IND vs SL, ICC World Cup: 92 ರನ್​ಗೆ ಗಿಲ್ ಔಟಾದಾಗ ಬೇಸರದಲ್ಲಿ ಸಾರಾ ತೆಂಡೂಲ್ಕರ್ ಏನು ಮಾಡಿದ್ರು ನೋಡಿ

Sara Tendulkar Disappointed After Shubman Gill Out: ವಿಶ್ವಕಪ್​ನಲ್ಲಿ ಚೊಚ್ಚಲ ಶತಕ ಸಿಡಿಸುವ ಅವಕಾಶ ಹೊಂದಿದ್ದ ಶುಭ್​ಮನ್ ಗಿಲ್ ಶ್ರೀಲಂಕಾ ವಿರುದ್ಧ 8 ರನ್‌ಗಳ ಅಂತರದಲ್ಲಿ ಔಟಾದರು. ಗಿಲ್ ಹತಾಶೆಯಿಂದ ನೆಲಕ್ಕೆ ತನ್ನ ಬ್ಯಾಟ್ ಅನ್ನು ಗುದ್ದಿದರು. ಈ ಸಂದರ್ಭ ಗಿಲ್ ಅವರ ಗರ್ಲ್ ಫ್ರೆಂಡ್ ಎನ್ನಲಾಗುತ್ತಿರುವ ಸಾರಾ ತೆಂಡೂಲ್ಕರ್ ಕೂಡ ತುಂಬಾ ನಿರಾಶೆಗೊಂಡರು.

IND vs SL, ICC World Cup: 92 ರನ್​ಗೆ ಗಿಲ್ ಔಟಾದಾಗ ಬೇಸರದಲ್ಲಿ ಸಾರಾ ತೆಂಡೂಲ್ಕರ್ ಏನು ಮಾಡಿದ್ರು ನೋಡಿ
Shubman Gill and Sara Tendulkar
Follow us
Vinay Bhat
|

Updated on: Nov 03, 2023 | 7:53 AM

ಮುಂಬೈನ ಐಕಾನಿಕ್ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಐಸಿಸಿ ಏಕದಿನ ವಿಶ್ವಕಪ್ 2023 ರ ತನ್ನ ಏಳನೇ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ ದಾಖಲೆಯ 302 ರನ್​ಗಳ ಅಮೋಘ ಗೆಲುವು ಕಂಡಿತು. ಭಾರತ ಬರೋಬ್ಬರಿ 357 ರನ್ ಸಿಡಿಸಿತು. ಆದರೆ, ಶತಕ ಮಾತ್ರ ಯಾರ ಬ್ಯಾಟ್​ನಿಂದಲೂ ಬರಲಿಲ್ಲ. ಮೂವರು ಆಟಗಾರರು ಶತಕದ ಅಂಚಿನಲ್ಲಿ ಎಡವಿದರು. ಅದರಲ್ಲೂ ಶುಭ್​ಮನ್ ಗಿಲ್ (Shubman Gill) 92 ರನ್​ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. 8 ರನ್​ಗಳಿಂದ ಶತಕ ವಂಚಿತರಾದ ಗಿಲ್, ಔಟಾದ ಸಂದರ್ಭ ಸ್ಟ್ಯಾಂಡ್​ನಲ್ಲಿದ್ದ ಸಾರಾ ತೆಂಡೂಲ್ಕರ್ ಕೊಟ್ಟ ರಿಯಾಕ್ಷನ್ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ರೋಹಿತ್ ಶರ್ಮಾ ಇನ್ನಿಂಗ್ಸ್‌ನ ಆರಂಭದಲ್ಲಿ ಔಟಾದ ನಂತರ, ಶುಭ್​ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಎರಡನೇ ವಿಕೆಟ್‌ಗೆ 189 ರನ್​ಗಳ ಜೊತೆಯಾಟ ಆಡಿದರು. ಆದಾಗ್ಯೂ, ವಿಶ್ವಕಪ್​ನಲ್ಲಿ ಚೊಚ್ಚಲ ಶತಕ ಸಿಡಿಸುವ ಅವಕಾಶ ಹೊಂದಿದ್ದ ಗಿಲ್ ಕೇವಲ 8 ರನ್‌ಗಳ ಅಂತರದಲ್ಲಿ ಔಟಾದರು. ಪಾಸಿಟಿವ್ ಆಗಿ ಕಂಡಿದ್ದ ಗಿಲ್ ಅನಗತ್ಯ ಶಾಟ್ ಹೊಡೆಯಲು ಹೋಗಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದರು. ದಿಲ್ಶನ್ ಮಧುಶಂಕ ಅವರ ಬೌನ್ಸರ್‌ ಅನ್ನು ಎದುರಿಸಲು ಹೋಗಿ ಬ್ಯಾಟ್‌ನ ಅಂಚಿಗೆ ಚೆಂಡು ಸಿಕ್ಕಿ ನಿರ್ಗಮಿಸಿದರು.

ಇದನ್ನೂ ಓದಿ
Image
ಲಂಕಾ ವಿರುದ್ಧದ ಗೆಲುವಿನ ಬಳಿಕ ಪೋಸ್ಟ್ ಮ್ಯಾಚ್​ನಲ್ಲಿ ರೋಹಿತ್ ಏನಂದ್ರು?
Image
ಪಾಯಿಂಟ್ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ಭಾರತ..!
Image
5 ವಿಕೆಟ್​ಗೆ 5 ದಾಖಲೆಗಳು: ಇದು ಮೊಹಮ್ಮದ್ ಶಮಿ ಮ್ಯಾಜಿಕ್
Image
ಲಂಕಾ ವಿರುದ್ಧ 302 ರನ್​ಗಳ ಗೆಲುವು! ಸೆಮಿಫೈನಲ್​ಗೆ ಟೀಂ ಇಂಡಿಯಾ ಎಂಟ್ರಿ

Virat Kohli: ಶತಕ ಜಸ್ಟ್​ ಮಿಸ್..ಆದ್ರೂ 6 ದಾಖಲೆ ಬರೆದ ಕಿಂಗ್ ಕೊಹ್ಲಿ

92 ರನ್ ಗಳಿಸಿದ ನಂತರ, ಗಿಲ್ ಹತಾಶೆಯಿಂದ ನೆಲಕ್ಕೆ ತನ್ನ ಬ್ಯಾಟ್ ಅನ್ನು ಗುದ್ದಿದರು. ಆಗ ಕ್ಯಾಮೆರಾಮ್ಯಾನ್ ಸಾರಾ ತೆಂಡೂಲ್ಕರ್ ಅವರನ್ನು ತೋರಿಸಿದ್ದಾರೆ. ಗಿಲ್ ಅವರ ಗರ್ಲ್ ಫ್ರೆಂಡ್ ಎನ್ನಲಾಗುತ್ತಿರುವ ಸಾರಾ ಅವರು ಶುಭ್​ಮನ್ ಔಟಾದಾಗ ತುಂಬಾ ನಿರಾಶೆಗೊಂಡರು. ಬೇಸರದಿಂದ ತಲೆ ಕೆಳಗೆ ಹಾಕಿ ತಮ್ಮ ಮುಖವನ್ನು ಎರಡು ಕೈಗಳಿಂದ ಮರೆಮಾಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶುಭ್​ಮನ್ ಗಿಲ್ ಔಟದಾಗದ ಸಾರಾ ತೆಂಡೂಲ್ಕರ್ ಅವರ ರಿಯಾಕ್ಷನ್ ವಿಡಿಯೋ ಇಲ್ಲಿದೆ ನೋಡಿ:

ಬಳಿಕ ಶುಭ್​ಮಾನ್ ಗಿಲ್ ಅವರ ಅದ್ಭುತ ಇನ್ನಿಂಗ್ಸ್‌ಗಾಗಿ ಇಡೀ ಪ್ರೇಕ್ಷಕರು ಎದ್ದುನಿಂತು ಚಪ್ಪಾಳೆ ತಟ್ಟಿದರು. ಅತ್ತ ಸಾರಾ ತೆಂಡೂಲ್ಕರ್ ಕೂಡ ಚಪ್ಪಾಳೆ ತಟ್ಟಿದರು. ಗಿಲ್ ಶ್ರೀಲಂಕಾ ವಿರುದ್ಧ 92 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್‌ಗಳಿಂದ 92 ರನ್ ಗಳಿಸಿದರು. ಎರಡನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಜೊತೆ 189 ರನ್ ಜೊತೆಯಾಟ ನಡೆಸಿದರು. ಇದು ಇದುವರೆಗಿನ ಏಕದಿನ ವಿಶ್ವಕಪ್‌ನಲ್ಲಿ ಮನ್ ಅವರ ಗರಿಷ್ಠ ಸ್ಕೋರ್ ಆಗಿದೆ.

ಗಿಲ್ ಅವರಿಗೆ ವಿಶ್ವಕಪ್ ಆರಂಭದ ವೇಳೆ ಡೆಂಗ್ಯೂ ಕಾಣಿಸಿಕೊಂಡಿದ್ದರಿಂದ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ಮೊದಲ ಎರಡು ಪಂದ್ಯಗಳನ್ನು ಕಳೆದುಕೊಂಡಿದ್ದರು. ಆದರೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ ಮರಳಿದರು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೂಡ ತಮ್ಮ 49ನೇ ಏಕದಿನ ಶತಕವನ್ನು ಕೇವಲ 12 ರನ್‌ಗಳಿಂದ ಕಳೆದುಕೊಂಡರು. ಈ ಮೂಲಕ ಸಚಿನ್ ತೆಂಡೂಲ್ಕರ್ ಶತಕಗಳ ದಾಖಲೆ ಸರಿಗಟ್ಟಲು ವಿಫಲರಾದರು. ಅತ್ತ ಶ್ರೇಯಸ್ ಅಯ್ಯರ್ ಕೂಡ 56 ಎಸೆತಗಳಲ್ಲಿ 82 ರನ್​ಗೆ ಔಟಾದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ