ರಾಷ್ಟ್ರಪತಿಯವರಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಸುಧಾ ಮೂರ್ತಿಯವರನ್ನು ಟ್ವೀಟ್ ಮೂಲಕ ಅಭಿನಂದಿಸಿದ ಪ್ರಧಾನಿ ಮೋದಿ

ರಾಷ್ಟ್ರಪತಿಯವರಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಸುಧಾ ಮೂರ್ತಿಯವರನ್ನು ಟ್ವೀಟ್ ಮೂಲಕ ಅಭಿನಂದಿಸಿದ ಪ್ರಧಾನಿ ಮೋದಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 08, 2024 | 5:08 PM

ರಾಷ್ಟ್ರಪತಿ, ಸುಧಾ ಮೂರ್ತಿಯವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿರುವುದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವಾಗತಿಸಿ, ಸಮಾಜಕ್ಕೆ ಅವರು ನೀಡುತ್ತಿರುವ ಕಾಣಿಕೆಯನ್ನು ಕೊಂಡಾಡಿದ್ದಾರೆ. ತಮ್ಮ X ಹ್ಯಾಂಡಲ್ ಮೂಲಕ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.

ದೆಹಲಿ: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇನ್ಫೋಸಿಸ್ ಪ್ರತಿಷ್ಠಾನದ ಹಿಂದಿನ ಅಧ್ಯಕ್ಷೆ, ಉದ್ಯಮಿ, ಲೇಖಕಿ, ಶಿಕ್ಷಣ ತಜ್ಞೆ ಮತ್ತು ಸಮಾಜ ಸೇವಕಿ ಸುಧಾ ಮೂರ್ತಿಯವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿರುವುದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವಾಗತಿಸಿ, ಸಮಾಜಕ್ಕೆ ಅವರು ನೀಡುತ್ತಿರುವ ಕಾಣಿಕೆಯನ್ನು ಕೊಂಡಾಡಿದ್ದಾರೆ. ಪ್ರಧಾನಿ ಮೋದಿ ತಮ್ಮ X ಹ್ಯಾಂಡಲ್ ಮೂಲಕ ಸಂತಸ ವ್ಯಕ್ತಪಡಿಸಿದ್ದು ಮೈಕ್ರೋಬ್ಲಾಗಿಂಗ್ ಸೈಟ್ ನಲ್ಲಿ ಅವರ ಸಂದೇಶ ಕೆಳಗಿನಂತಿದೆ:

‘ಭಾರತದ ರಾಷ್ಟ್ರಪತಿಯವರು ಶ್ರೀಮತಿ ಸುಧಾ ಮೂರ್ತಿಯವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿರುವುದು ಅತೀವ ಸಂತಸ ತಂದಿದೆ. ಸಮಾಜಸೇವೆ, ಮಾನವಕಲ್ಯಾಣ ಮತ್ತು ಶಿಕ್ಷಣ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಅವರು ನೀಡಿರುವ ಕೊಡುಗೆ ಅಪಾರ ಮತ್ತು ಪ್ರೇರಣಾದಾಯಕ. ರಾಜ್ಯಸಭೆಯಲ್ಲಿ ಅವರ ಉಪಸ್ಥಿತಿಯು ನಮ್ಮ ‘ನಾರಿ ಶಕ್ತಿ’ ಕಾರ್ಯಕ್ರಮಕ್ಕೆ ಬಲವಾದ ಸಾಕ್ಷಿ ಮತ್ತು ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಮಹಿಳೆಯರ ಬಲ ಮತ್ತು ಸಾಮರ್ಥ್ಯಕ್ಕೆ ನಿದರ್ಶನವಾಗಲಿದೆ. ಅವರ ಸಂಸತ್ತಿನ ಅವಧಿ ಫಲದಾಯಕವಾಗಿರಲಿ ಎಂದು ಹಾರೈಸುತ್ತೇನೆ,’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

 

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಕ್ಕಳ ಚಾರಿತ್ರ್ಯ ರೂಪಿಸುವ ಶಿಕ್ಷಕರ ಮನಸ್ಸಲ್ಲಿ ತಾರತಮ್ಯ, ದ್ವಂದ್ವ ಇರಬಾರದು: ಸುಧಾಮೂರ್ತಿ, ಶಿಕ್ಷಣ ತಜ್ಞೆ