ಕಾರ್ಣೀಕ‌ ನುಡಿದ ರಾಮಲಿಂಗೇಶ್ವರ ಸ್ವಾಮೀಜಿ; ಇಲ್ಲಿದೆ ವಿಡಿಯೋ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 09, 2024 | 3:25 PM

ದಾವಣಗೆರೆ(Davanagere) ಜಿಲ್ಲೆಯ ಚನ್ನಗಿರಿ ತಾಲೂಕಿನ ಹರನಹಳ್ಳಿ- ಕೆಂಗಾಪುರ ರಾಮಲಿಂಗೇಶ್ವರ ಸ್ವಾಮೀಜಿ ಕಾರರ್ಣೀಕ ನುಡಿದಿದ್ದಾರೆ. ಕಾರ್ಮೋಡ ಕವಿದಿತ್ತೋ, ಕೆರೆ ಕಟ್ಟಿ ತುಂಬಿ ಹರಿದಾವೋ, ಗಗನದಿ ಮುತ್ತು ಸುರಿದಾವೋ ಎಂದು ಕಾರ್ಣೀಕ‌ ನುಡಿದಿದ್ದಾರೆ.

ದಾವಣಗೆರೆ, ಮಾ.09: ದಾವಣಗೆರೆ(Davanagere) ಜಿಲ್ಲೆಯ ಚನ್ನಗಿರಿ ತಾಲೂಕಿನ ಹರನಹಳ್ಳಿ- ಕೆಂಗಾಪುರ ರಾಮಲಿಂಗೇಶ್ವರ ಸ್ವಾಮೀಜಿ ಕಾರರ್ಣೀಕ ನುಡಿದಿದ್ದಾರೆ. ಕಾರ್ಮೋಡ ಕವಿದಿತ್ತೋ, ಕೆರೆ ಕಟ್ಟಿ ತುಂಬಿ ಹರಿದಾವೋ, ಗಗನದಿ ಮುತ್ತು ಸುರಿದಾವೋ ಎಂದು ಕಾರ್ಣೀಕ‌ ನುಡಿದಿದ್ದಾರೆ. ಅಂದರೆ, ‘ಬರುವ ದಿನಗಳಲ್ಲಿ ಮಳೆ ಬೆಳೆ ಸಮೃದ್ಧವಾಗಲಿದೆ ಎಂದು ಸ್ವಾಮೀಜಿ ನುಡಿದ ಕಾರ್ಣೀಕವನ್ನ ಪರಿಣಿತರು‌ ವ್ಯಾಖ್ಯಾನಿಸಿದ್ದಾರೆ. ಶಿವರಾತ್ರಿ ಪ್ರಯುಕ್ತ ನಡೆಸುವ ಮುಳ್ಳು ಗದ್ದಿಗೆ ಉತ್ಸವದ ಮೊದಲು ಸ್ವಾಮೀಜಿ ಕಾರ್ಣೀಕ‌ ನುಡಿಯುತ್ತಾರೆ. ಇನ್ನು ಇದೇ ವೇಳೆ ಕಾಂಗ್ರೆಸ್ ಮುಖಂಡ ಉಗ್ರಪ್ಪ ಸೇರಿದಂತೆ ನೂರಾರು ಜನ ಮುಳ್ಳು ಗದ್ದಿಗೆಯಲ್ಲಿ ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ