AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಟೇರ’ ಟ್ರೈಲರ್ ಬಿಡುಗಡೆ: ಧಣಿಗಳ ವಿರುದ್ಧ ಬಂಡಾಯದ ಕತೆ

Katera Trailer: ದರ್ಶನ್ ನಟನೆಯ ‘ಕಾಟೇರ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ದರ್ಶನ್​ರ ಮಾಸ್ ಅವತಾರ, ಹಳ್ಳಿಗಾಡಿನ ಹಿನ್ನೆಲೆಯ ಹೋರಾಟದ ಕತೆ ಗಮನ ಸೆಳೆಯುತ್ತಿದೆ.

‘ಕಾಟೇರ’ ಟ್ರೈಲರ್ ಬಿಡುಗಡೆ: ಧಣಿಗಳ ವಿರುದ್ಧ ಬಂಡಾಯದ ಕತೆ
ಕಾಟೇರ
Follow us
ಮಂಜುನಾಥ ಸಿ.
|

Updated on: Dec 16, 2023 | 10:32 PM

ದರ್ಶನ್ (Darshan) ನಟನೆಯ ‘ಕಾಟೇರ’ (Katera) ಸಿನಿಮಾದ ಟ್ರೈಲರ್ ಬಿಡುಗಡೆ ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ, ನಟ ದರ್ಶನ್ ಸೇರಿದಂತೆ ‘ಕಾಟೇರ’ ಸಿನಿಮಾದ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಯೂಟ್ಯೂಬ್​ನಲ್ಲಿ ‘ಕಾಟೇರ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ದರ್ಶನ್ ಮಾಸ್ ಇಮೇಜಿಗೆ ತಕ್ಕಂತೆ ಪಕ್ಕಾ ಆಕ್ಷನ್ ಕತೆಯನ್ನು ಹಳ್ಳಿಯ ಹಿನ್ನೆಲೆಯಲ್ಲಿ ತೆರೆಗೆ ತಂದಿರುವ ಭರವಸೆಯನ್ನು ಟ್ರೈಲರ್ ಮೂಡಿಸುತ್ತಿದೆ.

ಹಳ್ಳಿಯಲ್ಲೊಬ್ಬ ಧಣಿ, ಅದೇ ಹಳ್ಳಿಯ ಕುಲುಮೆಯಲ್ಲಿ ಕಾಯಕ ಮಾಡುವ ಗಟ್ಟಿಮುಟ್ಟು ಯುವಕ. ಧಣಿಯ ದಬ್ಬಾಳಿಕೆ ವಿರುದ್ಧ ಸಿಡಿದೇಳುವ ಯುವಕನ ಕತೆ ‘ಕಾಟೇರ’ ಎಂಬಂತೆ ಟ್ರೈಲರ್ ನೋಡಿದರೆ ಅನ್ನಿಸುತ್ತದೆ. ಆದರೆ ಇದು ಮಾತ್ರವೇ ಅಲ್ಲದೆ ಇನ್ನೂ ಕೆಲವು ಅಂಶಗಳು ಸಿನಿಮಾದಲ್ಲಿ ಇದ್ದಂತಿದೆ. ಸಿನಿಮಾದಲ್ಲಿ ದೇವರು, ದೇವರಿಗಾಗಿ ಹಳ್ಳಿಗಳ ನಡುವೆ ಕಾದಾಟದ ಕತೆ ಇದೆ. ರೈತರ ಸಂಕಷ್ಟಗಳ ಬಗ್ಗೆ ಸಂದೇಶವಿದ್ದಂತಿದೆ. ಜೊತೆಗೆ ಕುಟುಂಬದ ಭಾವನಾತ್ಮಕ ಸನ್ನಿವೇಶಗಳು ಇವೆ.

ಇದೀಗ ಬಿಡುಗಡೆ ಆಗಿರುವ ಟ್ರೈಲರ್​ನಲ್ಲಿ ದರ್ಶನ್ ಬೇರೆ-ಬೇರೆ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಮಾಯಕ ಯುವಕನಾಗಿ, ಅನ್ಯಾಯದ ವಿರುದ್ಧ ಸಿಡಿದೇಳುವ ವ್ಯಕ್ತಿಯಾಗಿ, ಪ್ರೀತಿಸಿದವರಿಗಾಗಿ ನೋವು ನುಂಗುವ ಕರ್ಣನಾಗಿ, ಪ್ರೀತಿಸುವ ರೊಮ್ಯಾಂಟಿಕ್ ಹುಡುಗನಾಗಿ, ರೈತರಲ್ಲಿ ಸ್ಪೂರ್ತಿ ತುಂಬುವ ಸ್ಪೂರ್ತಿಯ ಸೆಲೆಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಜೈಲಿನಿಂದ ಬರುತ್ತಿರುವ ಮಾಜಿ ಖೈದಿಯಾಗಿ, ಮಾರಣ ಹೋಮ ಮಾಡುವ ಭೀಬತ್ಸ ದಾಂಡಿಗನಾಗಿಯೂ ದರ್ಶನ್ ಕಾಣುತ್ತಾರೆ.

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ದರ್ಶನ್-ಸಿದ್ದರಾಮಯ್ಯ ಹವಾ: ‘ಕಾಟೇರ’ ಟ್ರೈಲರ್ ಲಾಂಚ್ ಲೈವ್ ಇಲ್ಲಿ ನೋಡಿ

ಟ್ರೈಲರ್​ನಲ್ಲಿ ದರ್ಶನ್ ಹೊರತಾಗಿ ನಾಯಕಿ ರಾಧನಾ, ಶ್ರುತಿ, ಕುಮಾರ್ ಗೋವಿಂದ್ ಹಾಗೂ ಜಗಪತಿ ಬಾಬು ಅವರು ಸಖತ್ ಗಮನ ಸೆಳೆಯುತ್ತಾರೆ. ಟ್ರೈಲರ್​ನಲ್ಲಿ ಹಾಡುಗಳ ತುಣುಗಳು ಸಹ ಇಣುಕಿದ್ದು, ಸುಂದರವಾದ ತಾಣಗಳಲ್ಲಿ ಹಾಡುಗಳನ್ನು ಚಿತ್ರೀಕರಿಸಿರುವುದು ಕಾಣುತ್ತಿದೆ. ಸಂಗೀತವೂ ಗಮನ ಸೆಳೆಯುತ್ತಿದೆ. ದೃಶ್ಯಗಳ ಗುಣಮಟ್ಟವೂ ಸಹ ಚೆನ್ನಾಗಿ ಕಾಣುತ್ತಿದೆ.

‘ಕಾಟೇರ’ ಸಿನಿಮಾವು ಡಿಸೆಂಬರ್ 29ರಂದು ಬಿಡುಗಡೆ ಆಗುತ್ತಿದೆ. ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ರಾಕ್​ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಕುಮಾರ್ ಗೋವಿಂದ್, ಶ್ರುತಿ, ಜಗಪತಿ ಬಾಬು ಸೇರಿದಂತೆ ಇನ್ನೂ ಹಲವು ಹಿರಿಯ ನಟರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ