Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀವು ನನ್ನ ಹಾಗೆ ಬೆಳೆಸಿದ್ದೀರಿ’; ತಂದೆ ರಮೇಶ್ ಅರವಿಂದ್ ಬಗ್ಗೆ ಮಗಳ ಮಾತು

‘ನೀವು ನನ್ನ ಹಾಗೆ ಬೆಳೆಸಿದ್ದೀರಿ’; ತಂದೆ ರಮೇಶ್ ಅರವಿಂದ್ ಬಗ್ಗೆ ಮಗಳ ಮಾತು

ರಾಜೇಶ್ ದುಗ್ಗುಮನೆ
|

Updated on:Mar 07, 2025 | 2:17 PM

ರಮೇಶ್ ಅರವಿಂದ್ ಅವರ ಮಗಳು ನಿಹಾರಿಕಾ ಅರವಿಂದ್ ಅವರ ವಿವಾಹ ಈ ಮೊದಲು ನೆರವೇರಿದೆ. ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿಲ್ಲದ ಕಾರಣ ಅವರು ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ. ಈಗ ರಮೇಶ್ ಅರವಿಂದ್ ಅವರ ಮಗಳ ವಿಡಿಯೋ ವೈರಲ್ ಆಗಿದೆ. ಜೀ ಕನ್ನಡದ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

ರಮೇಶ್ ಅರವಿಂದ್ ಹಾಗೂ ಅವರ ಮಗಳು ನಿಹಾರಿಕಾ ಒಂದೇ ವೇದಿಕೆ ಮೇಲೆ ಎದುರಾಗಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಜೀ ಕನ್ನಡದ ‘ಸರಿಗಮಪ’ ವೇದಿಕೆ. ಹೌದು, ಈ ವೀಕೆಂಡ್​ನಲ್ಲಿ ಸರಿಗಮಪ ವೇದಿಕೆ ಮೇಲೆ ರಮೇಶ್ ಹಾಗೂ ನಿಹಾರಿಕಾ ಒಂದೇ ವೇದಿಕೆ ಹಂಚಿಕೊಳ್ಳಲಿದ್ದಾರೆ. ‘ಅವಳ ಬಗ್ಗೆ ಒಂದೇ ಒಂದು ಕೆಟ್ಟಮಾತು ಈವರೆಗೆ ಕೇಳಿ ಬಂದಿಲ್ಲ’ ಎಂದು ರಮೇಶ್ ಅರವಿಂದ್ ಹೇಳಿದರು. ‘ನೀವು ನನ್ನ ಹಾಗೆ ಬೆಳೆಸಿದ್ದೀರಿ’ ಎಂದು ನಿಹಾರಿಕಾ ರಮೇಶ್ ಹೇಳಿದರು. ಈ ಕ್ಷಣ ತುಂಬಾನೇ ಭಾವುಕವಾಗಿತ್ತು. ಅದರ ಪ್ರೋಮೋನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Mar 07, 2025 08:54 AM