ರಣವೀರ್ ಸಿಂಗ್ ದೈವಕ್ಕೆ ಅವಮಾನ ಮಾಡಿದ ಪ್ರಕರಣ ಇತ್ಯರ್ಥ; ಷರತ್ತುಗಳೇನು?
ಚಾವುಂಡಿ ದೈವಕ್ಕೆ ರಣವೀರ್ ಸಿಂಗ್ ಅವಮಾನ ಮಾಡಿದ ಪ್ರಕರಣ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈಗ ಪ್ರಕರಣ ಅಂತ್ಯವಾಗಿದೆ. ಈ ಪ್ರಕರಣದ ಇತ್ಯರ್ಥದ ಬಗ್ಗೆ ವಕೀಲರು ಮಾತನಾಡಿದ್ದರು. ಕ್ಷಮೆಯನ್ನು ಯಾಕೆ ಒಪ್ಪಲಾಯಿತು ಎಂಬ ಬಗ್ಗೆಯೂ ಅವರು ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಚಾವುಂಡಿ ದೈವಕ್ಕೆ ರಣವೀರ್ ಸಿಂಗ್ ಅವಮಾನ ಮಾಡಿದ ಪ್ರಕರಣ ಕೊನೆಗೂ ಇತ್ಯರ್ಥವಾಗಿದೆ. ಈ ಪ್ರಕರಣದಲ್ಲಿ ರಣವೀರ್ ಕ್ಷಮೆಯಾಚನೆಯನ್ನು ವಕೀಲರು ಒಪ್ಪಿಕೊಂಡಿದ್ದಾರೆ. ಅವರು ಶೀಘ್ರದಲ್ಲೇ ದೇವಾಲಯಕ್ಕೆ ಭೇಟಿ ನೀಡಿ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ. ಎಲ್ಲಾ ತಪ್ಪಿಗೂ ಕ್ಷಮೆ ಇದೆ ಎಂದು ವಕೀಲರು ಅಭಿಪ್ರಾಯಪಟ್ಟಿದ್ದಾರೆ. ದೇವಸ್ಥಾನ ಭೇಟಿಗೆ ಭದ್ರತೆಯ ಸಮಸ್ಯೆ ಆಗಬಹುದು ಎಂದು ರಣವೀರ್ ಸಿಂಗ್ ಹೇಳಿದ್ದರಂತೆ. ಆದರೆ, ಕರ್ನಾಟಕ ಪೊಲೀಸರು ಇದನ್ನು ನೋಡಿಕೊಳ್ಳುತ್ತಾರೆ ಎಂಬ ಭರವಸೆ ನೀಡಿರುವುದಾಗಿ ವಕೀಲರು ಹೇಳಿದ್ದಾರೆ. ದೇವಸ್ಥಾನಕ್ಕೆ ಬಂದು ಶೀಘ್ರವೇ ಕ್ಷಮೆ ಕೇಳಬೇಕು ಎಂಬ ಷರತ್ತು ಮಾತ್ರ ಹಾಕಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Apr 25, 2026 01:27 PM
Loading...
Unable to load recommendations.
Follow Us
