NED vs AFG, Highlights: ನೆದರ್ಲೆಂಡ್ಸ್ ವಿರುದ್ಧ ಸುಲಭವಾಗಿ ಗೆದ್ದ ಅಫ್ಘಾನಿಸ್ತಾನ

ಪೃಥ್ವಿಶಂಕರ
|

Updated on:Nov 03, 2023 | 8:20 PM

NED vs AFG, Highlights: ಏಕದಿನ ವಿಶ್ವಕಪ್​ನ 34 ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಸೋಲಿಸುವ ಮೂಲಕ ಅಫ್ಘಾನಿಸ್ತಾನ ತಂಡ 2023 ರ ವಿಶ್ವಕಪ್‌ನಲ್ಲಿ ಸತತ ಮೂರನೇ ಜಯವನ್ನು ದಾಖಲಿಸಿದೆ. ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ ತಂಡ ತಮ್ಮ ಸೆಮಿಫೈನಲ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.

NED vs AFG, Highlights: ನೆದರ್ಲೆಂಡ್ಸ್ ವಿರುದ್ಧ ಸುಲಭವಾಗಿ ಗೆದ್ದ ಅಫ್ಘಾನಿಸ್ತಾನ
ನೆದರ್ಲೆಂಡ್ಸ್- ಅಫ್ಘಾನಿಸ್ತಾನ

ಏಕದಿನ ವಿಶ್ವಕಪ್​ನ 34 ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಸೋಲಿಸುವ ಮೂಲಕ ಅಫ್ಘಾನಿಸ್ತಾನ ತಂಡ 2023 ರ ವಿಶ್ವಕಪ್‌ನಲ್ಲಿ ಸತತ ಮೂರನೇ ಜಯವನ್ನು ದಾಖಲಿಸಿದೆ. ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ ತಂಡ ತಮ್ಮ ಸೆಮಿಫೈನಲ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡಿದ ಅಫ್ಘಾನ್ ತಂಡ, ಡಚ್ ತಂಡವನ್ನು ಕೇವಲ 179 ರನ್‌ಗಳಿಗೆ ಆಲೌಟ್ ಮಾಡಿತು.. ಪ್ರತ್ಯುತ್ತರವಾಗಿ, ರಹಮತ್ ಷಾ ಮತ್ತು ನಾಯಕ ಹಶ್ಮತುಲ್ಲಾ ಶಾಹಿದಿ ಅವರ ಅರ್ಧಶತಕದ ನೆರವಿನಿಂದ ಕೇವಲ 32ನೇ ಓವರ್​ನಲ್ಲೇ 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಆಡಿರುವ ಏಳು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿರುವ ಅಫ್ಘಾನಿಸ್ತಾನ ತಂಡ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿದೆ. ಹಾಗೆಯೇ ಮೇಲೆ ಹೇಳಿದಂತೆ ಸೆಮಿಫೈನಲ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.

LIVE NEWS & UPDATES

The liveblog has ended.
  • 03 Nov 2023 08:11 PM (IST)

    ಅಫ್ಘಾನಿಸ್ತಾನಕ್ಕೆ ಸುಲಭ ಜಯ

    ಏಕದಿನ ವಿಶ್ವಕಪ್​ನ 34 ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಸೋಲಿಸುವ ಮೂಲಕ ಅಫ್ಘಾನಿಸ್ತಾನ ತಂಡ 2023 ರ ವಿಶ್ವಕಪ್‌ನಲ್ಲಿ ಸತತ ಮೂರನೇ ಜಯವನ್ನು ದಾಖಲಿಸಿದೆ.

  • 03 Nov 2023 07:55 PM (IST)

    ರಹಮತ್ ಶಾ ಔಟ್

    ಅಫ್ಘಾನಿಸ್ತಾನ ತಂಡಕ್ಕೆ ರಹಮತ್ ಶಾ ರೂಪದಲ್ಲಿ ಮೂರನೇ ಹೊಡೆತ ಬಿದ್ದಿದೆ. ಅರ್ಧಶತಕ ಗಳಿಸಿದ ಕೂಡಲೇ ರಹಮತ್ ವಿಕೆಟ್ ಒಪ್ಪಿಸಿದ್ದಾರೆ. ತಂಡದ ಗೆಲುವಿಗೆ ಇನ್ನೂ 51 ರನ್‌ಗಳ ಅಗತ್ಯವಿದೆ.

  • 03 Nov 2023 07:23 PM (IST)

    ರಹಮತ್ ಅರ್ಧಶತಕ

    ಅಫ್ಘಾನ್ ಬ್ಯಾಟರ್ ರಹಮತ್ ಶಾ 47 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. ಅಲ್ಲದೆ ನಾಯಕ ಹಸ್ಮತುಲ್ಲಾ ಶಾಹಿದಿ ಅವರೊಂದಿಗೆ ಅದ್ಭುತ ಜೊತೆಯಾಟ ಕಟ್ಟಿದ್ದಾರೆ.

  • 03 Nov 2023 06:56 PM (IST)

    15 ಓವರ್‌ಗಳ ಆಟ ಅಂತ್ಯ

    ಅಫ್ಘಾನಿಸ್ತಾನದ 15 ಓವರ್‌ಗಳ ಆಟ ಮುಗಿದಿದೆ.

    ಈ 15 ಓವರ್‌ಗಳಲ್ಲಿ ಅಫ್ಘಾನಿಸ್ತಾನ 2 ವಿಕೆಟ್ ಕಳೆದುಕೊಂಡು 80 ರನ್ ಗಳಿಸಿದೆ.

    ರಹಮತ್ ಶಾ ಮತ್ತು ಹಸ್ಮತುಲ್ಲಾ ಶಾಹಿದಿ ಕ್ರೀಸ್‌ನಲ್ಲಿದ್ದಾರೆ.

    ಅಫ್ಘಾನಿಸ್ತಾನ ಗೆಲ್ಲಲು ಉಳಿದ 35 ಓವರ್‌ಗಳಲ್ಲಿ ಇನ್ನೂ 100 ರನ್ ಗಳಿಸಬೇಕಾಗಿದೆ.

  • 03 Nov 2023 06:33 PM (IST)

    2ನೇ ವಿಕೆಟ್ ಪತನ

    ನೆದರ್ಲೆಂಡ್ಸ್ ತಂಡ ಅಫ್ಘಾನಿಸ್ತಾನಕ್ಕೆ ಎರಡನೇ ಹೊಡೆತ ನೀಡುವ ಮೂಲಕ ತಂಡವು ಮತ್ತೊಮ್ಮೆ ಪಂದ್ಯಕ್ಕೆ ಮರಳಿದೆ. ಅಫ್ಘಾನ್ ಆರಂಭಿಕ ಜದ್ರಾನ್ 20 ರನ್ ಗಳಿಸಿ ಔಟಾಗಿದ್ದಾರೆ.

  • 03 Nov 2023 06:23 PM (IST)

    ಅಫ್ಘಾನಿಸ್ತಾನಕ್ಕೆ ಮೊದಲ ಹೊಡೆತ

    ಅಫ್ಘಾನಿಸ್ತಾನ ತಂಡ ಮೊದಲ ಹಿನ್ನಡೆ ಅನುಭವಿಸಿದೆ. ರೆಹಮಾನುಲ್ಲಾ ಗುರ್ಬಾಜ್ ವಿಕೆಟ್ ಕೀಪರ್ ಕೈಗೆ ಕ್ಯಾಚಿತ್ತು ಔಟಾಗಿದ್ದಾರೆ. 50ರೊಳಗೆ ತಂಡದ ಮೊದಲ ವಿಕೆಟ್‌ ಪತನಗೊಂಡಿದೆ

  • 03 Nov 2023 05:56 PM (IST)

    ಅಫ್ಘನ್ ಇನ್ನಿಂಗ್ಸ್ ಆರಂಭ

    180 ರನ್ ಗುರಿ ಬೆನ್ನಟ್ಟಲು ಅಫ್ಘನ್ ಪರ ಇಬ್ರಾಹಿಂ ಝದ್ರಾನ್ ಮತ್ತು ರಹಮಾನುಲ್ಲಾ ಗುರ್ಬಾಜ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.

  • 03 Nov 2023 05:14 PM (IST)

    179 ರನ್ ಟಾರ್ಗೆಟ್

    ಐಸಿಸಿ ವಿಶ್ವಕಪ್ 2023 ರ 34 ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೆದರ್ಲ್ಯಾಂಡ್ಸ್ ತಂಡ 46.3 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 179 ರನ್ ಕಲೆಹಾಕಿದೆ.

  • 03 Nov 2023 04:37 PM (IST)

    ಎಂಟನೇ ವಿಕೆಟ್ ಪತನ

    ನೆದರ್ಲೆಂಡ್ಸ್‌ಗೆ ಎಂಟನೇ ಹೊಡೆತ ಬಿದ್ದಿದೆ. ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ 58 ರನ್ ಗಳಿಸಿ ರನೌಟ್ ಆದರು. ನೆದರ್ಲೆಂಡ್ಸ್ ತಂಡ 8 ವಿಕೆಟ್‌ಗೆ 153 ರನ್ ಗಳಿಸಿದೆ.

  • 03 Nov 2023 04:19 PM (IST)

    ಸೀಬ್ರಾಂಡ್ ಅರ್ಧ ಶತಕ

    32ನೇ ಓವರ್​ನಲ್ಲಿ ಡಚ್ ಸ್ಟಾರ್ ಸಿಬ್ರಾಂಡ್ ಎಂಗೆಲ್ ಬ್ರೆಕ್ಟ್ 74 ಎಸೆತಗಳಲ್ಲಿ ಸತತ 2 ಬೌಂಡರಿ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು.

  • 03 Nov 2023 04:04 PM (IST)

    ಆರನೇ ವಿಕೆಟ್ ಪತನ

    ನೆದರ್ಲೆಂಡ್ ತಂಡದ 6ನೇ ವಿಕೆಟ್ ಪತನವಾಗಿದೆ. 3 ರನ್ ಗಳಿಸಿದ್ದ ಜುಲ್ಫಿಕರ್, ನೂರ್ ಅಹ್ಮದ್​ಗೆ ಬಲಿಯಾಗಿದ್ದಾರೆ.

  • 03 Nov 2023 03:40 PM (IST)

    5ನೇ ವಿಕೆಟ್ ಪತನ

    ಮೊಹಮ್ಮದ್ ನಬಿ ಕ್ಯಾಚ್ ನೀಡಿದ ಬಾಸ್ ಡಿ ಲೀಡೆ ಅವರ ರೂಪದಲ್ಲಿ ನೆದರ್ಲೆಂಡ್ಸ್ ಐದನೇ ವಿಕೆಟ್ ಕಳೆದುಕೊಂಡಿದೆ.

  • 03 Nov 2023 03:40 PM (IST)

    ಬ್ಯಾಕ್ ಟು ಬ್ಯಾಕ್ ವಿಕೆಟ್

    20ನೇ ಓವರ್‌ನಲ್ಲಿ ತಂಡದ ಇಬ್ಬರು ಬ್ಯಾಟ್ಸ್‌ಮನ್‌ಗಳು ಔಟಾದರು. ಮೂರನೇ ಎಸೆತದಲ್ಲಿ ಕಾಲಿನ್ ಅಕರ್ಮನ್ ರನೌಟ್ ಆದರೆ, ನಂತರ ನಾಯಕ ಸ್ಕಾಟ್ ಎಡ್ವರ್ಡ್ಸ್ ಕೂಡ ಮುಂದಿನ ಎಸೆತದಲ್ಲಿ ರನೌಟ್ ಆದರು. ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ನೆದರ್ಲೆಂಡ್ಸ್ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗೆ 97 ರನ್ ಗಳಿಸಿದೆ. ಬಾಸ್ ಡಿ ಲೀಡ್ ಮತ್ತು ಸೈಬ್ರಾಂಡ್ ಕ್ರೀಸ್‌ನಲ್ಲಿದ್ದಾರೆ.

  • 03 Nov 2023 03:26 PM (IST)

    ಮೂರನೇ ವಿಕೆಟ್ ಪತನ

    ನೆದರ್ಲೆಂಡ್ಸ್ ಮೂರನೇ ವಿಕೆಟ್ ಪತನ. ರಶೀದ್ ಖಾನ್ ಅಫ್ಘಾನಿಸ್ತಾನಕ್ಕೆ ಮೂರನೇ ಯಶಸ್ಸನ್ನು ತಂದುಕೊಟ್ಟರು. ರಶೀದ್ ಎಸೆದ ಸ್ಟ್ರೈಟ್​ ಹಿಟ್​ನಿಂದಾಗಿ ಸೀಬ್ರಾಂಡ್ ರನ್ ಔಟ್ ಆಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ.

  • 03 Nov 2023 03:22 PM (IST)

    15 ಓವರ್‌ ಮುಕ್ತಾಯ

    ನೆದರ್ಲೆಂಡ್ಸ್ ತಂಡ 15 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 81 ರನ್ ಗಳಿಸಿದೆ. ಮ್ಯಾಕ್ಸ್ ಒ’ಡೌಡ್ 42 ರನ್ ಗಳಿಸಿ ಔಟಾದರೆ, ಕಾಲಿನ್ ಅಕರ್‌ಮನ್ 25 ರನ್ ಮತ್ತು ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ 4 ರನ್‌ ಗಳಿಸಿ ಆಡುತ್ತಿದ್ದಾರೆ.

  • 03 Nov 2023 03:22 PM (IST)

    ಮ್ಯಾಕ್ಸ್ ಒ’ಡೌಡ್ ರನ್ ಔಟ್

    ಉತ್ತಮ ಫಾರ್ಮ್‌ನಲ್ಲಿದ್ದ ಮ್ಯಾಕ್ಸ್ ಒ’ಡೌಡ್ ರನ್ ಔಟ್ ಆಗಿದ್ದಾರೆ. ಮ್ಯಾಕ್ಸ್ 40 ಎಸೆತಗಳಲ್ಲಿ 42 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. 12 ಓವರ್‌ಗಳ ನಂತರ ಸ್ಕೋರ್ 2 ವಿಕೆಟ್‌ಗೆ 74 ರನ್ ಆಗಿದೆ.

  • 03 Nov 2023 02:52 PM (IST)

    50 ರನ್‌ ಪೂರ್ಣ

    8 ಓವರ್‌ಗಳ ನಂತರ ನೆದರ್ಲೆಂಡ್ಸ್ ಸ್ಕೋರ್ ಒಂದು ವಿಕೆಟ್‌ಗೆ 51 ರನ್ ಆಗಿದೆ. ಮ್ಯಾಕ್ಸ್ ಒ’ಡೌಡ್ ಮತ್ತು ಕಾಲಿನ್ ಅಕರ್‌ಮನ್ ತಂಡದ ಇನ್ನಿಂಗ್ಸ್ ಮುನ್ನಡೆಸುತ್ತಿದ್ದಾರೆ. ಓ’ಡೌಡ್ 27 ರನ್ ಮತ್ತು ಅಕರ್ಮನ್ 17 ರನ್ ಗಳಿಸಿ ಆಡುತ್ತಿದ್ದಾರೆ

  • 03 Nov 2023 02:51 PM (IST)

    4 ಓವರ್‌ ಅಂತ್ಯ

    4 ಓವರ್‌ಗಳ ನಂತರ, ನೆದರ್‌ಲ್ಯಾಂಡ್ಸ್ ಸ್ಕೋರ್ 17/1, ಕಾಲಿನ್ ಅಕರ್‌ಮನ್ 6 ಮತ್ತು ಮ್ಯಾಕ್ಸ್ ಒ’ಡೌಡ್ ಸಹ 6 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

  • 03 Nov 2023 02:14 PM (IST)

    ಮುಜೀಬ್ ಶತಕ!

    ಡಚ್ ಇನ್ನಿಂಗ್ಸ್‌ನ ಮೊದಲ ಓವರ್‌ನ ಐದನೇ ಎಸೆತದಲ್ಲಿ ಮುಜಿಬ್ ಉರ್ ರೆಹಮಾನ್ ವೆಸ್ಲಿ ಬರೇಸಿ ಅವರ ವಿಕೆಟ್ ಪಡೆದರು. ಇದು ಮುಜೀಬ್ ಅವರ ವೃತ್ತಿಜೀವನದ 100ನೇ ಏಕದಿನ ವಿಕೆಟ್ ಆಗಿದೆ.

  • 03 Nov 2023 02:13 PM (IST)

    ಡಚ್ ಇನ್ನಿಂಗ್ಸ್ ಆರಂಭ

    ನೆದರ್ಲೆಂಡ್ಸ್ ಇನ್ನಿಂಗ್ಸ್ ಆರಂಭವಾಗಿದೆ. ವೆಸ್ಲಿ ಬರೇಸಿ ಮತ್ತು ಮ್ಯಾಕ್ಸ್ ಒ’ಡಾಡ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.

  • 03 Nov 2023 01:41 PM (IST)

    ಅಫ್ಘಾನಿಸ್ತಾನ ತಂಡ

    ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ(ನಾಯಕ), ಅಜ್ಮತುಲ್ಲಾ ಒಮರ್ಜಾಯ್, ಇಕ್ರಮ್ ಅಲಿಖಿಲ್, ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ, ನೂರ್ ಅಹ್ಮದ್

  • 03 Nov 2023 01:41 PM (IST)

    ನೆದರ್ಲ್ಯಾಂಡ್ಸ್ ತಂಡ

    ವೆಸ್ಲಿ ಬ್ಯಾರೆಸಿ, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಸೈಬ್ರಾಂಡ್ ಎಂಗಲ್ಬ್ರೆಕ್ಟ್, ಸ್ಕಾಟ್ ಎಡ್ವರ್ಡ್ಸ್(ನಾಯಕ), ಬಾಸ್ ಡಿ ಲೀಡೆ, ಸಾಕಿಬ್ ಜುಲ್ಫಿಕರ್, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್ತ್, ಪಾಲ್ ವ್ಯಾನ್ ಮೀಕೆರೆನ್

  • 03 Nov 2023 01:38 PM (IST)

    ಟಾಸ್ ಗೆದ್ದ ನೆದರ್ಲೆಂಡ್ಸ್

    ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ನೆದರ್ಲೆಂಡ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.

  • Published On - Nov 03,2023 1:37 PM

    Follow us
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
    Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
    Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
    ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್