ಆಲಿಬಾಗ್ನಲ್ಲಿ ಬೃಹತ್ ಮನೆಯನ್ನು ಖರೀದಿಸಿದ ದೀಪಿಕಾ- ರಣವೀರ್; ಅದರ ಬೆಲೆ ಎಷ್ಟು ಗೊತ್ತಾ?
Ranveer Singh and Deepika Padukone: ರಣವೀರ್ ಹಾಗೂ ದೀಪಿಕಾ ಪಡುಕೋಣೆ ಜೋಡಿ ಆಲಿಬಾಗ್ನಲ್ಲಿ ಹೊಸ ಮನೆ ಖರೀದಿಸಿದೆ. ಈ ಕುರಿತ ವಿಡಿಯೊ ವರದಿ ಇಲ್ಲಿದೆ.
ಬಾಲಿವುಡ್ನ ಖ್ಯಾತ ತಾರಾ ಜೋಡಿಗಳಲ್ಲಿ ಒಂದಾಗಿರುವ ರಣವೀರ್ ಸಿಂಗ್(Ranveer Singh) ಮತ್ತು ದೀಪಿಕಾ ಪಡುಕೋಣೆ (Deepika Padukone) ಜೋಡಿ ಆಲಿಬಾಗ್ನಲ್ಲಿ(Alibaug) ಹೊಸ ಬಂಗಲೆಯೊಂದನ್ನು ಖರೀದಿಸಿದೆ. ಮನಿಕಂಟ್ರೋಲ್ ವರದಿ ಮಾಡಿರುವ ಪ್ರಕಾರ, ಬಂಗಲೆಯು ಸುಮಾರು 2.25 ಎಕರೆ ವಿಸ್ತೀರ್ಣದಲ್ಲಿದೆ. ಇದು 5 BHK ಮನೆಯಾಗಿದ್ದು, ಎರಡು ಅಂತಸ್ತನ್ನು ಹೊಂದಿದೆ. ಖ್ಯಾತ ಕಿಹಿಮ್ ಬೀಚ್ಗೆ ಕೇವಲ ಹತ್ತು ನಿಮಿಷ ದೂರದಲ್ಲಿ ಈ ಮನೆಯಿದೆ ಎಂದು ವರದಿಯಾಗಿದೆ. ಈ ಏರಿಯಾವು ಕೋಟ್ಯಾಧಿಪತಿಗಳ ಮನೆಗಾಗಿ ಪ್ರಸಿದ್ಧಿ ಪಡೆದಿದೆ. ಖ್ಯಾತ ಬಾಲಿವುಡ್ ತಾರೆಯರು, ಉದ್ಯಮಿಗಳು ಇಲ್ಲಿ ಮನೆಯನ್ನು ಹೊಂದಿದ್ದಾರೆ. ಮುಂಬೈಗೆ ಈ ಸ್ಥಳ ಸುಮಾರು 45 ನಿಮಿಷಗಳ ದೂರದಲ್ಲಿದೆ. ಈ ಮನೆಗೆ ಬರೋಬ್ಬರಿ 22 ಕೋಟಿ ನೀಡಿದ್ದಾರೆ ದೀಪಿಕಾ- ರಣವೀರ್ ಜೋಡಿ.
ರಣವೀರ್ ಹಾಗೂ ದೀಪಿಕಾ ಈಗಾಗಲೇ ಮುಂಬೈಯಲ್ಲಿ 4 ಬಿಎಚ್ಕೆ ಫ್ಲಾಟನ್ನು ಹೊಂದಿದ್ದಾರೆ. ಅದು ಪ್ರಭಾದೇವಿ ಏರಿಯಾದಲ್ಲಿದೆ. ಕಳೆದ ತಿಂಗಳು ದೀಪಿಕಾ ಬೆಂಗಳೂರಿನಲ್ಲಿ ಸರ್ವೀಸ್ ಅಪಾರ್ಟ್ಮೆಂಟ್ ಖರೀದಿಸಿದ್ದರು. ಈಗ ಖರೀದಿಸಲಾಗಿರುವ ಹೊಸ ಮನೆಯ ಸುತ್ತಮುತ್ತ ತೆಂಗಿನ ತೋಟಗಳೂ ಇವೆ ಎನ್ನುತ್ತವೆ ವರದಿಗಳು. ವಿಡಿಯೊಗೆ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ:
ಪ್ರೇಮಲೋಕ ಸೃಷ್ಟಿಸಿದ ರವಿಚಂದ್ರನ್ಗೆ ಕಾಡಿತ್ತು ಏಕಾಂಗಿತನ? ಕ್ರೇಜಿ ಸ್ಟಾರ್ ಬಿಚ್ಚು ಮಾತು
ಮಚ್ಚು ಹಿಡಿದ ಶ್ರೇಯಸ್ಗೆ ಆಲ್ ದಿ ಬೆಸ್ಟ್ ಹೇಳಿದ ಉಪೇಂದ್ರ
(Ranveer Singh and Deepika Padukone buys a new in Alibaug)