ದಾರಿಯುದ್ಧಕ್ಕೂ ಯುವತಿಯ ಮೈಮುಟ್ಟಿ ಅಸಭ್ಯ ವರ್ತನೆ: ರಾಪಿಡೋ ಬೈಕ್ ಚಾಲಕ ಮೊಹಮ್ಮದ್ ಖಾಜಾ ಬಂಧನ
ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ರಾಪಿಡೋ ಬೈಕ್ ಚಾಲಕ ಮೊಹಮ್ಮದ್ ಖಾಜಾ ಎಂಬಾತನನ್ನು ಬೆಂಗಳೂರಿನ ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ಬಿಟಿಎಂ ಲೇಔಟ್‌ನಿಂದ ಇಂದಿರಾನಗರಕ್ಕೆ ತೆರಳುತ್ತಿದ್ದಾಗ, ಬೈಕ್‌ನಲ್ಲಿ ದಾರಿಯುದ್ದಕ್ಕೂ ಅಸಭ್ಯವಾಗಿ ವರ್ತಿಸಿದ ಕುರಿತು ಸಂತ್ರಸ್ತೆ ಯುವತಿ ದೂರು ನೀಡಿದ್ದರು. ಇದರ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು, ಮಾರ್ಚ್ 31: ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ರಾಪಿಡೋ ಬೈಕ್ ಚಾಲಕ ಮೊಹಮ್ಮದ್ ಖಾಜಾ ಎಂಬಾತನನ್ನು ಬೆಂಗಳೂರಿನ ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ಯುವತಿಯೊಬ್ಬರು ಬಿಟಿಎಂ ಲೇಔಟ್‌ನಿಂದ ಇಂದಿರಾನಗರಕ್ಕೆ ತೆರಳಲು ರಾಪಿಡೋ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದರು. ಪ್ರಯಾಣದ ಸಂದರ್ಭದಲ್ಲಿ, ಚಾಲಕ ಮೊಹಮ್ಮದ್ ಖಾಜಾ ದಾರಿಯುದ್ದಕ್ಕೂ ಯುವತಿಯ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವರ್ತನೆಯಿಂದ ಅಸಮಾಧಾನಗೊಂಡ ಯುವತಿ ಇಂದಿರಾನಗರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾದ ಇಂದಿರಾನಗರ ಪೊಲೀಸರು, ರಾಪಿಡೋ ಚಾಲಕ ಮೊಹಮ್ಮದ್ ಖಾಜಾನನ್ನು ಅರೆಸ್ಟ್ ಮಾಡಿದ್ದಾರೆ.
Follow Us
Latest Videos
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್ ಸ್ಪೈಡಿ ಕ್ಯಾಚ್ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್

