ಯುವತಿ ಮೇಲೆ ಹಲ್ಲೆ ಮಾಡಿ ರ‍್ಯಾಪಿಡೋ ಚಾಲಕ ರೈಡರ್ ಏನು ಹೇಳುತ್ತಾನೆ ಗೊತ್ತಾ? ನೀವೇ ಕೇಳಿಸಿಕೊಳ್ಳಿ

Updated on: Jun 16, 2025 | 5:20 PM

ಯುವತಿಯ ಮೇಲೆ ರ‍್ಯಾಪಿಡೋ ರೈಡರ್ ಸುಹಾಸ ಹಲ್ಲೆ ಮಾಡಿರುವ ವಿಡಿಯೋವನ್ನು ಸಾಕಷ್ಟು ಜನ ನೋಡಿದ್ದಾರೆ. ಅವನ ಏಟಿನ ರಭಸಕ್ಕೆ ಯುವತಿ ರಸ್ತೆ ಮೇಲೆ ಹೋಗಿ ಬೀಳುತ್ತಾರೆ. ಸುಹಾಸ ಓದಿಕೊಂಡಿದ್ದಾನೆ ಅಥವಾ ವ್ಯಾಸಂಗ ಮಾಡುತ್ತಿದ್ದಾನೆ. ಅವನು ಇಂಗ್ಲಿಷ್​​ನಲ್ಲಿ ಮಾತಾಡಿದನೆಂಬ ಕಾರಣಕ್ಕೆ ಯಾರಿಗೂ ಸಿಟ್ಟು ಬರಲ್ಲ, ಬೆಂಗಳೂರಲ್ಲಿ ಕಮ್ಯುನಿಕೇಶನ್ ಭಾಷೆಯೇ ಇಂಗ್ಲಿಷ್ ಆಗಿ ಬಹಳ ಸಮಯವಾಗಿದೆ. ಸುಹಾಸ್ ತನ್ನ ಕೃತ್ಯವನ್ನು ಡಿಫೆಂಡ್ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ.

ಬೆಂಗಳೂರು, ಜೂನ್ 16: ಯುವತಿಯೊಬ್ಬರ ಮೇಲೆ ರ‍್ಯಾಪಿಡೋ ರೈಡರ್​  ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹಲ್ಲೆ ಮಾಡಿದ ಸುಹಾಸ್ (Suhas) ಮಾಧ್ಯಮಗಳಿಗೆ ಹೇಳಿಕೆಯೊಂದನ್ನು ನೀಡಿ, ತನ್ನದೇನೂ ತಪ್ಪಿಲ್ಲ, ಯುವತಿಯೇ ತನ್ನ ಮೇಲೆ ಕೈ ಮಾಡಿ, ಶರ್ಟ್ ಹಿಡಿದು ಎಳೆದರು ಎನ್ನುತ್ತಾನೆ. ನಂತರ ಅವನು ಯುವತಿಯನ್ನು ಹಿಂಬಾಲಿಸಿಕೊಡು ಹೋಗಿ ಅವರು ಕೆಲಸ ಮಾಡುವ ಸ್ಥಳದಲ್ಲಿದ್ದ ಸ್ಟೋರ್ ಕೀಪರ್ ಗೆ ಬಳಿ ಕಂಪ್ಲೇಂಟ್ ಕೂಡ ರೇಜ್ ಮಾಡಿದ್ದಾನೆ. ಅವರು ಆಗಾಗ ಸೈಕೋ ಥರ ಆಡ್ತಾರೆ ಎಂದು ಸ್ಟೋರ್ ಕೀಪರ್ ಹೇಳಿದರು ಎಂದು ರ‍್ಯಾಪಿಡೋ ಚಾಲಕ ಹೇಳುತ್ತಾನೆ. ಅವನೇನೆ ಹೇಳಿದರೂ ಒಬ್ಬ ಮಹಿಳೆ ಮೇಲೆ ಕೈ ಮಾಡಿದ್ದು ತಪ್ಪು, ರ‍್ಯಾಪಿಡೋ ರೈಡರ್​ಗಳಿಗೆ ಬಗೆಯ ಬಗೆಯ ಗ್ರಾಹಕರು ಸಿಗುತ್ತಾರೆ, ಎಲ್ಲರ ವರ್ತನೆ ಒಂದೇ ರೀತಿಯಾಗಿರಬೇಕು ಅಂತೇನಿಲ್ಲ.

ಇದನ್ನೂ ಓದಿ:    Bengaluru: ಬೈಕ್​ ಟ್ಯಾಕ್ಸಿ ರೈಡರ್​ಗೆ ಆಟೋ ಚಾಲಕನಿಂದ ಕಿರುಕುಳ: ವಿಡಿಯೋ ವೈರಲ್​

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ