AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL, ICC World Cup: ಸುದ್ದಿಗೋಷ್ಠಿಯಲ್ಲಿ ಕೋಪಗೊಂಡ ಶ್ರೇಯಸ್ ಅಯ್ಯರ್: ಪ್ರಶ್ನೆ ಏನಿತ್ತು?

Shreyas Iyer Angry with Journalist: ವಿಶ್ವಕಪ್​ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯ ಮುಗಿದ ಬಳಿಕ ಶ್ರೇಯಸ್ ಅಯ್ಯರ್ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಇಲ್ಲಿ ಪತ್ರಕರ್ತರು ಕೇಳುವ ಪ್ರಶ್ನೆಗೆ ಉತ್ತರಿಸುವಾಗ ಅಯ್ಯರ್ ಕೋಪಗೊಂಡ ಘಟನೆ ನಡೆದಿದೆ. ಇದರ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಅಯ್ಯರ್​ಗೆ ಏನು ಪ್ರಶ್ನೆ ಕೇಳಲಾಗಿತ್ತು ನೋಡಿ.

IND vs SL, ICC World Cup: ಸುದ್ದಿಗೋಷ್ಠಿಯಲ್ಲಿ ಕೋಪಗೊಂಡ ಶ್ರೇಯಸ್ ಅಯ್ಯರ್: ಪ್ರಶ್ನೆ ಏನಿತ್ತು?
Shreyas Iyer Angry
Vinay Bhat
|

Updated on: Nov 03, 2023 | 11:40 AM

Share

ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ 302 ರನ್​ಗಳ ದಾಖಲೆಯ ಜಯ ಸಾಧಿಸಿ ಸೆಮಿ ಫೈನಲ್​ಗೆ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 357 ರನ್ ಕಲೆಹಾಕಿತು. ವಿರಾಟ್ ಕೊಹ್ಲಿ (88) ಹಾಗೂ ಶುಭ್​ಮನ್ ಗಿಲ್ (92) ನಿರ್ಗಮನದ ಬಳಿಕ ಕ್ರೀಸ್​ಗೆ ಬಂದ ಶ್ರೇಯಸ್ ಅಯ್ಯರ್ (Shreyas Iyer) ಅಂತಿಮ ಹಂತದ ವರೆಗೂ ಬ್ಯಾಟ್ ಬೀಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಲು ನೆರವಾದರು. ಪಂದ್ಯ ಮುಗಿದ ಬಳಿಕ ಅಯ್ಯರ್ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಇಲ್ಲಿ ಪತ್ರಕರ್ತರು ಕೇಳುವ ಪ್ರಶ್ನೆಗೆ ಉತ್ತರಿಸುವಾಗ ಅಯ್ಯರ್ ಕೋಪಗೊಂಡ ಘಟನೆ ನಡೆದಿದೆ. ಇದರ ವಿಡಿಯೋ ಕೂಡ ವೈರಲ್ ಆಗುತ್ತಿದೆ.

ಭುಜದ ಗಾಯದಿಂದ ಹಿಂತಿರುಗಿದ ಬಳಿಕ ಶ್ರೇಯಸ್ ಅಯ್ಯರ್ ಅವರಿಗೆ ಶಾರ್ಟ್ ಬಾಲ್ ಎದುರಿಸಲು ಆಗುವುದಿಲ್ಲ ಎಂಬ ಬಗ್ಗೆ ಮಾತುಗಳಿದ್ದವು. ಈ ಬಾರಿಯ ಟೂರ್ನಿಯಲ್ಲಿ ಬಹುಪಾಲು ಎದುರಾಳಿಗಳು ಬೌನ್ಸರ್‌ಗಳನ್ನು ಎಸೆಯುವ ಮೂಲಕವೇ ಅಯ್ಯರ್ ಅವರನ್ನು ಔಟ್ ಮಾಡಿದ್ದರು. ಶ್ರೇಯಸ್ ಹೋದಲ್ಲೆಲ್ಲ ಶಾರ್ಟ್ ಬಾಲ್ ಬಗ್ಗೆಯೇ ಮಾತು ಕೇಳಿಬಂದಿದ್ದವು. ಮುಂಬೈನಲ್ಲಿ ಲಂಕನ್ನರ ವಿರುದ್ಧ 82 ರನ್ ಗಳಿಸಿದರೂ, ಇಲ್ಲಿ ಅಯ್ಯರ್​ಗೆ ಇದೇ ಪ್ರಶ್ನೆ ಎದರಾಯಿತು. ಪತ್ರಕರ್ತರು, ”ನಿಮಗೆ ಶಾರ್ಟ್ ಬಾಲ್‌ನಲ್ಲಿ ಆಡಲು ತೊಂದರೆ ಆಗುತ್ತಿದೆಯೇ?,” ಎಂದು ಕೇಳಿದ್ದಾರೆ.

ಇದನ್ನೂ ಓದಿ
Image
ಪಂದ್ಯ ಗೆದ್ದ ಬಳಿಕ ಅಭಿಮಾನಿಗೆ ರೋಹಿತ್ ಕೊಟ್ಟ ಗಿಫ್ಟ್​ ಏನು ನೋಡಿ
Image
ವಿಶ್ವಕಪ್​ನಲ್ಲಿ ಸೆಮಿ ಫೈನಲ್​ಗೆ ಲಗ್ಗೆಯಿಟ್ಟ ಭಾರತದ ಮುಂದಿನ ಪಂದ್ಯ ಯಾವಾಗ?
Image
92 ರನ್​ಗೆ ಗಿಲ್ ಔಟಾದಾಗ ಬೇಸರದಲ್ಲಿ ಸಾರಾ ತೆಂಡೂಲ್ಕರ್ ಏನು ಮಾಡಿದ್ರು ನೋಡಿ
Image
ಲಂಕಾ ವಿರುದ್ಧದ ಗೆಲುವಿನ ಬಳಿಕ ಪೋಸ್ಟ್ ಮ್ಯಾಚ್​ನಲ್ಲಿ ರೋಹಿತ್ ಏನಂದ್ರು?

ICC World Cup 2023 Points Table: ಪಾಯಿಂಟ್ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ಭಾರತ..!

ಪತ್ರಕರ್ತರ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ಅಯ್ಯರ್, “ಏನು ಶಾರ್ಟ್ ಬಾಲ್ ಪ್ರಾಬ್ಲಂ?, ನನಗೆ ಯಾವುದೇ ತೊಂದರೆ ಇಲ್ಲ. ನನಗೆ ಶಾರ್ಟ್ ಆಡಲು ತೊಂದರೆ ಇದೆ ಎಂದು ನೀವೇ ಹೊರಗೆ ಮಾತು ಹರಿಬಿಟ್ಟಿದ್ದೀರಿ. ನಾನು ಸಾಕಷ್ಟು ಪುಲ್ ಶಾಟ್‌ಗಳನ್ನು ಆಡಿದ್ದೇನೆ ಮತ್ತು ಬೌಂಡರಿಗಳನ್ನು ಸಹ ಹೊಡೆದಿದ್ದೇನೆ. ಕೆಲವೊಮ್ಮೆ ನಿರೀಕ್ಷಿಸಿದಂತೆ ನಡೆಯುವುದಿಲ್ಲ ಅಷ್ಟೇ. ಆದರೆ ನನ್ನಲ್ಲಿ ಶಾರ್ಟ್ ಬಾಲ್ ಸವಾಲನ್ನು ಎದುರಿಸುವ ವಿಶ್ವಾಸವಿದೆ,” ಎಂದು ಕೋಪದಲ್ಲಿ ಹೇಳಿದ್ದಾರೆ.

ಶಾರ್ಟ್ ಬಾಲ್ ತೊಂದರೆ ಪ್ರಶ್ನೆಗೆ ಶ್ರೇಯಸ್ ಅಯ್ಯರ್ ಕೊಟ್ಟ ಉತ್ತರ ಇಲ್ಲಿದೆ ನೋಡಿ:

ಈ ಬಾರಿಯ ವಿಶ್ವಕಪ್​ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಅಯ್ಯರ್ ಕಡೆಯಿಂದ ನಿರೀಕ್ಷೆಗೆ ತಕ್ಕಂತ ಆಟ ಬಂದಿರಲಿಲ್ಲ. ಇದರಿಂದ ಟೀಕೆಗಳಿಗೆ ಒಳಗಾಗಿದ್ದರು. ಆದರೆ, ಲಂಕಾ ವಿರುದ್ಧ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಶ್ರೇಯಸ್ ಕೇವಲ 56 ಎಸೆತಗಳಲ್ಲಿ 3 ಫೋರ್, 6 ಸಿಕ್ಸರ್​ನೊಂದಿಗೆ 82 ರನ್ ಚಚ್ಚಿದರು. ಭಾರತ 357 ರನ್ ಗಳಿಸುವಲ್ಲಿ ಅಯ್ಯರ್ ಪ್ರಮುಖ ಪಾತ್ರವಹಿಸಿದರು.

ಶ್ರೀಲಂಕಾವನ್ನು 302 ರನ್‌ಗಳಿಂದ ಸೋಲಿಸಿದ ಟೀಮ್ ಇಂಡಿಯಾ ವಿಶ್ವಕಪ್​ನಲ್ಲಿ ಆಡಿದ ಎಲ್ಲ ಏಳು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಗೆಲುವಿಗಾಗಿ 358 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಲಂಕಾ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ಕೇವಲ 55 ರನ್‌ಗಳಿಗೆ ಔಟ್ ಆಯಿತು. ಶಮಿ ಐದು ವಿಕೆಟ್‌ಗಳನ್ನು ಪಡೆದರು ಮತ್ತು ಸಿರಾಜ್ ಮೂರು ವಿಕೆಟ್‌ಗಳನ್ನು ಕಿತ್ತರು. ಈ ಗೆಲುವಿನೊಂದಿಗೆ ಭಾರತ ಸೆಮಿಸ್‌ಗೆ ಲಗ್ಗೆ ಇಟ್ಟಿದೆ. ಭಾರತ ತನ್ನ ಮುಂದಿನ ಪಂದ್ಯವನ್ನು ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ