ಉದಾಹರಣೆ ಮೂಲಕ ಇಕ್ಕಟ್ಟಿನ ಪರಿಸ್ಥಿತಿ ವಿವರಿಸಿದ ರಮೇಶ್ ಅರವಿಂದ್
ನಟ ದರ್ಶನ್ ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾರೆ. ಆದರೆ ಹೊರಗೆ ಚಿತ್ರರಂಗ ಇದರಿಂದ ಮುಜುಗರಕ್ಕೆ ಒಳಗಾಗಿದೆ. ದರ್ಶನ್ ಪರ ನಿಲ್ಲಲೂ ಆಗದೆ, ಪೂರ್ಣವಾಗಿ ಬಿಟ್ಟುಕೊಡಲೂ ಆಗದೆ ಪರಿತಪಿಸುತ್ತಿದ್ದಾರೆ ಹಲವು ನಟ-ನಟಿಯರು. ಚಿತ್ರರಂಗದವರ ಈಗಿನ ಪರಿಸ್ಥಿತಿಯನ್ನು ನಟ ರಮೇಶ್ ಅರವಿಂದ್ ವಿರಿಸಿದ್ದು ಹೀಗೆ...
ದರ್ಶನ್ ಕೊಲೆ ಆರೋಪದಲ್ಲಿ ಜೈಲು ಸೇರಿರುವುದು ಅವರ ಕುಟುಂಬವನ್ನು ನೋವು ದೂಡಿದೆ. ಇದೇ ಸಂದರ್ಭದಲ್ಲಿ ಚಿತ್ರರಂಗವನ್ನು ಸಹ ಇಕ್ಕಟ್ಟಿಕೆ ಸಿಲುಕಿಸಿದೆ. ದರ್ಶನ್ ಜೈಲು ಸೇರಿರುವ ಕಾರಣ ಚಿತ್ರರಂಗವನ್ನು ಒಂದೇ ತಕ್ಕಡಿಯಲ್ಲಿ ತೂಗುವ ಕಾರ್ಯ ಆಗುತ್ತಿದೆ. ಇನ್ನು ನಟ-ನಟಿಯರು ದರ್ಶನ್ ಕುರಿತಾಗಿ ಎದುರಾಗುತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡಲಾಗದೆ ಪರಿತಪಿಸುತ್ತಿದ್ದಾರೆ. ದರ್ಶನ್ ಮಾಡಿರುವುದು ತಪ್ಪು ಎಂದು ಘಂಟಾಘೋಷವಾಗಿ ಹೇಳಲೂ ಆಗುತ್ತಿಲ್ಲ ಅಥವಾ ದರ್ಶನ್ ತಪ್ಪೇ ಮಾಡಿಲ್ಲ ಎಂದೂ ಹೇಳಲು ಆಗುತ್ತಿಲ್ಲ. ಅತ್ತ ದರ್ಶನ್ ಏನೋ ಯಾವುದರ ಪರಿವೆಯೂ ಇಲ್ಲದೆ ಜೈಲಿನಲ್ಲಿ ದಿನ ದೂಡುತ್ತಿದ್ದಾರೆ. ಆದರೆ ಹೊರಗಿರುವ ಅವರ ಆಪ್ತರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಬಗ್ಗೆ ನಟ ರಮೇಶ್ ಅರವಿಂದ್ ಮಾತನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ