ತಂಡಕ್ಕೆ ಚಿಯರ್ ಅಪ್ ಮಾಡಲು ಹುಬ್ಬಳ್ಳಿಗೆ ಬಂದ ಜಮ್ಮು-ಕಾಶ್ಮೀರ ಸಿಎಂ, ಹೇಳಿದ್ದೇನು?

Edited By:

Updated on: Feb 27, 2026 | 9:08 PM

ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯವನ್ನು ವೀಕ್ಷಿಸಲು ಜಮ್ಮು ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಜೆಕೆ ತಂಡ ಬೃಹತ್ ಮುನ್ನಡೆ ಸಾಧಿಸಿ ಚೊಚ್ಚಲ ರಣಜಿ ಪ್ರಶಸ್ತಿ ಗೆಲ್ಲುವ ಸನಿಹದಲ್ಲಿದೆ. ಹೀಗಾಗಿ ತಂಡಕ್ಕೆ ಚಿಯರ್ ಅಪ್ ಮಾಡಲು ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ಜಮ್ಮು ಕಾಶ್ಮೀರದಿಂದ ಹುಬ್ಬಳ್ಳಿಗೆ ಬಂದಿಳಿದ್ದು, ನಾಳೆ (ಫೆಬ್ರವರಿ 28) ಕೊನೆ ದಿನದ ಆಟವನ್ನು ವೀಕ್ಷಿಸಿ ತಂಡಕ್ಕೆ ಚೇರಪ್ ಮಾಡಲಿದ್ದಾರೆ.

ಹುಬ್ಬಳ್ಳಿ, (ಫೆಬ್ರವರಿ 27): ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ (Jammu Kashmir )ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ (Ranji Trophy Final) ಪಂದ್ಯವನ್ನು ವೀಕ್ಷಿಸಲು ಜಮ್ಮು ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ  (Jammu Kashmir CM Omar Abdullah) ಹುಬ್ಬಳ್ಳಿಗೆ (Hubballi) ಆಗಮಿಸಿದ್ದಾರೆ. ಜೆಕೆ ತಂಡ ಬೃಹತ್ ಮುನ್ನಡೆ ಸಾಧಿಸಿ ಚೊಚ್ಚಲ ರಣಜಿ ಪ್ರಶಸ್ತಿ ಗೆಲ್ಲುವ ಸನಿಹದಲ್ಲಿದೆ. ಹೀಗಾಗಿ ತಂಡಕ್ಕೆ ಚಿಯರ್ ಅಪ್ ಮಾಡಲು ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ಜಮ್ಮು ಕಾಶ್ಮೀರದಿಂದ ಹುಬ್ಬಳ್ಳಿಗೆ ಬಂದಿಳಿದ್ದು, ನಾಳೆ (ಫೆಬ್ರವರಿ 28) ಕೊನೆ ದಿನದ ಆಟವನ್ನು ವೀಕ್ಷಿಸಿ ತಂಡಕ್ಕೆ ಚೇರಪ್ ಮಾಡಲಿದ್ದಾರೆ.

ಇನ್ನು ಇಂದು(ಫೆಬ್ರವರಿ 27) ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿಎಂ ಓಮರ್ ಅಬ್ದುಲ್ಲಾ ಮಾಧ್ಯಮಗಳ ಜೊತೆ ಮಾತನಾಡಿದ್ದು, ನಮ್ಮ ತಂಡ ಮೊದಲ ಬಾರಿಗೆ ರಣಜಿ ಗೆಲ್ಲುವ ಹೊಸ್ತಿಲಲ್ಲಿದೆ. ನಮ್ಮ ತಂಡವನ್ನು ಪ್ರೋತ್ಸಾಹಿಸಲು ಹುಬ್ಬಳ್ಳಿಗೆ ಬಂದಿದ್ದೇನೆ. ಜಮ್ಮು-ಕಾಶ್ಮೀರ ತಂಡ ಈ ಹಂತಕ್ಕೆ ಬರಲ್ಲ ಅನ್ನುತ್ತಿದ್ದರು. ಆದ್ರೆ, ನಮ್ಮ ಆಟಗಾರರು ಉತ್ತಮವಾಗಿ ಆಡಿ ತೋರಿಸಿದ್ದಾರೆ. ಫೈನಲ್ ನಲ್ಲಿಯೂ ಉತ್ತಮ ಪ್ರದರ್ಶನವನ್ನ ನೀಡುತ್ತಿದ್ದಾರೆ. ಜಮ್ಮು-ಕಾಶ್ಮೀರದಲ್ಲೂ ಒಳ್ಳೇ ಕ್ರಿಕೆಟ್ ಆಟಗಾರರು ಇದ್ದಾರೆ. ಇದಕ್ಕೆ ರಣಜಿಯಲ್ಲಿ ತೋರಿದ ಪ್ರದರ್ಶನವೇ ಸಾಕ್ಷಿಯಾಗಿದ್ದು, ನಾವು ಖಂಡಿತವಾಗಿ ಟ್ರೋಫಿ ತೆಗೆದುಕೊಂಡು ಹೋಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನು ಓದಿ: Ranji Trophy Final: ತವರಿನಲ್ಲಿ ಎಡವಿದ ಕರ್ನಾಟಕ; ಚಾಂಪಿಯನ್ ಪಟ್ಟದತ್ತ ಜಮ್ಮುಕಾಶ್ಮೀರ

Follow Us