AUS vs AFG, ICC World Cup: ವಿಶ್ವಕಪ್ನಲ್ಲಿಂದು ಆಸ್ಟ್ರೇಲಿಯಾ-ಅಫ್ಘಾನಿಸ್ತಾನ ಮುಖಾಮುಖಿ: ಅಫ್ಘಾನ್ ಗೆದ್ದರೆ ಏನಾಗಲಿದೆ?
Australia vs Afghanistan, ICC ODI World Cup 2023; ಸೆಮಿಫೈನಲ್‌ನಲ್ಲಿ ಸ್ಥಾನ ಪಡೆಯಲು ಆಸ್ಟ್ರೇಲಿಯಾಕ್ಕೆ ಇನ್ನೂ ಒಂದು ಜಯದ ಅಗತ್ಯವಿದೆ. ಅಂದರೆ ಇಂದು ಗೆದ್ದರೆ ಸೆಮೀಸ್ಗೆ ಪ್ರವೇಶಿಸಲಿದೆ. ಎಲ್ಲಾದರು ಇಂದಿನ ಪಂದ್ಯ ಸೋತರೆ ಜೊತೆಗೆ ಮುಂದಿನ ಬಾಂಗ್ಲಾದೇಶ ವಿರುದ್ಧವೂ ಆಸ್ಟ್ರೇಲಿಯಾ ಸೋತರೆ ಉಳಿದ ತಂಡಗಳ ಪಂದ್ಯಗಳ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ.
ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯಲ್ಲಿಂದು ಮಹತ್ವದ ಪಂದ್ಯ ನಡೆಯಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ಹಾಗೂ ಹಶ್ಮತುಲ್ಲಾ ಶಾಹಿದಿ ನೇತೃತ್ವದ ಅಫ್ಘಾನಿಸ್ತಾನ (Australia vs Afghanistan) ತಂಡ ಮುಖಾಮುಖಿ ಆಗಲಿದೆ. ಉಭಯ ತಂಡಗಳಿಗೆ ಈ ಪಂದ್ಯ ಮುಖ್ಯವಾಗಿದ್ದು, ಗೆಲುವು ಅನಿವಾರ್ಯ. ಕಾಂಗರೂ ಪಡೆ ತನ್ನ ಸೆಮಿ ಫೈನಲ್ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಜಯದ ಮೇಲೆ ಕಣ್ಣಿಟ್ಟಿದ್ದರೆ, ಇತ್ತ ಕ್ರಿಕೆಟ್ ಶಿಶುಗಳು ಕೂಡ ಸೆಮೀಸ್ ರೇಸ್ನಲ್ಲಿ ಇರುವುದರಿಂದ ಗೆಲ್ಲುವ ಯೋಜನೆ ಹಾಕಿಕೊಂಡಿದೆ.
ಆಸ್ಟ್ರೇಲಿಯಾ
ಸೆಮಿಫೈನಲ್‌ನಲ್ಲಿ ಸ್ಥಾನ ಪಡೆಯಲು ಆಸ್ಟ್ರೇಲಿಯಾಕ್ಕೆ ಇನ್ನೂ ಒಂದು ಜಯದ ಅಗತ್ಯವಿದೆ. ಅಂದರೆ ಇಂದು ಗೆದ್ದರೆ ಸೆಮೀಸ್ಗೆ ಪ್ರವೇಶಿಸಲಿದೆ. ಎಲ್ಲಾದರು ಇಂದಿನ ಪಂದ್ಯ ಸೋತರೆ ಜೊತೆಗೆ ಮುಂದಿನ ಬಾಂಗ್ಲಾದೇಶ ವಿರುದ್ಧವೂ ಆಸ್ಟ್ರೇಲಿಯಾ ಸೋತರೆ ಉಳಿದ ತಂಡಗಳ ಪಂದ್ಯಗಳ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ. ಇಂಜುರಿ ಹಾಗೂ ಕೆಲ ಸ್ಟಾರ್ ಆಟಗಾರರ ಅಲಭ್ಯತೆ ಎದ್ದು ಕಾಣುತ್ತಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಇಂದಿನ ಪಂದ್ಯದಲ್ಲಿ ಆಡುತ್ತಾರ ನೋಡಬೇಕು. ಲಾಬುಶೇನ್ ಫಾರ್ಮ್ಗೆ ಬಂದಿರುವುದು ಸಂತಸ ತಂದಿದೆ. ಆದರೆ, ಸ್ಟೀವ್ ಸ್ಮಿತ್ ಕಡೆಯಿಂದ ನಿರೀಕ್ಷೆಗೆ ತಕ್ಕಂತ ಆಟ ಬರುತ್ತಿಲ್ಲ.
ICC World Cup: ಸಿಂಹಳೀಯರ ನಾಡಲ್ಲಿ ಅಲ್ಲೋಲ-ಕಲ್ಲೋಲ: ಕ್ರಿಕೆಟ್ ಮಂಡಳಿಯನ್ನು ವಜಾಗೊಳಿಸಿದ ಶ್ರೀಲಂಕಾ
ಅಫ್ಘಾನಿಸ್ತಾನ
ಪಾಯಿಂಟ್ ಟೇಬಲ್ನಲ್ಲಿ ಅಫ್ಘಾನಿಸ್ತಾನವು ಪ್ರಸ್ತುತ ಆರನೇ ಸ್ಥಾನದಲ್ಲಿದ್ದು, ಸೆಮೀಸ್ಗೆ ಲಗ್ಗೆಯಿಡಬೇಕಾದರೆ ಇಂದಿನ ಪಂದ್ಯದ ಜೊತೆಗೆ ಮುಂದಿನ ಮ್ಯಾಚ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಬೇಕು. ಆದರೆ ಅಫ್ಘಾನಿಸ್ತಾನ ತನ್ನ ಒಂದು ಅಥವಾ ಎರಡು ಪಂದ್ಯಗಳಲ್ಲಿ ಸೋತರೆ, ನ್ಯೂಝಿಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಮುಂದಿನ ಪಂದ್ಯಗಳನ್ನು ಭಾರೀ ಅಂತರದಿಂದ ಸೋಲಬೇಕು. ಹೀಗಾಗಿ ಅಫ್ಘಾನ್ ಶಕ್ತಿ ಮೀರಿ ಪ್ರಯತ್ನಿಸಬೇಕಿದೆ. ಅಫ್ಘಾನಿಸ್ತಾನ ಇಂದು ಆಸೀಸ್ ವಿರುದ್ಧ ಗೆದ್ದರೂ ಆಶ್ಚರ್ಯವಿಲ್ಲ ಎನ್ನಬಹುದು. ಯಾಕೆಂದರೆ, ಹಿಂದಿನ ಮೂರು ಪಂದ್ಯಗಳಲ್ಲಿ ಕ್ರಿಕೆಟ್ ಶಿಶುಗಳು ಸತತವಾಗಿ ಗೆಲ್ಲುತ್ತಾ ಬಂದಿದ್ದಾರೆ. ಇಂದು ಯಾವರೀತಿ ಪ್ರದರ್ಶನ ನೀಡುತ್ತಾರೆ ನೋಡಬೇಕು.
ವಾಂಖೆಡೆ ಪಿಚ್ ವರದಿ
ಮುಂಬೈನ ವಾಂಖೆಡೆ ಸ್ಟೇಡಿಯಂ ಬ್ಯಾಟಿಂಗ್‌ಗೆ ಯೋಗ್ಯವಾಗಿದೆ. ಸ್ವಲ್ಪ ಮಟ್ಟಿಗೆ ವೇಗದ ಬೌಲರ್‌ಗಳು ಸಹಾಯ ಪಡೆಯಬಹುದು. ಆದ್ದರಿಂದ ಟಾಸ್ ಗೆದ್ದ ನಂತರ ನಾಯಕ ರನ್ ಚೇಸ್ ಮಾಡಲು ಆದ್ಯತೆ ನೀಡುತ್ತಾರೆ. ಈ ಟೂರ್ನಿಯಲ್ಲಿ ಇಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಒಟ್ಟು 399 ಮತ್ತು 382 ರನ್ ಕಲೆಹಾಕಿತ್ತು. ಅಲ್ಲದೆ ಕಳೆದ ಪಂದ್ಯದಲ್ಲಿ ಭಾರತ ಕೂಡ 357 ರನ್ ಸಿಡಿಸಿತ್ತು. ಆದ್ದರಿಂದ ಇಂದಿನ ಆಸೀಸ್ ಮತ್ತು ಅಫ್ಘಾನ್ ಪಂದ್ಯದಲ್ಲಿ ಟಾಸ್ ದೊಡ್ಡ ಪಾತ್ರವನ್ನು ವಹಿಸುತ್ತದೆ.
ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪಾ, ಜೋಶ್ ಹೇಝಲ್ವುಡ್, ಮಾರ್ಕಸ್ ಸ್ಟೊಯಿನಿಸ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಸೀನ್ ಅಬಾಟ್.
ಅಫ್ಘಾನಿಸ್ತಾನ ತಂಡ: ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ರಿಯಾಜ್ ಹಸನ್, ರಹಮತ್ ಷಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮರ್ಝೈ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನೂರ್ ಅಹ್ಮದ್, ಫಝಲ್ಹಕ್ ಫಾರೂಖಿ, ಅಬ್ದುಲ್ ರಹಮಾನ್, ನವೀನ್ ಉಲ್ ಹಕ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ