ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದೇನೆ, ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್ ಸಿಗುವ ಭರವಸೆ ಇದೆ: ಎಂ ಲಕ್ಷ್ಮಣ್, ಕೆಪಿಸಿಸಿ ವಕ್ತಾರ
ದೆಹಲಿಯಲ್ಲಿ ಇಂದು ನಡೆದ ಸಭೆಯಲ್ಲಿ 8-9 ಸೀಟುಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿರುತ್ತದೆ ಮತ್ತು ಇವತ್ತೇ ಆ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ, ಉಳಿದ ಕ್ಷೇತ್ರಗಳಿಗೆ 15 ನೇ ತಾರೀಖಿನೊಳಗೆ ಹೆಸರುಗಳು ಅಂತಿಮಗೊಳ್ಳಲಿವೆ ಎಂದು ಎಂದು ಲಕ್ಷ್ಮಣ್ ಹೇಳಿದರು.
ಮಡಿಕೇರಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಎಂ ಲಕ್ಷ್ಮಣ್ (M Laxman) ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದ (Mysuru-Kodagu Constituency) ಟಿಕೆಟ್ ತಮಗೆ ಸಿಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಕಳೆದೆರಡು ವರ್ಷಗಳಿಂದ ಕೊಡುಗು ಜಿಲ್ಲೆಯ ಉಸ್ತುವಾರಿಯಾಗಿ (Kodagu district in charge) ನಿಷ್ಠೆಯಿಂದ ದುಡಿದಿರುವುದಾಗಿ ಹೇಳಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವಲ್ಲಿ ತನ್ನ ಅಳಿಲು ಸೇವೆ ಇದೆ ಎಂದರು. ಟಿಕೆಟ್ ಸಿಕ್ಕಿದ್ದೇಯಾದರೆ ತಾನು ಇಟ್ಟುಕೊಂಡಿರುವ ವಿಶನ್ ಮತ್ತು ರಾಜ್ಯ ಸರ್ಕಾರ ನೀಡಿರುವ ಕಾರ್ಯಕ್ರಮಗಳ ಆಧಾರದಲ್ಲಿ ವೋಟು ಕೇಳುವುದಾಗಿ ಲಕ್ಷ್ಮಣ್ ಹೇಳಿದರು. ದೆಹಲಿಯಲ್ಲಿ ಇಂದು ನಡೆದ ಸಭೆಯಲ್ಲಿ 8-9 ಸೀಟುಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿರುತ್ತದೆ ಮತ್ತು ಇವತ್ತೇ ಆ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ, ಉಳಿದ ಕ್ಷೇತ್ರಗಳಿಗೆ 15 ನೇ ತಾರೀಖಿನೊಳಗೆ ಹೆಸರುಗಳು ಅಂತಿಮಗೊಳ್ಳಲಿವೆ ಎಂದು ಎಂದು ಲಕ್ಷ್ಮಣ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹೆಚ್ಸಿ ಮಹದೇವಪ್ಪರನ್ನ ಕರೆದುಕೊಂಡು ಬರ್ತಿನಿ ನೀವೂ ಚರ್ಚೆಗೆ ಬನ್ನಿ: ಪ್ರತಾಪ್ ಸಿಂಹಗೆ ಎಂ ಲಕ್ಷ್ಮಣ್ ಸವಾಲ್