ಬಾಣಂತಿ ಡಿಸ್ಚಾರ್ಜ್‌ ಮಾಡಲು 6 ಸಾವಿರ ರೂಪಾಯಿ ಕೇಳಿ ಕೆಲಸ ಕಳೆದುಕೊಂಡ ಇಬ್ಬರು ಡಾಕ್ಟರ್ಸ್

| Updated By: ರಮೇಶ್ ಬಿ. ಜವಳಗೇರಾ

Updated on: Nov 26, 2022 | 10:24 PM

ಬಾಣಂತಿಯನ್ನು ಡಿಸ್ಚಾರ್ಜ್‌ ಮಾಡಲು 6 ಸಾವಿರ ರೂ. ಲಂಚ ಬೇಡಿಕೆ ಇಟ್ಟಿದ್ದ ವಿಡಿಯೋ ವೈರಲ್ ಬೆನ್ನಲ್ಲೇ ಬಿಡದಿ ಆಸ್ಪತ್ರೆಯ ಇಬ್ಬರು ಡಾಕ್ಟರ್​ಗಳನ್ನು ಸಸ್ಪೆಂಡ್ ಮಾಡಲಾಗಿದೆ.

ರಾಮನಗರ: ಬಿಡದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಾಣಂತಿ ಡಿಸ್ಚಾರ್ಜ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಸೂತಿ ತಜ್ಞೆ ಡಾ ಶಶಿಕಲಾ ಸೇರಿದಂತೆ ಇಬ್ಬರನ್ನು ಅಮಾನತು ಮಾಡಲಾಗಿದೆ.

ಆರೋಗ್ಯ ಸಚಿವರೇ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರಿಗೆ ಸಂಬಳ ನೀಡುತ್ತಿಲ್ಲವೇ?

ಬಾಣಂತಿ ಡಿಸ್ಚಾರ್ಜ್‌ ಮಾಡಲು 6 ಸಾವಿರ ರೂಪಾಯಿ ಲಂಚ ಕೇಳಿದ ವಿಡಿಯೋ ವೈರಲಗ ಆಗಿತ್ತು. ಇದು ಖುದ್ದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರಿಗೂ ತಲುಪಿತ್ತು. ಇದರ ಬೆನ್ನಲ್ಲೇ DHO ಕಾಂತರಾಜು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಸೂತಿ ತಜ್ಞರಾದ ಡಾ.ಶಶಿಕಲಾ ಹಾಗೂ ಡಾ.ಐಶ್ವರ್ಯ ಎನ್ನುವರನ್ನು ಕೆಲಸದಿಂದ ಸಸ್ಪೆಂಡ್ ಮಾಡಿದ್ದಾರೆ.

Published on: Nov 26, 2022 10:04 PM