‘ರಂಗಸಮುದ್ರ’ ಟ್ರೈಲರ್ ಬಿಡುಗಡೆ, ಅಪ್ಪು ನಟಿಸಬೇಕಿದ್ದ ಸಿನಿಮಾ ಇದು
Rangasamudra: ಪುನೀತ್ ರಾಜ್ಕುಮಾರ್ ನಟಿಸಬೇಕಿದ್ದ ‘ರಂಗಸಮುದ್ರ’ ಕನ್ನಡ ಸಿನಿಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಗಿದೆ.
ಕನ್ನಡದ ‘ರಂಗಸಮುದ್ರ’ (Rangasamudra) ಸಿನಿಮಾದ ಟ್ರೈಲರ್ (Trailer) ಅನ್ನು ಇಂದು (ಜನವರಿ 02) ರಾಘವೇಂದ್ರ ರಾಜ್ಕುಮಾರ್, ರಂಗಾಯಣ ರಘು ಇನ್ನಿತರೆ ಗಣ್ಯರು, ಸಿನಿಮಾ ಸೆಲೆಬ್ರಿಟಿಗಳು ಬಿಡುಗಡೆ ಮಾಡಿದರು. ಈ ಸಿನಿಮಾದಲ್ಲಿ ನಟ ಪುನೀತ್ ರಾಜ್ಕುಮಾರ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಬೇಕಿತ್ತು, ಕತೆ ಕೇಳಿ ಒಪ್ಪಿಗೆಯನ್ನೂ ನೀಡಿದ್ದರು. ಆದರೆ ಅವರ ಅಗಲಿಕೆಯಿಂದ ಅದು ಸಾಧ್ಯವಾಗಲಿಲ್ಲ. ಅವರ ಬದಲಿಗೆ ರಾಘವೇಂದ್ರ ರಾಜ್ಕುಮಾರ್ ಅವರು ಸಿನಿಮಾದಲ್ಲಿ ನಟಿಸಿದ್ದಾರೆ. ಸಾಮಾಜಿಕ ವಿಷಯವನ್ನು ಇರಿಸಿಕೊಂಡು ಮಾಡಿರುವ ಸಿನಿಮಾ ಇದಾಗಿದ್ದು, ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಹಾಡೊಂದನ್ನು ಹಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 02, 2024 10:00 PM