AUS vs AFG: ಅಫ್ಘಾನಿಸ್ತಾನ ಪ್ರ್ಯಾಕ್ಟೀಸ್ ಸೆಷನ್​ನಲ್ಲಿ ಕ್ರಿಕೆಟ್ ದೇವರು: ಅಫ್ಘಾನ್ ಗೆಲುವಿಗೆ ಸಚಿನ್ ಮಾಸ್ಟರ್ ಪ್ಲಾನ್?

AUS vs AFG: ಅಫ್ಘಾನಿಸ್ತಾನ ಪ್ರ್ಯಾಕ್ಟೀಸ್ ಸೆಷನ್​ನಲ್ಲಿ ಕ್ರಿಕೆಟ್ ದೇವರು: ಅಫ್ಘಾನ್ ಗೆಲುವಿಗೆ ಸಚಿನ್ ಮಾಸ್ಟರ್ ಪ್ಲಾನ್?

Vinay Bhat
|

Updated on: Nov 07, 2023 | 12:47 PM

Sachin Tendulkar and Afghanistan Cricket Team: ಸಚಿನ್ ಅಫ್ಘಾನಿಸ್ತಾನ ತಂಡದ ಆಟಗಾರರ ಜೊತೆ ಸಮಯ ಕಳೆದರು. ಅಫ್ಘಾನಿಸ್ತಾನ ಆಟಗಾರರು ವಾಂಖೆಡೆಯಲ್ಲಿ ಅಭ್ಯಾಸ ಮಾಡುತ್ತಿರುವ ಸಂದರ್ಭ ಸಚಿನ್ ತೆಂಡೂಲ್ಕರ್ ಅವರು ಆಗಮಿಸಿ ಕೆಲ ಟಿಪ್ಸ್ ನೀಡಿದ್ದಾರೆ. ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಸಚಿನ್ ಅವರ ಜೊತೆ ಹೆಚ್ಚು ಮಾತನಾಡುತ್ತಿರುವುದು ವಿಡಿಯೋದಲ್ಲಿ ಸೆರೆ ಆಗಿದೆ.

ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ (Sachin Tendulkar) ಅವರು ಅಫ್ಘಾನಿಸ್ತಾನ ತಂಡದ ಆಟಗಾರರನ್ನು ಭೇಟಿ ಮಾಡಿದ್ದಾರೆ. ಮಂಗಳವಾರ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅಫ್ಘಾನ್ ಆಸ್ಟ್ರೇಲಿಯಾ ಪಂದ್ಯ ನಡೆಯಲಿದೆ. ಇದಕ್ಕೂ ಮುನ್ನ ಸಚಿನ್ ಅಫ್ಘಾನಿಸ್ತಾನ ತಂಡದ ಆಟಗಾರರ ಜೊತೆ ಸಮಯ ಕಳೆದರು. ಅಫ್ಘಾನ್ ಆಟಗಾರರು ವಾಂಖೆಡೆಯಲ್ಲಿ ಅಭ್ಯಾಸ ಮಾಡುತ್ತಿರುವ ಸಂದರ್ಭ ಸಚಿನ್ ಅವರು ಆಗಮಿಸಿ ಕೆಲ ಟಿಪ್ಸ್ ನೀಡಿದ್ದಾರೆ. ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಸಚಿನ್ ಅವರ ಜೊತೆ ಹೆಚ್ಚು ಮಾತನಾಡುತ್ತಿರುವುದು ವಿಡಿಯೋದಲ್ಲಿ ಸೆರೆ ಆಗಿದೆ. “ಇದು ಎಲ್ಲರಿಗೂ ವಿಶೇಷ ಕ್ಷಣ. ಖಂಡಿತವಾಗಿಯೂ ಇದು ನಮ್ಮ ಆಟಗಾರರಿಗೆ, ತಂಡಕ್ಕೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ಅವರನ್ನು ಭೇಟಿಯಾಗುವುದು ಬಹಳಷ್ಟು ಆಟಗಾರರಿಗೆ ಒಂದು ರೀತಿಯ ಕನಸಾಗಿದೆ,” ಎಂದು ರಶೀದ್ ಹೇಳಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ