ರಾಮಮಂದಿರ ಉದ್ಘಾಟನೆ: ಸೋಮವಾರ ರಜೆ ಘೋಷಿಸುವ ಬಗ್ಗೆ ಸಿದ್ದರಾಮಯ್ಯ ಸರ್ಕಾರ ಇನ್ನೂ ಯೋಚನೆ ಮಾಡಿಲ್ಲ!

|

Updated on: Jan 20, 2024 | 2:14 PM

ಕೊನೆಗೆ ಅವರು, ರಜೆ ಕೊಡುವ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ, ನೋಡ್ತೀನಿ ಅನ್ನುತ್ತಾರೆ. ಅಯೋಧ್ಯೆಗೆ ಹೋಗುವ ಬಗ್ಗೆ ಅವರನ್ನು ಕೇಳಿದಾಗ, 22 ರಂದು ಹೋಗಲ್ಲ, ಆಮೇಲೆ ಹೋಗೋದಾಗಿ ಈಗಾಗಲೇ ಹೇಳಿದ್ದರೂ ಪದೇಪದೆ ಯಾಕೆ ಕೇಳ್ತೀರಿ ಅಂತ ಸಿಡುಕುತ್ತಾರೆ.

ಬೆಂಗಳೂರು: ನಿಮಗೆ ಯಾರಾದರೂ ಪತ್ರ ಬರೆದರೆ ಅದು ಬರೆದವರಿಗೆ ಮತ್ತು ನಿಮಗೆ ಮಾತ್ರ ಗೊತ್ತಿರುತ್ತದೆ, ಹೌದು ತಾನೆ? ನೀವು ಅಥವಾ ಬರೆದವರು ಹೇಳದ ಹೊರತು ಅದು ಬೇರೆಯವರಿಗೆ ಗೊತ್ತಾಗುವ ಸಂದರ್ಭ ಉದ್ಭವಿಸದು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ (CM Siddaramaiah) ವಿಷಯದಲ್ಲಿ ಅದು ಕೊಂಚ ಭಿನ್ನ. ಜನವರಿ 22 ರಂದು ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ (Ram temple consecration ceremony) ನಿಮಿತ್ತ ರಜೆ ಘೋಷಿಸಬೇಕೆಂದು ಮನವಿ ಮಡುತ್ತಾ ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರು (Kota Srinivas Pujari ) ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ತನಗೆ ಪತ್ರ ಸಿಕ್ಕಿಲ್ಲ ಎಂಬಂತೆ ಸಿದ್ದರಾಮಯ್ಯ ಪ್ರತಿಕ್ರಿಯಿಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಪೂಜಾರಿ ಬರೆದಿರುವ ಪತ್ರದ ಸಂಗತಿ ಮಾಧ್ಯಮದವರಿಗೆ ಗೊತ್ತಾದರೂ ಸಿದ್ದರಾಮಯ್ಯನವರಿಗೆ ಗೊತ್ತಾಗದಿರಲು ಸಾಧ್ಯವೇ? ಕೊನೆಗೆ ಅವರು, ರಜೆ ಕೊಡುವ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ, ನೋಡ್ತೀನಿ ಅನ್ನುತ್ತಾರೆ. ಅಯೋಧ್ಯೆಗೆ ಹೋಗುವ ಬಗ್ಗೆ ಅವರನ್ನು ಕೇಳಿದಾಗ, 22 ರಂದು ಹೋಗಲ್ಲ, ಆಮೇಲೆ ಹೋಗೋದಾಗಿ ಈಗಾಗಲೇ ಹೇಳಿದ್ದರೂ ಪದೇಪದೆ ಯಾಕೆ ಕೇಳ್ತೀರಿ ಅಂತ ಸಿಡುಕುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ