆ.
ಸೃಷ್ಟಿಯಲ್ಲಿ ಸದಾ ಹಲವು ವಿಚಿತ್ರ… ವಿಶೇಷತೆಗಳು ಘಟಿಸುತ್ತಿರುತ್ತವೆ… ಆಧುನಿಕ ಕಾಲದಲ್ಲೂ ಆಗಾಗ ವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಿದ್ದು, ವಿಜ್ಞಾನ ಮತ್ತು ವೈದ್ಯರಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಹರ್ದೋಯಿಯಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. 8 ವರ್ಷದ ಬಾಲಕಿಯ ದೇಹದಲ್ಲಿ ರಾಧೆ-ರಾಧೆ, ರಾಮ್-ರಾಮ್ ಎಂಬ ಪದಗಳು ಸ್ವಯಂಚಾಲಿತವಾಗಿ ಮೂಡಿವೆ. ಅದನ್ನು ಕಂಡು ಬಾಲಕಿಯ ಕುಟುಂಬಸ್ಥರು ಮಾತ್ರವಲ್ಲದೇ ವೈದ್ಯರೂ ಅಚ್ಚರಿಗೊಂಡಿದ್ದಾರೆ. ಇದು ಹೀಗೇಕೆ ಸಂಭವಿಸುತ್ತಿದೆ ಎಂದು ಇಲ್ಲಿಯವರೆಗೆ ಯಾರಿಗೂ ಅರ್ಥವಾಗಿಲ್ಲ. ಕೆಲವರು ಇದನ್ನು ಪವಾಡ ಎಂದು ಕರೆಯುತ್ತಾರೆ.. ಮತ್ತು ಕೆಲವರು ಇದನ್ನು ದೈವಿಕ ಅನುಗ್ರಹ ಎಂದು ಕರೆಯುತ್ತಾರೆ. ಆದರೆ ದೇವರನ್ನು ಪೂಜಿಸುವುದು ಎಂದರೆ ಚಿಕ್ಕ ಹುಡುಗಿಗೆ ತುಂಬಾ ಇಷ್ಟ. ಆದ್ದರಿಂದಲೇ ಹೀಗೆ ಆಗುತ್ತದೆ ಎಂದು ಬಾಲಕಿಯ ತಂದೆ ಹೇಳಿದ್ದಾರೆ.
ಹರ್ದೋಯ್‌ನ ಮಧೋಗಂಜ್ ಬ್ಲಾಕ್‌ನ ಸಹಿಜನ್ ಗ್ರಾಮದಲ್ಲಿ ವಾಸಿಸುತ್ತಿರುವ ರೈತ ದೇವೇಂದ್ರ ಅವರ ಪುತ್ರಿ ಈ ಬೆಳವಣಿಗೆಗೆ ಜೀವಂತ ಸಾಕ್ಷಿಯಾಗಿದ್ದಾರೆ. 15-20 ದಿನಗಳಿಂದ ದೇಹದ ಮೇಲೆ ದೈವಿಕ ನಾಮಗಳು ಕಾಣಿಸಿಕೊಳ್ಲುತ್ತಿವೆ. ಹಿಂದಿ ಭಾಷೆಯಲ್ಲಿ ಹೊರಹೊಮ್ಮುವ ಈ ಹೆಸರುಗಳನ್ನು ಸ್ಪಷ್ಟವಾಗಿ ಓದಬಹುದಾಗಿದೆ. ಇದನ್ನು ಕಂಡ ಕುಟುಂಬಸ್ಥರು ಆರಂಭದಲ್ಲಿ ತಲೆಕೆಡಿಸಿಕೊಳ್ಳಲಿಲ್ಲ. ನಂತರ ಬಾಲಕಿಯ ಸ್ಥಿತಿಯನ್ನು ಪರಿಗಣಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನು ನೋಡಿದ ವೈದ್ಯರೂ ಆಶ್ಚರ್ಯಚಕಿತರಾಗಿದ್ದಾರೆ. ಆದರೆ ವೈದ್ಯರಿಂದಲೂ ಬಾಲಕಿಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ವೈದ್ಯಕೀಯ ವಿಜ್ಞಾನದಲ್ಲಿ ಇದುವರೆಗೆ ಇಂತಹ ಯಾವುದೇ ಪ್ರಸಂಗಗಳು ದಾಖಲಾಗಿಲ್ಲ ಎಂದು ವೈದ್ಯರು ಹೇಳುತ್ತಾರೆ. ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದ ನಂತರ ಸಾಕ್ಷಿ ಅವರ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಆದರೆ ರೈತ ದೇವೇಂದ್ರ ತಮ್ಮ ಮಗಳ ಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದು ಒಂದಲ್ಲ ಎರಡಲ್ಲ 15-20 ದಿನಗಳಿಂದ ಹೀಗೆ ಕಮಡುಬರುತ್ತಿದೆ. ಇದ್ದಕ್ಕಿದ್ದಂತೆ ಸಾಕ್ಷಿಯ ಕೈಗಳು, ಕಾಲುಗಳು, ಹೊಟ್ಟೆ ಮತ್ತು ಬೆನ್ನಿನ ಮೇಲೆ ದೈವಿಕ ನಾಮಗಳು ಮೂಡಲಾರಂಭಿಸಿವೆ. ಈ ವಿಷಯ ತಿಳಿದ ಕುಟುಂಬಸ್ಥರು ಮಾತ್ರವಲ್ಲ, ಬಾಲಕಿ ವ್ಯಾಸಂಗ ಮಾಡುತ್ತಿರುವ ಶಾಲೆಯ ಸಹ ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರು, ಆಸ್ಪತ್ರೆ ವೈದ್ಯರು ಕೂಡ ಬೆಚ್ಚಿಬಿದ್ದಿದ್ದಾರೆ.
ಬಾಲಕಿಯನ್ನು ಪರೀಕ್ಷಿಸಿದ ಪಿಎಚ್‌ಸಿ ವೈದ್ಯ ಸಂಜಯ್, ಬಾಲಕಿಯನ್ನು ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಇಂತಹ ಘಟನೆಯನ್ನು ನಾನು ನೋಡಿಲ್ಲ, ಕೇಳಿಲ್ಲ ಎಂದು ಡಾ. ಸಂಜಯ್ ಹೇಳಿದ್ದಾರೆ. ಮತ್ತೊಂದೆಡೆ ದೇವರಿಗೆ ಪ್ರೀತಿಪಾತ್ರರಾದವರಿಗೆ ದೇವರು ಈ ರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಸಾಕ್ಷಿಯ ತಾತ ಶಿವಬಾಲಕ ಹೇಳುತ್ತಾರೆ. ಅವರ ಇಡೀ ಕುಟುಂಬದವರು ದೈವಿಕ ಭಕ್ತರು ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ