ಅಭಿಮಾನಿಗಳ ಹಾರ್ಟ್​ ಬ್ರೇಕ್! ನೋವಿನಲ್ಲೇ ಮೈದಾನ ತೊರೆದ ಶತಕ ವಂಚಿತ ಕೊಹ್ಲಿ; ವಿಡಿಯೋ

Virat Kohli, ICC World Cup 2023: ಗುರುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಕೊಹ್ಲಿ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದು ಸಾಧ್ಯವಾಗಲಿಲ್ಲ.

ಅಭಿಮಾನಿಗಳ ಹಾರ್ಟ್​ ಬ್ರೇಕ್! ನೋವಿನಲ್ಲೇ ಮೈದಾನ ತೊರೆದ ಶತಕ ವಂಚಿತ ಕೊಹ್ಲಿ; ವಿಡಿಯೋ
ವಿರಾಟ್ ಕೊಹ್ಲಿ
Follow us
ಪೃಥ್ವಿಶಂಕರ
|

Updated on:Nov 02, 2023 | 8:44 PM

ನ್ಯೂಜಿಲೆಂಡ್ ವಿರುದ್ಧ 95 ರನ್​ಗಳಿಗೆ ಔಟ್! ಕೇವಲ 5 ರನ್​ಗಳಿಂದ ಶತಕ ಮಿಸ್. ಇದೀಗ ಶ್ರೀಲಂಕಾ ವಿರುದ್ಧ 88 ರನ್​ಗಳಿಗೆ ಔಟ್! 12 ರನ್​ಗಳಿಂದ ಶತಕ ಮಿಸ್. ಕಳೆದ ಹತ್ತೆ ಹತ್ತು ದಿನಗಳಲ್ಲಿ ಎರಡೆರಡು ಶತಕಗಳಿಂದ ವಂಚಿತರಾದ ವಿರಾಟ್ ಕೊಹ್ಲಿಯ (Virat Kohli) ನೋವಿನ ಕಥೆಯಿದು. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ಗೆಲುವಿನ ಇನ್ನಿಂಗ್ಸ್ ಆಡಿದ್ದ ವಿರಾಟ್ ತಂಡವನ್ನು ಗೆಲುವಿನ ಸನಿಹಕ್ಕೆ ಬಂದು ವಿಕೆಟ್ ಕೈಚೆಲ್ಲಿದ್ದರು. ಹೀಗಾಗಿ ಅಂದು ಕೂಡ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಅತ್ಯಧಿಕ ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟುವ ಅವಕಾಶ ಕೈತಪ್ಪಿತ್ತು. ಈಗ ಶ್ರೀಲಂಕಾ ವಿರುದ್ಧವೂ (India vs Sri Lanka) ಮೊದಲಿನಿಂದಲೂ ಅದ್ಭುತ ಬ್ಯಾಟಿಂಗ್ ಮಾಡಿದ ಕೊಹ್ಲಿ ಶತಕದಂಚಿನಲ್ಲಿ ಎಡವಿದರು. ಹೀಗಾಗಿ ಇಂದು ಸಹ ಕ್ರಿಕೆಟ್​ ದೇವರ ಶತಕಗಳ ದಾಖಲೆಯನ್ನು ಸರಿಗಟ್ಟುವ ಅವಕಾಶ ಕೊಹ್ಲಿಯ ಕೈತಪ್ಪಿತು.

12 ರನ್‌ಗಳಿಂದ ಶತಕ ವಂಚಿತ

ಗುರುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಕೊಹ್ಲಿ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದು ಸಾಧ್ಯವಾಗಲಿಲ್ಲ. ಕೊಹ್ಲಿ 12 ರನ್‌ಗಳಿಂದ ಶತಕ ವಂಚಿತರಾದರು. ಕೊಹ್ಲಿ ಆಡುತ್ತಿದ್ದ ರೀತಿಯನ್ನು ನೋಡಿದರೆ ಕೊಹ್ಲಿ, ಸಚಿನ್ ಅವರ ತವರಿನಲ್ಲೇ ಶತಕಗಳ ದಾಖಲೆಯನ್ನು ಸರಿಗಟ್ಟುತ್ತಾರೆ ಎಂದು ತೋರುತ್ತಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ದಿಲ್ಶನ್ ಮಧುಶಂಕ ಎಸೆದ 32ನೇ ಓವರ್​ನ ಮೂರನೇ ಎಸೆತದಲ್ಲಿ ಕೊಹ್ಲಿ ಔಟಾದರು.

View this post on Instagram

A post shared by ICC (@icc)

ಸ್ತಬ್ದಗೊಂಡ ಮೈದಾನ

ಮಧುಶಂಕ ಎಸೆದ ನಿಧಾನಗತಿಯ ಚೆಂಡನ್ನು ಅರ್ಥ ಮಾಡಿಕೊಳ್ಳದ ಕೊಹ್ಲಿ ಕವರ್ಸ್​ ಮೇಲೆ ಆಡುವ ಯತ್ನದಲ್ಲಿ ಪಾಥುಮ್ ನಿಸ್ಸಾಂಕಗೆ ಕ್ಯಾಚಿತ್ತು ಔಟಾದರು. ಆರಂಭದಿಂದಲೂ ಉತ್ತಮ ಲಯದಲ್ಲಿ ಕಾಣುತ್ತಿದ್ದ ಕೊಹ್ಲಿ ಅದೊಂದು ಸಣ್ಣತಪ್ಪಿನಿಂದ ವಿಕೆಟ್ ಕೈಚೆಲ್ಲಿದರು. ತಮ್ಮ ವಿಕೆಟ್ ಕಳೆದುಕೊಂಡಿದ್ದನ್ನು ಸ್ವತಃ ಕೊಹ್ಲಿಗೆ ನಂಬಲಾಗಲಿಲ್ಲ. ಹೀಗಾಗಿ ಮೈದಾನದಲ್ಲೇ ಕೊಂಚ ಸಮಯ ನಿಂತ ವಿರಾಟ್, ಭಾರದ ಮನಸಿನಿಂದ ಪೆವಿಲಿಯನತ್ತ ಹೆಜ್ಜೆಯಾಕಿದರು. ಇನ್ನೊಂದೆಡೆ ಕ್ರಿಕೆಟ್ ದೇವರ ದಾಖಲೆಯನ್ನು ಕೊಹ್ಲಿ ಈ ಪಂದ್ಯದಲ್ಲೇ ಮುರಿಯುತ್ತಾರೆ ಎಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೂ ಇದು ಶಾಕ್ ನೀಡಿದ್ದಲ್ಲದೆ, ಇಡೀ ಮೈದಾನವೇ ಒಂದು ಕ್ಷಣ ನಿಶಬ್ದವಾಯಿತು. ಇದೀಗ ಶತಕ ವಂಚಿತ ಕೊಹ್ಲಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಭಾವುಕ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಕೊಹ್ಲಿಗೂ ಸಿಕ್ಕಿತು ಜೀವದಾನ

ಈ ಪಂದ್ಯದಲ್ಲಿ ಕೊಹ್ಲಿಗೂ ಜೀವದಾನ ಸಿಕ್ಕಿತು. ಆರನೇ ಓವರ್‌ನ ಮೊದಲ ಎಸೆತದಲ್ಲಿ ದುಷ್ಮಂತ ಚಮೀರಾ ಕೊಹ್ಲಿಯ ಕ್ಯಾಚ್‌ ಕೈಬಿಟ್ಟಿದ್ದರು. ಈ ಬಾರಿಯೂ ಕೊಹ್ಲಿ ಸ್ಲೋ ಬಾಲ್​ನಲ್ಲಿ ಸಿಕ್ಕಿಬಿದ್ದಿದ್ದರು. ಆದರೆ ಚಮೀರ ಡೈವಿಂಗ್ ಮೂಲಕ ಕ್ಯಾಚ್ ಹಿಡಿಯಲು ಯತ್ನಿಸಿದರಾದರೂ ಯಶಸ್ವಿಯಾಗಲಿಲ್ಲ. ಇದಾದ ಬಳಿಕ ಶ್ರೀಲಂಕಾ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ ಕೊಹ್ಲಿ ಭರ್ಜರಿ ಇನ್ನಿಂಗ್ಸ್ ಆಡಿದರೂ ಶತಕ ವಂಚಿತರಾದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:41 pm, Thu, 2 November 23

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ