IND vs SL, ICC World Cup: ಪಂದ್ಯ ಗೆದ್ದು ಪೆವಿಲಿಯನ್​ಗೆ ಹೋಗುವಾಗ ಅಭಿಮಾನಿಗೆ ರೋಹಿತ್ ಕೊಟ್ಟ ಗಿಫ್ಟ್​ ಏನು ನೋಡಿ

IND vs SL, ICC World Cup: ಪಂದ್ಯ ಗೆದ್ದು ಪೆವಿಲಿಯನ್​ಗೆ ಹೋಗುವಾಗ ಅಭಿಮಾನಿಗೆ ರೋಹಿತ್ ಕೊಟ್ಟ ಗಿಫ್ಟ್​ ಏನು ನೋಡಿ

Vinay Bhat
|

Updated on: Nov 03, 2023 | 9:47 AM

Rohit Sharma gifted his shoe: ಪಂದ್ಯದ ನಂತರ ರೋಹಿತ್ ಶರ್ಮಾ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಂಡರು. ಇದರ ನಡುವೆ ಪೆವಿಲಿಯನ್ ಕಡೆ ತೆರಳುತ್ತಿರುವಾಗ ಗುಂಪಿನಲ್ಲಿದ್ದ ಯುವ ಕ್ರಿಕೆಟ್ ಅಭಿಮಾನಿಗೆ ತಮ್ಮ ಶೂಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಗುರುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ (India vs Sri Lanka) 302 ರನ್​ಗಳ ಅಮೋಘ ಗೆಲುವು ಕಂಡಿತು. ಕೊಹ್ಲಿ, ಗಿಲ್, ಅಯ್ಯರ್ ಅರ್ಧಶತಕ ಒಂದುಕಡೆಯಾದರೆ ಬೌಲಿಂಗ್​ನಲ್ಲಿ ಸಿರಾಜ್, ಶಮಿ ಮಾರಕ ದಾಳಿ ಸಂಘಟಿಸಿ ಲಂಕಾವನ್ನು 55 ರನ್​ಗಳಿಗೆ ಆಲೌಟ್ ಮಾಡಿದರು. ದಾಖಲೆಯ ಜಯದೊಂದಿಗೆ ಭಾರತ ತಂಡ ಇದೀಗ ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ ಸೆಮಿ ಫೈನಲ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪಂದ್ಯದ ನಂತರ ರೋಹಿತ್ ಶರ್ಮಾ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಂಡರು. ಇದರ ನಡುವೆ ಪೆವಿಲಿಯನ್ ಕಡೆ ತೆರಳುತ್ತಿರುವಾಗ ಗುಂಪಿನಲ್ಲಿದ್ದ ಯುವ ಕ್ರಿಕೆಟ್ ಅಭಿಮಾನಿಗೆ ತಮ್ಮ ಶೂಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ