ಇಂಟರ್​ವಲ್ ತನಕ ಮಾತ್ರ ಕಥೆ ಕೇಳಿ ‘ಎಕ್ಸ್​ಕ್ಯೂಸ್​ ಮಿ’ ಸಿನಿಮಾ ಒಪ್ಪಿಕೊಂಡಿದ್ದ ರಮ್ಯಾ

|

Updated on: Mar 06, 2025 | 5:12 PM

ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ರಮ್ಯಾ ದಿವ್ಯ ಸ್ಪಂದನಾ ಅವರು ಭಾಗಿ ಆಗಿದ್ದಾರೆ. ಅವರು ಸಂವಾದದಲ್ಲಿ ಪಾಲ್ಗೊಂಡು ತಮ್ಮ ವೃತ್ತಿಜೀವನದ ಕೆಲವು ಇಂಟರೆಸ್ಟಿಂಗ್ ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ಮೊದಲ ಸಿನಿಮಾ (ಅಭಿ) ಮಾಡಿದಾಗ ರಮ್ಯಾ ಅವರಿಗೆ ಕಥೆ ಏನೆಂಬುದು ಗೊತ್ತಿರಲಿಲ್ಲವಂತೆ. ಆದರೆ ಎರಡನೇ ಸಿನಿಮಾದ (ಎಕ್ಸ್​ಜ್ಯೂಸ್​ ಮಿ) ಸ್ಕ್ರಿಪ್ಟ್ ಕೇಳಿದಾಗ ಡೈರೆಕ್ಟರ್ ಪ್ರೇಮ್ ಕೇವಲ ಇಂಟರ್​ವಲ್ ತನಕ ಮಾತ್ರ ಹೇಳಿದ್ದರು. ಆ ಘಟನೆಯನ್ನು ರಮ್ಯಾ ನೆನಪಿಸಿಕೊಂಡಿದ್ದಾರೆ.

ನಟಿ ರಮ್ಯಾ (Ramya) ಅವರು ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಭಾಗಿ ಆಗಿದ್ದಾರೆ. ಸಂವಾದದಲ್ಲಿ ಪಾಲ್ಗೊಂಡ ಅವರು ತಮ್ಮ ವೃತ್ತಿಜೀವನದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಮೊದಲ ಸಿನಿಮಾ ‘ಅಭಿ’ ಮಾಡಿದಾಗ ರಮ್ಯಾಗೆ ಕಥೆ ಏನೆಂಬುದೇ ಗೊತ್ತಿರಲಿಲ್ಲ. ಆದರೆ 2ನೇ ಸಿನಿಮಾದ (ಎಕ್ಸ್​ಜ್ಯೂಸ್​ ಮಿ) ಸ್ಕ್ರಿಪ್ಟ್ ಕೇಳಿದಾಗ ನಿರ್ದೇಶಕ ಪ್ರೇಮ್ ಅವರು ಇಂಟರ್​ವಲ್ ತನಕ ಮಾತ್ರ ಹೇಳಿದ್ದರು. ಆ ಘಟನೆಯನ್ನು ಫಿಲ್ಮ್​ ಫೆಸ್ಟಿವಲ್​ನಲ್ಲಿ ರಮ್ಯಾ ಅವರು ನೆನಪಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.