ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್; ಮಂಡ್ಯದಲ್ಲಿ ಹೈ ಅಲರ್ಟ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 08, 2024 | 5:23 PM

ಬೆಂಗಳೂರಿನ ಕೆಫೆಯಲ್ಲಿ ಬಾಂಬ್​ ಬ್ಲಾಸ್ಟ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಮಾ.08) ಶಿವರಾತ್ರಿ ಹಬ್ಬವಾದ್ದರಿಂದ ಮಂಡ್ಯ(Mandya) ಜಿಲ್ಲೆಯ ಪ್ರಮುಖ ಶಿವನ ದೇಗುಲಗಳಲ್ಲಿ ಎರಡು ಪ್ರತ್ಯೇಕ ತಂಡಗಳಲ್ಲಿ ಬಾಂಬ್ ಪತ್ತೆ ದಳದಿಂದ ತಪಾಸಣೆ ನಡೆಸಲಾಗುತ್ತಿದೆ. ಮಹಾ ಶಿವರಾತ್ರಿ ಹಬ್ಬದ ಹಿನ್ನೆಲೆ ಶಿವನ ದೇಗುಲಗಳಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮನದ ಹಿನ್ನೆಲೆಯಲ್ಲಿ ಭದ್ರತೆ ಮತ್ತು ತೀವ್ರ ನಿಗಾ ಇಡಲಾಗಿದೆ.

ಮಂಡ್ಯ, ಮಾ.08: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯಲ್ಲಿ ಪೊಲೀಸರ ಹೈ ಅಲರ್ಟ್ ಆಗಿದ್ದಾರೆ. ಮಂಡ್ಯ(Mandya) ಜಿಲ್ಲೆಯ ಪ್ರಮುಖ ಶಿವನ ದೇಗುಲಗಳಲ್ಲಿ ಎರಡು ಪ್ರತ್ಯೇಕ ತಂಡಗಳಲ್ಲಿ ಬಾಂಬ್ ಪತ್ತೆ ದಳದಿಂದ ತಪಾಸಣೆ ನಡೆಸಲಾಗುತ್ತಿದೆ. ಮಹಾ ಶಿವರಾತ್ರಿ ಹಬ್ಬದ ಹಿನ್ನೆಲೆ ಶಿವನ ದೇಗುಲಗಳಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮನದ ಹಿನ್ನೆಲೆಯಲ್ಲಿ ಭದ್ರತೆ ಮತ್ತು ತೀವ್ರ ನಿಗಾ ಇಡಲಾಗಿದೆ. ಮಂಡ್ಯದ ಅರಕೇಶ್ವರ, ಆದಿಚುಂಚನಗಿರಿ ಕಾಲಭೈರವೇಶ್ವರ, ಹನುಮಂತನಗರದ ಆತ್ಮಲಿಂಗೇಶ್ವರ, ಮದ್ದೂರಿನ ವೈದ್ಯನಾಥೇಶ್ವರ, ಮಳವಳ್ಳಿಯ ಮತ್ತಿತಾಳೇಶ್ವರ, ಮಂಡ್ಯ ಕೊಪ್ಪಲು ಕಾವೇರಿ ಬೋರೇದೇವರು, ಹೊಳಲು ತಾಂಡವೇಶ್ವರ, ಕೆರಗೋಡು ಪಂಚಲಿಂಗೇಶ್ವರ ದೇಗುಲಗಳಲ್ಲಿ ಬಾಂಬ್ ಪತ್ತೆ ದಳದಿಂದ ದೇವಸ್ಥಾನದ ಆವರಣ ಹಾಗೂ ದೇವಸ್ಥಾನದ ಒಳಗಡೆ ಪರಿಶೀಲನೆ ನಡೆಸಲಾಗುತ್ತಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow us on