ರಾಮನಗರದಲ್ಲಿ ಕೆರೆ ಕೋಡಿ ಬಿದ್ದು ಮೀನುಗಳು ರಸ್ತೆಗೆ, ಬರಿಗೈಯಲ್ಲಿ ಮೀನು ಹಿಡಿದು ಮನೆಗೆ ಒಯ್ಯುತ್ತಿರುವ ನಿವಾಸಿಗಳು

ರಾಮನಗರದಲ್ಲಿ ಕೆರೆ ಕೋಡಿ ಬಿದ್ದು ಮೀನುಗಳು ರಸ್ತೆಗೆ, ಬರಿಗೈಯಲ್ಲಿ ಮೀನು ಹಿಡಿದು ಮನೆಗೆ ಒಯ್ಯುತ್ತಿರುವ ನಿವಾಸಿಗಳು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 29, 2022 | 4:33 PM

ರಾಮನಗರದ ಮೀನುಪ್ರಿಯ ನಿವಾಸಿಗಳಿಗೆ ಉಚಿತವಾಗಿ ಮೀನು ಸಿಗುತ್ತಿವೆ. ಜನ ತಮ್ಮ ಅದೃಷ್ಟ ಪರೀಕ್ಷಿಸಲು ರಸ್ತೆಗೆ ಬಂದಿರುವುದನ್ನು ನೀವು ಕಾಣಬಹುದು.

ರಾಮನಗರದಲ್ಲಿ ಸುರಿದ ಭಾರು ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿದ್ದರೆ ಕೆಲವರಿಗೆ ಅಂದರಿಂದ ಪ್ರಯೋಜನವೂ ಆಗುತ್ತಿದೆ. ವಿಷಯ ಏನೆಂದರೆ ಜಿಲ್ಲೆಯ ಬೋಳಪ್ಪನಹಳ್ಳಿ ಕೆರೆ (Bolappanahalli Lake) ಕೋಡಿ ಬಿದ್ದು ಕೆರೆಯ ನೀರು ಸಹ ರಸ್ತೆಗೆ ಹರಿದುಬರುತ್ತಿದೆ ಮತ್ತು ನೀರಿನೊಂದಿಗೆ ಮೀನುಗಳು (fishes) ಸಹ ಹರಿದು ಬರುತ್ತಿವೆ. ರಾಮನಗರದ ಮೀನುಪ್ರಿಯ ನಿವಾಸಿಗಳಿಗೆ (residents) ಉಚಿತವಾಗಿ ಮೀನು ಸಿಗುತ್ತಿವೆ. ಜನ ತಮ್ಮ ಅದೃಷ್ಟ ಪರೀಕ್ಷಿಸಲು ರಸ್ತೆಗೆ ಬಂದಿರುವುದನ್ನು ನೀವು ಕಾಣಬಹುದು.